Asianet Suvarna News Asianet Suvarna News

ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

ಹಳೇ ಕಾರುಗಳು ಹೊಸ ರೂಪದಲ್ಲಿ ಬರುತ್ತಿವೆ. ದೊಡ್ಡ ಕಂಪನಿಗಳು ಆಕರ್ಷಕ ಎಸ್‌ಯುವಿಗಳನ್ನು ರೆಡಿ ಮಾಡಿ ಮಾರುಕಟ್ಟೆಗೆ ಬಿಡುತ್ತಿವೆ. ಇವು ಈ ವರ್ಷದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಕಾಣುತ್ತಿರುವ ವಿಶೇಷತೆ. ಈ ವರ್ಷ ಬಿಡುಗಡೆಯಾಗುತ್ತಿರುವ ಮಹತ್ವದ 10 ಕಾರುಗಳ ಪಟ್ಟಿಇಲ್ಲಿದೆ. ಹೊಸ ಕಾರು ಕೊಳ್ಳುವವರು ಮತ್ತು ಹಳೇ ಕಾರನ್ನು ಮಾರುವವರು ಗಮನಿಸಿ.

Most expected cars to launch in this New year 2019
Author
Bengaluru, First Published Jan 12, 2019, 3:35 PM IST

ಬೆಂಗಳೂರು(ಜ.12): ಹೊಸ ವರ್ಷದಲ್ಲಿ ಹೊಸ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಕೆಲ ಕಾರುಗಳು ಗ್ರಾಹಕರ ನಿರೀಕ್ಷೆ ಇಮ್ಮಡಿಗೊಳಿಸಿದೆ. ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ನೂತನ ಕಾರುಗಳು ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪ್ರಮುಖ 10 ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

1. ನಿಸಾನ್‌ ಕಿಕ್ಸ್‌

Most expected cars to launch in this New year 2019
ಇದು ಎಸ್‌ಯುವಿಗಳ ಪರ್ವ ಕಾಲ. ಹಾಗಾಗಿಯೇ ನಿಸಾನ್‌ ಕಂಪನಿ ಎಸ್‌ಯುವಿ ಪ್ರಿಯರನ್ನು ಆಕರ್ಷಿಸುವ ನಿಸಾನ್‌ ಕಿಕ್ಸ್‌ ಎಸ್‌ಯುವಿಯನ್ನು ಬಿಡುಗಡೆ ಮಾಡುತ್ತಿದೆ. ಡಿಸೈನ್‌ನಲ್ಲೂ ಸ್ಮಾರ್ಟ್‌ ಆಗಿರುವ ಈ ಕಾರು 4.3 ಮೀಟರ್‌ನಷ್ಟುಉದ್ದವಾಗಿದೆ. ಸದ್ಯದ ಹಾಟ್‌ ಫೇವರಿಟ್‌ ಎನ್ನಿಸಿರುವ ಎಸ್‌ಯುವಿ ಹ್ಯುಂಡೈ ಕ್ರೇಟಾ ಕಾರ್‌ಗಿಂತ ಈ ಕಾರು ಅಗಲ ಹಾಗೂ ಉದ್ದವಾಗಿದೆ. ಕಾರ್‌ನ ಇಂಟೀರಿಯರ್‌ ಡಿಸೈನ್‌ ಅದ್ಭುತವಾಗಿದ್ದು, ಮಾಹಿತಿಯನ್ನು ಒದಗಿಸುವ 8 ಇಂಚಿನ ಟಚ್‌ಸ್ಕ್ರೀನ್‌ ಸಿಸ್ಟಮ್‌ ಇದರಲ್ಲಿದೆ. ನೋಡಲು ರೆನಾಲ್ಟ್‌ ಕ್ಯಾಪ್ಷರ್‌ ಹಾಗೂ ಡಸ್ಟರ್‌ ತರಹದ ಫೀಲ್‌ ನೀಡುತ್ತದೆ. 1.5 ಲೀಟರ್‌ ಡಿಸಿಐ ಕೆ9ಕೆ ಇಂಜಿನ್‌, ಆಟೋ ಹೆಡ್‌ಲ್ಯಾಂಪ್‌, 360 ಡಿಗ್ರಿ ವ್ಯೂ ಕ್ಯಾಮೆರಾ ಇದರಲ್ಲಿ ಕಾಣಬಹುದು.

ಅಂದಾಜು ಬೆಲೆ- 10ರಿಂದ 15 ಲಕ್ಷ
ಮಾರುಕಟ್ಟೆಗೆ- 22 ಜನವರಿ 2019ಕ್ಕೆ

ಇದನ್ನೂ ಓದಿ: ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

2. ಟಾಟಾ ಹೇರಿಯರ್‌

Most expected cars to launch in this New year 2019
ಈಗಾಗಲೇ ಟಿಯಾಗೊ ಮತ್ತು ನಿಕ್ಸನ್‌ನಲ್ಲಿ ಹೆಸರು ಮಾಡಿರುವ ಟಾಟಾ, ಹೊಸ ವರ್ಷಕ್ಕೆ ಇನ್ನೊಂದು ಮೈಲಿಗಲ್ಲು ಸಾಧಿಸಲು ಸಿದ್ಧವಾಗಿದೆ. ಈ ವರ್ಷ ಟಾಟಾ ಹೇರಿಯರ್‌ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಇದು ನೋಡಲು ಹೆಚ್‌5ಎಕ್ಸ್‌ನಂತೆ ಕಾಣುತ್ತದೆ. ನೋಡಲು ಸ್ವಲ್ಪ ಡಿಸ್ಕವರಿ ಸ್ಪೋಟ್ಸ್‌ರ್‍ ಕಾರ್‌ನಂತೆ ಕಂಡರೂ ಅಚ್ಚರಿಯಿಲ್ಲ. ಎಂತಹ ರಸ್ತೆಯಲ್ಲಿಯೂ ಸಂಚರಿಸಿದರೂ ಸಾಫ್ಟ್‌ ಫೀಲ್‌ ನೀಡಲಿದೆ ಎನ್ನುತ್ತಿದೆ ಕಂಪನಿ. ಹೆಡ್‌ ಲ್ಯಾಂಪ್‌ ಕೂಡ ವಿಭಿನ್ನ ಡಿಸೈನ್‌ ಹೊಂದಿದೆ. ಹಿಂಬದಿಯಲ್ಲಿ ಲಗೇಜ್‌ ಕೊಂಡೊಯ್ಯಲು ಅನುಕೂಲ ಆಗುವಂತೆ ಸೀಟ್‌ಗಳನ್ನು ಫೋಲ್ಡ್‌ ಮಾಡುವ ವ್ಯವಸ್ಥೆ ಇದೆ. ಇದರಲ್ಲಿ ಇಕೊ, ಸಿಟಿ ಮತ್ತು ಸ್ಪೋಟ್ಸ್‌ರ್‍ ಡ್ರೈವಿಂಗ್‌ ಮೋಡ್‌ಗಳಿವೆ.

ಅಂದಾಜು ಬೆಲೆ: ಸುಮಾರು ರು.16 ಲಕ್ಷದಿಂದ 21 ಲಕ್ಷ
ಮಾರುಕಟ್ಟೆಗೆ: ಜನವರಿ ಮಾಸಾಂತ್ಯಕ್ಕೆ

3. ಮರ್ಸಿಡಿಸ್‌ ಬೆಂಝ್‌ ಕ್ಲಾಸ್‌ 5

Most expected cars to launch in this New year 2019
ಜರ್ಮನ್‌ ಮೂಲದ ಮರ್ಸಿಡಿಸ್‌ ಬೆಂಝ್‌ 2019ರಲ್ಲಿ ಕ್ಲಾಸ್‌ 5 ಎಂಬ ಹೊಸ ವಿನ್ಯಾಸದ ಅದ್ದೂರಿ ಕಾರನ್ನು ಹೊರ ತರುತ್ತಿದೆ. 2.0 ಲೀಟರ್‌ನ ನಾಲ್ಕು ಸಿಲಿಂಡರ್‌ನ ಡೀಸೆಲ್‌ ಇಂಜಿನ್‌ ಇದ್ದು, 191ಬಿಹೆಚ್‌ಪಿ ಪವರ್‌ ಮತ್ತು 400 ಎನ್‌ಎಂನ ಟಾರ್‌ಕ್ಯೂ ಸಾಮರ್ಥ್ಯ ಹೊಂದಿದೆ. ಎಂದಿನಂತೆ ಇದರ ಇಂಟೀರಿಯರ್‌ ಡಿಸೈನ್‌ ಹಾಗೂ ಹೊರ ವಿನ್ಯಾಸ ಆಕರ್ಷಿಸುವಂತಿದ್ದು, ಈ ವರ್ಷದ ಲಕ್ಸುರಿ ಕಾರುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸಾಧ್ಯತೆ ಇದೆ.

ಅಂದಾಜು ಬೆಲೆ: 75ರಿಂದ 85 ಲಕ್ಷ
ಮಾರುಕಟ್ಟೆಗೆ: ಜನವರಿ 24

ಇದನ್ನೂ ಓದಿ: ಹೆಲ್ಮೆಟ್‌ಗೆ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ವಿನೂತನ ಪ್ರತಿಭಟನೆ!

4. ಮಾರುತಿ ಸುಜುಕಿ ನ್ಯೂ ವ್ಯಾಗನ್‌ ಆರ್‌

Most expected cars to launch in this New year 2019
ಒಂದು ಕಾಲದಲ್ಲಿ ಭಾರತದ ರಸ್ತೆಯನ್ನು ಆಳುತ್ತಿದ್ದ ಮಾರುತಿ ಸುಜುಕಿ ವ್ಯಾಗನ್‌ ಆರ್‌ ಮತ್ತೆ ಹೊಸ ರೂಪದಲ್ಲಿ ಬರುತ್ತಿದೆ. ಈಗ ಅದರ ಹೆಸರು ನ್ಯೂ ವ್ಯಾಗನ್‌ ಆರ್‌. ಇತ್ತೀಚೆಗೆ ಹ್ಯುಂಡೈ ಕಂಪನಿ ತನ್ನ ಯಶಸ್ವೀ ಕಾರಾಗಿದ್ದ ಸ್ಯಾಂಟ್ರೋ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಮಾರುತಿ ಕಂಪನಿ ಕೂಡ ತನ್ನ ಯಶಸ್ವೀ ಕಾರು ವ್ಯಾಗನ್‌ ಆರ್‌ ಅನ್ನು ಹೊಸ ರೂಪದಲ್ಲಿ ಆಕರ್ಷಕ ರೀತಿಯಲ್ಲಿ ಬಿಡುಗಡೆ ಮಾಡುತ್ತಿದೆ. ಮಾರುತಿ ಕಾರು ಪ್ರಿಯರು ಈ ಕಾರಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ಈ ಕಾರು ಇದರಲ್ಲಿ 1.0 ಲೀಟರ್‌ ಇಂಜಿನ್‌, 5 ಬಗೆಯ ಮ್ಯಾನುಯಲ್‌ ಸ್ಪೀಡ್‌ ಗೇರ್‌ ಹೊಂದಿದೆ.

ಅಂದಾಜು ಬೆಲೆ: 4 ಲಕ್ಷ
ಮಾರುಕಟ್ಟೆಗೆ: ಜನವರಿ ಮಾಸಾಂತ್ಯಕ್ಕೆ

ಇದನ್ನೂ ಓದಿ: ಹೊಸ ವರ್ಷದಲ್ಲಿ ವೋಕ್ಸ್‌ವ್ಯಾಗನ್ ಕಾರು ನಿರ್ವಹಣೆ ವೆಚ್ಚ ಕಡಿತ

5. ಟೊಯೋಟ ನ್ಯೂ ಕ್ಯಾಮ್ರಿ

Most expected cars to launch in this New year 2019
ಒಂದು ಕಾಲದಲ್ಲಿ ಕಾರು ಪ್ರಿಯರು ಕ್ಯಾಮ್ರಿ ಕಾರನ್ನು ಭಾರಿ ಇಷ್ಟಪಡುತ್ತಿದ್ದರು. ಕ್ಯಾಮ್ರಿ ಉತ್ಪಾದನೆ ನಿಂತು ಹೋದಾಗ ಬೇಸರ ಪಟ್ಟವರ ಸಂಖ್ಯೆ ಜಾಸ್ತಿ ಇತ್ತು. ಇದೀಗ ಟೊಯೋಟ ನ್ಯೂ ಕ್ಯಾಮ್ರಿ ಹೊರತರುತ್ತಿದೆ. ಎರಡು ಬಗೆಯ ಹೊಸ ಲುಕ್‌, ಡಿಸೈನ್‌ನಲ್ಲಿ ಪರಿಚಯಿಸಲು ಸಿದ್ಧವಾಗುತ್ತಿದೆ. ಸದ್ಯ ಪ್ರಸ್ತುತ ಕ್ಯಾಮ್ರಿ ಒಂದು ವಿನ್ಯಾಸದಲ್ಲಿ ಲಭ್ಯವಿದ್ದು, ಟೊಯೋಟ ನ್ಯೂ ಟಿಎನ್‌ಜಿಎ ಕಾರ್‌ನ ವಿನ್ಯಾಸ, ಸೈಜ್‌, ಫೀಚ​ರ್‍ಸ್ಗಳನ್ನು ಕಾಣಬಹುದಾಗಿದೆ. ವೈರ್‌ಲೆಸ್‌ ಚಾರ್ಜಿಂಗ್‌, ಡ್ಯುಯೆಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್‌ ಇದರ ವಿಶೇಷ. 10 ಏರ್‌ ಬ್ಯಾಗ್‌ಗಳು ಹೊಂದಿರುವುದು ಮತ್ತೊಂದು ವಿಶೇಷ. 2.5 ಲೀಟರ್‌ನ 4 ಸಿಲಿಂಡರ್‌ ಪೆಟ್ರೋಲ್‌ ಇಂಜಿನ್‌ ಹೊಂದಿದೆ.

ಅಂದಾಜು ಬೆಲೆ: ರು.37ಲಕ್ಷ ದಿಂದ 40 ಲಕ್ಷ
ಮಾರುಕಟ್ಟೆಗೆ: ಜನವರಿ 2019

5. ಮಹೀಂದ್ರಾ ಎಕ್ಸ್‌ಯುವಿ 300

Most expected cars to launch in this New year 2019
ಮಹೀಂದ್ರಾ ಎಕ್ಸ್‌ಯುವಿ 500 ಕಾರ್‌ ಬಂದು ಫ್ಯಾಮಿಲಿ ಕಾರ್‌ ಎನ್ನಿಸಿಕೊಂಡು ಮೆಚ್ಚುಗೆ ಗಳಿಸಿತ್ತು. ಈಗ ಮಹೀಂದ್ರಾ ಎಕ್ಸ್‌ಯುವಿ 300 ಬಿಡುಗಡೆ ಮಾಡಲಿದೆ ಮಹೀಂದ್ರಾ ಕಂಪನಿ. ಮುಖ್ಯವಾಗಿ ಮಾರುತಿ ಬ್ರಿಜಾ, ಟಾಟಾ ನಿಕ್ಸಾನ್‌, ಹೋಂಡಾ, ಡಬ್ಲೂಆರ್‌ವಿಗೆ ಸೆಡ್ಡು ಹೊಡೆಯಲು ಡೀಸೆಲ್‌ ಮತ್ತು ಪೆಟ್ರೋಲ್‌ ಎರಡೂ ಮಾದರಿಯಲ್ಲೂ ಕಾರನ್ನು ಮಾರುಕಟ್ಟೆಗೆ ಇಳಿಸಲು ಮುಂದಾಗಿದೆ. ಇಂದಿಗೆ ಅವಶ್ಯಕ ಮತ್ತು ಆಧುನಿಕವೆನಿಸಿದ ಸಾಕಷ್ಟುಫೀಚರ್‌ಗಳು ಈ ಕಾರ್‌ನಲ್ಲಿವೆ. ಏರ್‌ಬ್ಯಾಗ್‌, ಸನ್‌ರೂಫ್‌, ಡ್ಯುಯಲ್‌ ಜೋನ್‌ ಕ್ಲೈಮ್ಯಾಟ್‌ ಕಂಟ್ರೋಲರ್‌, ನಾಲ್ಕು ಸಿಲೆಂಡರ್‌ ಇಂಜಿನ್‌, ನಾಲ್ಕು ವೀಲ್‌ಗಳಲ್ಲೂ ಡಿಸ್‌ ಬ್ರೇಕ್‌ ಸೌಲಭ್ಯವನ್ನು ಹೊಂದಿರಲಿದೆ ಈ ಕಾರ್‌.

ಮಾರುಕಟ್ಟೆಗೆ: ಫೆಬ್ರವರಿ
ಅಂದಾಜು ಬೆಲೆ: 8 ರಿಂದ 12 ಲಕ್ಷ ರುಪಾಯಿ

7. ಫೋರ್ಡ್‌ ಫಿಗೋ ಫೇಸ್‌ಲೈಫ್‌

Most expected cars to launch in this New year 2019
ಪುಟ್ಟಕುಟುಂಬಗಳಿಗೆ ಸೂಕ್ತವಾದ ರೀತಿಯಲ್ಲಿ 2015ರಲ್ಲಿ ಬಂದ ಫೋರ್ಡ್‌ ಫಿಗೋ 2019ರ ಮಾಚ್‌ರ್‍ಗೆ ಮತ್ತಷ್ಟುಅಪ್‌ಡೇಟ್‌ ಆಗಿ ಡ್ರೈವ್‌ ಫ್ರೆಂಡ್ಲಿ ಆ್ಯಂಡ್‌ ಸೇಫ್ಟಿಯಾಗಿ ಮತ್ತೊಂದು ಅವತಾರದಲ್ಲಿ ಬರುತ್ತಿದೆ. ಅದು ಫೋರ್ಡ್‌ ಫಿಗೋ ಫೇಸ್‌ಲೈಫ್‌ ಮೂಲಕ. ಹಳೆಯ ಫೋರ್ಡ್‌ ರೀತಿಯೇ ಹೊರಾಂಗಣ ವಿನ್ಯಾಸವಿದ್ದರೂ ಕೆಲವಾರು ಬದಲಾವಣೆಗಳು ಇಲ್ಲಿರಲಿವೆ. ಮುಖ್ಯವಾಗಿ ಮಾರುತಿ ಸ್ವಿಫ್ಟ್‌, ಹ್ಯೂಂಡೈ ಗ್ರ್ಯಾಂಡ್‌ ಐ 10, ಟೊಯೋಟಾ ಇಟಿಯೋಸ್‌ ಕಾರುಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ತಯಾರಾಗಿರುವ ಪೆಟ್ರೋಲ್‌ ಇಂಜಿನ್‌ ಕಾರ್‌ ಇದು. ಅತ್ಯಾಧುನಿಕ ಮ್ಯುಸಿಕಲ್‌ ಸಿಸ್ಟಂಗಳು, 5 ಪವರ್‌ ಗೇರ್‌ಗಳು ಹೊಂದಿವೆ.

ಮಾರುಕಟ್ಟೆಗೆ: ಮಾರ್ಚ್
ಅಂದಾಜು ಬೆಲೆ: 6 ರಿಂದ 8 ಲಕ್ಷ ರುಪಾಯಿ

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್-ಶೀಘ್ರದಲ್ಲೇ ಹೊಸ ನಿಯಮ!

8. ಟಾಟಾ 45 ಎಕ್ಸ್‌

Most expected cars to launch in this New year 2019
ಟಾಟಾ ಮೊದಲ ಬಾರಿಗೆ ಅಡ್ವಾನ್ಸ್‌ಡ್‌ ಮಾಡ್ಯುಲರ್‌ ಫ್ಲಾಟ್‌ಫಾಮ್‌ರ್‍ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಯಾರಿಸಿರುವ ಕಾರು ಟಾಟಾ 45 ಎಕ್ಸ್‌. ಮಾರುತಿ ಬಲೆನೋ, ಹುಂಡೈ ಐ 20 ಸ್ಪರ್ಧೆಯೊಡ್ಡಲು ಬರುತ್ತಿರುವ ಟಾಟಾ 45 ಎಕ್ಸ್‌ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ, ಏರ್‌ಬ್ಯಾಗ್‌, ಕ್ಲೈಮ್ಯಾಟ್‌ ಕಂಟ್ರೋಲರ್‌ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೇ ಈಗಾಗಲೇ 2018ರ ಕಾರ್‌ ಎಕ್ಸ್‌ಪೋದಲ್ಲಿ ಉತ್ತಮ ಕಾರ್‌ ಎಂದು ಮೆಚ್ಚುಗೆ ಪಡೆದಿರುವ ಕಾರ್‌ ಇದು. ಮೂರು ಸಿಲೆಂಡರ್‌ ಇಂಜಿನ್‌ನೊಂದಿಗೆ ಪೆಟ್ರೋಲ್‌ ಮಾದರಿಯಲ್ಲಿ ಈ ಕಾರು ಲಭ್ಯ.

ಮಾರುಕಟ್ಟೆಗೆ: ಮಾರ್ಚ್
ಅಂದಾಜು ಬೆಲೆ: 8- 9 ಲಕ್ಷ ರುಪಾಯಿ

9. ಎಂಜಿ ಆರ್‌ಎಕ್ಸ್‌ 5

Most expected cars to launch in this New year 2019
ಕೆಲ ಸಮಯದ ಹಿಂದಷ್ಟೇ ಗುಜರಾತ್‌ನಲ್ಲಿ ಉತ್ಪಾದನ ಘಟಕವನ್ನು ತೆರೆದ ಎಂಜಿ ಕಾರ್‌ ಕಂಪನಿ ಈ ವರ್ಷದ ಜೂನ್‌ ವೇಳೆಗೆ ತನ್ನ ಮೊದಲ ಕಾರ್‌ ಅನ್ನು ರಸ್ತೆ ಮೇಲೆ ತರಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಮೊದಲ ಪ್ರಾಡೆಕ್ಟ್ ಪ್ರಾಮಿಸಿಂಗ್‌ ಆಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟುಆಧುನಿಕ ತಂತ್ರಜ್ಞಾನಗಳನ್ನು ಈ ಕಾರ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಆರು ಏರ್‌ಬ್ಯಾಗ್‌, ಮ್ಯಾಸಿವ್‌ ಇನ್‌ಫರ್‌ಮೇಷನ್‌ ಟಚ್‌ ಸ್ಕ್ರೀನ್‌, ಎಲೆಕ್ಟ್ರಿಕ್‌ ಫ್ರಂಟ್‌ ಸೀಟ್‌, ಆಧುನಿಕ ಕನೆಕ್ಟಿವಿಟಿ ಸಿಸ್ಟಂ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಈ ಕಾರ್‌ ಒಳಗೊಂಡಿರಲಿದೆ. ನೆರೆಯ ಚೀನಾ ಮತ್ತು ನಮ್ಮಲ್ಲಿ ಏಕ ಕಾಲದಲ್ಲಿ ಅಂದರೆ ಜೂನ್‌ನಲ್ಲಿ ಮಾರುಕಟ್ಟೆಪ್ರವೇಶ ಮಾಡಲಿರುವ ಈ ಕಾರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ಮಾದರಿಯಲ್ಲಿ ಲಭ್ಯವಿದ್ದು, ಬೆಲೆ 18ರಿಂದ 23 ಲಕ್ಷ ರುಪಾಯಿ ಇರಲಿದೆ.

ಮಾರುಕಟ್ಟೆಗೆ: ಜೂನ್‌
ಅಂದಾಜು ಬೆಲೆ: 18- 23 ಲಕ್ಷ ರುಪಾಯಿ

ಇದನ್ನೂ ಓದಿ: 6 ಲಕ್ಷ ರೂಪಾಯಿಗೆ ಸೋಲಾರ್ ಬಸ್ - ವಿದ್ಯಾರ್ಥಿಗಳ ಹೊಸ ಆವಿಷ್ಕಾರ!

10. ಹೊಂಡಾ ನ್ಯೂ ಸಿವಿಕ್

Most expected cars to launch in this New year 2019
ಹೊಂಡಾ ಸಿಟಿಯ ನಂತರ ಈಗ ಹೊಂಡಾ ನ್ಯೂ ಸಿವಿಸ್‌ ಎನ್ನುವ ಕಾರ್‌ ಅನ್ನು ಬಿಡುಗಡೆ ಮಾಡಲು ಈ ವರ್ಷದ ಅಕ್ಟೋಬರ್‌ಗೆ ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ ಹೊಂಡಾ ಕಂಪನಿ. ಆರು ಪವರ್‌ ಫುಲ್‌ ಗೇರ್‌ಗಳು, ಎಲೆಕ್ಟ್ರಿಕಲಿ ಆಪರೇಟೆಡ್‌ ಮಿರ​ರ್‍ಸ್ ಆ್ಯಂಡ್‌ ಸೀಟ್ಸ್‌, ಡಿಜಿಟಲ್‌ ಸ್ಪೀಡ್‌ ಮೀಟರ್‌, ಕ್ಲೈಮ್ಯಾಟ್‌ ಕಂಟ್ರೋಲರ್‌, ಆಕರ್ಷಕ ಹೊರಾಂಗಣ ವಿನ್ಯಾಸ ಹೊಂದಿದೆ. ಸ್ಕೋಡಾ ಆಕ್ಟೈವಾ, ಟೊಯೋಟ ಕೊರೋಲಾ ಕಾರ್‌ಗಳಿಗೆ ಸ್ಪರ್ಧೆಯೊಡ್ಡುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಕಾರ್‌ 10 ಜನರೇಷನ್‌ ಪೆಟ್ರೋಲ್‌ ಇಂಜಿನ್‌ ಹೊಂದಿರಲಿದೆ.

ಮಾರುಕಟ್ಟೆಗೆ: ಅಕ್ಟೋಬರ್‌
ಅಂದಾಜು ಬೆಲೆ: 13 ರಿಂದ 18 ಲಕ್ಷ ರುಪಾಯಿ

Follow Us:
Download App:
  • android
  • ios