ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!
ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾಗಿರೋ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಈ ಕುರಿತು ಕಂಪನಿ ಸಿಇಓ ಹೇಳಿದ್ದೇನು? ಇಲ್ಲಿದೆ ವಿವರ.
ನ್ಯೂಯಾರ್ಕ್(ಮಾ.17): ಅಮೇರಿಕ ಮೂಲದ ಟೆಸ್ಲಾ ಎಲೆಕ್ಟ್ರಿಕ್ ಕಾರು ವಿಶ್ವದಲ್ಲೇ ಭಾರಿ ಜನಪ್ರಿಯವಾಗಿದೆ. ಕಾರಿನ ತಂತ್ರಜ್ಞಾನ, ಬ್ಯಾಟರಿ, ಮಾಡೆಲ್, ವಿನ್ಯಾಸ ಸೇರಿದಂತೆ ಎಲ್ಲವೂ ಉತ್ಕೃಷ್ಟ ದರ್ಜೆಯದ್ದಾಗಿದೆ. 2015ರಲ್ಲಿ ಟೆಸ್ಲಾ ಸಂಸ್ಥೆ ಕಾರಿನ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ವಿವರಿಸಿದ್ದರು. ಮೋದಿ ಕೂಡ ಟೆಸ್ಲಾ ಕಾರಿನ ತಂತ್ರಜ್ಞಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ!
ಪರಿಸರಕ್ಕೆ ಪೂರಕವಾದ, ಮಾಲಿನ್ಯ ರಹಿತ ಕಾರು 2019ರಲ್ಲಿ ಭಾರತಕ್ಕೆ ಕಾಲಿಡುತ್ತಿದೆ. ಈ ಕುರಿತು ಟೆಸ್ಲಾ ಕಂಪನಿ ಸಹ ಮಾಲೀಕ, CEO ಎಲನ್ ಮಸ್ಕ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. 2019 ಅಥವಾ 2020ರ ಆರಂಭದಲ್ಲಿ ಟೆಸ್ಲಾ ಭಾರತಕ್ಕೆ ಕಾಲಿಡಲಿದೆ ಎಂದಿದ್ದಾರೆ.
Would love to be there this year. If not, definitely next! 💛 India 💛
— Elon Musk (@elonmusk) March 15, 2019
ಇದನ್ನೂ ಓದಿ: ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV500- ಮೊದಲ ಸ್ಥಾನ ಯಾರಿಗೆ?
ಟೆಸ್ಲಾ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪೆನಿ . ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಬ್ಯಾಟರಿ ತಯಾರಿಕೆಯಲ್ಲಿ ವಿಶ್ವದ ಶೇಕಡಾ 60 ರಷ್ಟು ಪಾಲು ಟೆಸ್ಲಾ ಹೊಂದಿದೆ. ಲಕ್ಸುರಿ ಕಾರು, ಆಕರ್ಷಕ ವಿನ್ಯಾಸ ಹೊಂದಿರುವ ಟೆಸ್ಲಾ ಕಾರು ಭಾರತದ ಕಾರು ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.