ಹೆಲ್ಮೆಟ್‌ಗೆ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ವಿನೂತನ ಪ್ರತಿಭಟನೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 2:58 PM IST
Pune group conducts a funeral for a helmet to protest for mandatory rule
Highlights

ಹೆಲ್ಮೆಟ್‌ಗೆ ಅಂತ್ಯಕ್ರಿಯೆ ಮಾಡೋ ಮೂಲಕ ಪೊಲೀಸರ ವಿರುದ್ಧ ಹೊಸ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟಕ್ಕೂ ಈ ರೀತಿ ಪ್ರತಿಭಟನೆ ಹಮ್ಮಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ

ಪುಣೆ(ಜ.12): ಬೈಕ್ ಹಾಗೂ ಸ್ಕೂಟರ್ ಸವಾರರಿಗೆ ಹೆಲ್ಮೆಟ್ ಖಡ್ಡಾಯ ನಿಯಮ ಇದೀಗ ಪುಣೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪುಣೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮದ ವಿರುದ್ದ ಸಾರ್ವಜನಿಕರ ಪ್ರತಿಭಟನೆ ಜೋರಾಗಿದೆ. 2018ರ ಅಂತ್ಯದಲ್ಲಿ ಬೈಕ್ ರ್ಯಾಲಿ ಮೂಲಕ ಹೆಲ್ಮೆಟ್ ಕಡ್ಡಾಯ ನಿಯಮದ ವಿರುದ್ದ ಬೀದಿಗಿಳಿದಿದ್ದ ಪುಣೆ ನಗರದ ಜನತೆ ಇದೀಗ ಹೆಲ್ಮೆಟ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಲಾಗಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೊಂದು ಶಾಕ್: ಹೀಗೆ ಮಾಡಿದ್ರೆ ಕಂಬಿ ಎಣಿಸೋದು ಗ್ಯಾರಂಟಿ

ಪುಣೆಯಲ್ಲಿ 2018ರ ಡಿಸೆಂಬರ್ ತಿಂಗಳಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ತರಲಾಗಿದೆ. ಈ ಮೂಲಕ ಹೆಲ್ಮೆಟ್ ಧರಿಸಿದ ಬರೋಬ್ಬರಿ 9500 ಮಂದಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರಿಗೆ ಇದೀಗ ರಾಜಕೀಯ ಮುಖಂಡರ್ ಕೂಡ ಸಾಥ್ ನೀಡಿದ್ದಾರೆ. ಬಳಿಕ ಹೆಲ್ಮೆಟ್‌ಗೆ ಅಂತ್ಯಕ್ರಿಯೆ ಮಾಡೋ ಮೂಲಕ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ನೂತನ ಹೆಲ್ಮೆಟ್ ವಿರೋಧಿ ಸಂಘಟನೆ ಹಾಗೂ ಶಿವ ಸೇನೆ ಮುಖಂಡ ಮಹದೇವ್ ಬಾಬೈ ಹೆಲ್ಮೆಟ್‌ಗೆ ಅಂತ್ಯಕ್ರಿಯೆ ಮಾಡೋ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಹೆಲ್ಮೆಟ್ ಮುಖ್ಯ. ಆದರೆ ಪುಣೆ ಲೋಕಲ್ ರಸ್ತೆಗಳಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಅಗತ್ಯವಿಲ್ಲ. ಇಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಹೀಗಾಗಿ ನೂತನ ನಿಯಮ ಹಿಂಪಡೆಯಬೇಕು ಎಂದು ಶಿವಸೇನೆ ಮುಖಂಡ ಮಹದೇವ್ ಆಗ್ರಹಿಸಿದ್ದಾರೆ.
 

loader