ವಿಂಟೇಜ್ ಕಾರಿನ ರಿಜಿಸ್ಟ್ರೇಶನ್‌ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ!
ಅದೆಷ್ಟೇ ಹೊಸ ಮಾಡೆಲ್ ಕಾರುಗಳು ಬಿಡುಗಡೆಯಾದರೂ ಹಳೇ ವಿಂಟೇಜ್ ಕಾರಿಗಿರುವ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ. ವಿಂಟೇಜ್ ಕಾರುಗಳು ಆಕರ್ಷಣೆ ಮಾತ್ರವಲ್ಲ, ಇದು ಪ್ರತಿಷ್ಠೆ ಕೂಡ ಹೌದು. ಇದೀಗ ವಿಂಟೇಜ್ ಕಾರುಗಳ ರಿಜಿಸ್ಟ್ರೇಶನ್‌ಗೆ ಹೊಸ ನೀತಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ದೆಹಲಿ(ನ.27): ಹಳೇ ವಿಂಟೇಜ್ ವಾಹನಗಳನ್ನು ನೋಡಿದರೆ ಎಲ್ಲರ ಕಣ್ಣು ಒಂದು ಕ್ಷಣ ಅದರತ್ತೆ ನೆಟ್ಟುತ್ತೆ. ದುಬಾರಿ, ಐಷಾರಾಮಿ ಅಥವಾ ಆಕರ್ಷ ವಿನ್ಯಾಸದ ಕಾರು ಮಾರುಕಟ್ಟೆಯಲ್ಲಿದ್ದರೂ ವಿಂಟೇಜ್ ಕಾರುಗಳಿಗಿರುವ ಬೇಡಿಕೆ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ವಿಂಟೇಜ್ ಕಾರುಗಳ ಮಾಲೀಕರು ಹೊಸ ಹೊಸ ನೀತಿಗಳಿಂದ ತಮ್ಮ ಪ್ರತಿಷ್ಠೆಯ ಕಾರನ್ನು ಮನೆಯಲ್ಲೇ ಇಡುವ ಪರಿಸ್ಥಿತಿ ಮುಂದಾಗಿತ್ತು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ವಿಂಟೇಜ್ ರಿಜಿಸ್ಟ್ರೇಶನ್ ನೀತಿ ಜಾರಿಗೆ ತರಲು ಮುಂದಾಗಿದೆ.
ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!..
1989ರ ಮೋಟಾರ್ ವಾಹನ ಕಾಯ್ದೆಯಡಿಯ ವಿಂಟೇಜ್ ಮೋಟಾರ್ ವಾಹನಕ್ಕೆ ಸಂಬಂಧಿಸಿದ ರಿಜಿಸ್ಟ್ರೇಶನ್ ನೀತಿಯಲ್ಲಿ ತಿದ್ದಪಡಿ ತರುತ್ತಿದೆ. ಮೊದಲ ರಿಜಿಸ್ಟ್ರೇಶನ್ ದಿನಾಂಕಕ್ಕೆ 50 ವರ್ಷ ಹಳೆಯ ಕಾರು ಬೈಕ್, ವಾಣಿಜ್ಯ, ಖಾಸಗಿ ವಾಹನಗಳ ರಿಜಿಸ್ಟ್ರೇಶನ್ ನೀತಿಯಲ್ಲಿ ಹೊಸ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ವಿಂಟೇಜ್ ವಾಹನಕ್ಕೆ ಹೊಸ ರಿಜಿಸ್ಟ್ರೇಶನ್ ನೀತಿ ಜಾರಿಗೆ ತರಲಾಗುತ್ತಿದೆ.
6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!.
ಹೊಸ ರಿಜಿಸ್ಟ್ರೇಶನ್ ಮೂಲಕ ವಿಂಟೇಜ್ ವಾಹನಗಳನ್ನು ನೊಂದಣಿ ಮಾಡಿಕೊಳ್ಳಬಹುದು. ಹೊಸ ರಿಜಿಸ್ಟ್ರೇಶನ್‌ಗೆ 20,000 ರೂಪಾಯಿ ಹಾಗೂ ರಿ ರಿಜಿಸ್ಟ್ರೇಶನ್‌ಗೆ 5,000 ರೂಪಾಯಿ ನಿಗದಿ ಪಡಿಸಲಾಗಿದೆ. ಇನ್ನು ರಿಜಿಸ್ಟ್ರೇಶನ್ 10 ವರ್ಷ ಮಾನ್ಯವಾಗಿರುತ್ತದೆ.