ನವದೆಹಲಿ(ಜ.07): ಭಾರತದಲ್ಲಿ ವೋಕ್ಸ್‌ವ್ಯಾಗನ್ ಕಾರು ಮಾರಾಟ ಹೆಚ್ಚಿಸಲು ಇದೀಗ ಹೊಸ ಪ್ಲಾನ್ ರೂಪಿಸಿದೆ.  ವೋಕ್ಸ್‌ವ್ಯಾಗನ್ ವಿರುದ್ಧ ಕೇಳಿ ಬರುತ್ತಿರುವ ಮೊದಲ ದೂರು ಅಂದರೆ ಕಾರು ನಿರ್ವಹಣೆ ವೆಚ್ಚ ದುಬಾರಿ. ಇದಕ್ಕಾಗಿಯೇ ವೋಕ್ಸ್‌ವ್ಯಾಗನ್ ಕಾರು ಖರೀದಿಗೆ ಭಾರತೀಯರು ಹಿಂದೇಟು ಹಾಕುತ್ತಿದ್ದರು. ಇದೀಗ ವೋಕ್ಸ್‌ವ್ಯಾಗನ್ ಶೇಕಡಾ 44 ರಷ್ಟಿದ್ದ ಮೈಂಟೇನೆನ್ಸ್ ವೆಚ್ಚವನ್ನ 24ಕ್ಕೆ ಇಳಿಸಿದೆ.

ಇದನ್ನೂ ಓದಿ: ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

ನಿರ್ವಹಣಾ ವೆಚ್ಚದ ಜೊತೆಗೆ ಉಚಿತ ಸರ್ವೀಸ್ ಕೂಡ ನೀಡುತ್ತಿದೆ. ಇಷ್ಟು ದಿನ 6 ತಿಂಗಳ ಅಥವಾ 7,000 ಕಿ.ಮೀ ಪ್ರಯಾಣಕ್ಕೆ ಉಚಿತ ಚೆಕ್ ಅಪ್ ನೀಡುತ್ತಿತ್ತು. ಆದರೆ ಯಾವುದೇ ಫ್ರೀ ಸರ್ವೀಸ್ ಭಾಗ್ಯಗಳು ವೋಕ್ಸ್‌ವ್ಯಾಗನ್ ನೀಡರಲಿಲ್ಲ. ಇದೀಗ ಮಾರುತಿ ಸುಜುಕಿ ಸಂಸ್ಥೆಯ ರೀತಿಯಲ್ಲಿ ಉಚಿತ 3 ಸರ್ವೀಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

2018ರಲ್ಲಿ ವೋಕ್ಸ್‌ವ್ಯಾಗನ್ ಮಾರಾಟದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ವೋಕ್ಸ್‌ವ್ಯಾಗನ್ ಇದೀಗ ಭಾರತದಲ್ಲಿ ಶೇಕಡಾ 5 ರಷ್ಟು  ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಪ್ಲಾನ್ ಹಾಕಿದೆ. ಹೀಗಾಗಿ ಹೊಸದಾಗಿ ವೋಕ್ಸ್‌ವ್ಯಾಗನ್ ಕಾರು ಖರೀದಿಸುವ ಗ್ರಾಹಕರಿಗೆ ನೂತನ ಸೌಲಭ್ಯಗಳು ಸಿಗಲಿದೆ.