ಅಮೇರಿಕದ ಟೆಸ್ಲಾ ಕಾರು ಇನ್ಮುಂದೆ ಭಾರತದ ರಸ್ತೆಗಳಲ್ಲಿ ಓಡಾಟ ಶುರು ಮಾಡಲಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕಲ್ ಕಾರು ತಯಾರಿಕಾ ಕಂಪೆನಿ ಭಾರತಕ್ಕೆ ಕಾಲಿಡುತ್ತಿರುವುದು, ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.  

ಕ್ಯಾಲಿಫೋರ್ನಿಯಾ(ನ.05): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಇದೀಗ ಭಾರತಕ್ಕೆ ಕಾಲಿಡುತ್ತಿದೆ. 2019ರಲ್ಲಿ ಟೆಸ್ಲಾ ಮೋಟಾರ್ಸ್ ಭಾರತದಲ್ಲಿ ಕಾರ್ಯಆರಂಭಿಸಲಿದೆ. ಈ ಮೂಲಕ ಎಲೆಕ್ಟ್ರಿಕಲ್ ಕಾರಿನಲ್ಲಿ ಹೊಸ ಶಕೆ ಆರಂಭವಾಗಲಿದೆ.

Scroll to load tweet…

ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಮಾರಾಟಕ್ಕೆ ಮುಂದಾಗಿದೆ. ಈ ಕುರಿತು ಕಂಪೆನಿ ಸಿಇಓ ಎಲೆನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. 2020ರ ವೇಳೆಗೆ ಯುರೋಪ್, ಚೀನಾ ಹಾಗೂ ಜಪಾನ್ ದೇಶಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.

Scroll to load tweet…

ಎಲೆಕ್ಟ್ರಿಕ್ ಕಾರು ಬ್ಯಾಟರಿ ತಯಾರಿಕೆಯಲ್ಲಿ ವಿಶ್ವದ ಶೇಕಡಾಾ 60 ರಷ್ಟು ಪಾಲು ಟೆಸ್ಲಾ ಹೊಂದಿದೆ. ಲಕ್ಸುರಿ ಕಾರು, ಆಕರ್ಷಕ ವಿನ್ಯಾಸ ಹೊಂದಿರುವ ಟೆಸ್ಲಾ ಕಾರು ಭಾರತದ ಕಾರು ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.