ನವದೆಹಲಿ(ನ.18): ಭಾರತದಲ್ಲಿ ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಮೋಡಿದ ಬೈಕ್‌ಗಳ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಮೊದಲ ಸ್ಥಾನ. ರಾಯಲ್ ಎನ್‌ಫೀಲ್ಡ್ ಬೆಲೆ ಲಕ್ಷಕ್ಕೂ ಅಧಿಕವಾಗಿರೋದರಿಂದ ಎಲ್ಲರಿಗೂ ಕೈಗೆಟುವುದಿಲ್ಲ. ಇದೀಗ ರಾಯಲ್ ಎನ್‌ಫೀಲ್ಡ್ ಕಡಿಮೆ ಬೆಲೆಯ ಕ್ಲಾಸಿಕ್ 350 ಬೈಕ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ:  ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೆಲೆ 1.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ನೂತನ ಕ್ಲಾಸಿಕ್ 350 ಬೈಕ್ ಬೆಲೆ 8,000  ರೂಪಾಯಿ ಕಡಿತಗೊಳಿಸಾಗಿದೆ. ಹೀಗಾಗಿ 1.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಬೆಲೆಯಲ್ಲಿ ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿಸಬಹುದು.

ಇದನ್ನೂ ಓದಿ:  ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!

ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಬೈಕ್ ಹಾಗೂ ಕಡಿಮೆ ಬೆಲೆಯ ನೂತನ ಕ್ಲಾಸಿಕ್ 350 ಬೈಕ್‌ನಲ್ಲಿರುವ ವ್ಯತ್ಯಾಸ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್). ನೂತನ ಕ್ಲಾಸಿಕ್ ಬೈಕ್ ಸಿಂಗಲ್ ಚಾನೆಲ್ ABS ಬ್ರೇಕ್ ಹೊಂದಿದೆ. ಎಂಜಿನ್ ಹಾಗೂ ಇತರ ಫೀಚರ್ಸ್‌ ಬದಲಾವಣೆ ಇಲ್ಲ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ!

ಕಡಿಮೆ ಬೆಲೆಯ ನೂತನ ಕ್ಲಾಸಿಕ್ 350, ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ರೀತಿಯಲ್ಲೇ 346 CC, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು,  19.8 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 

ಇದನ್ನೂ ಓದಿ: ಯಮಹಾ FZ-FI ಹಾಗೂ FZS-FI ಬೈಕ್ ಬಿಡುಗಡೆ!

ಚಾಸಿಸ್, ಸಸ್ಪೆಶನ್, ಟೈರ್ ಬದಲಾವಣೆ ಇಲ್ಲ. 280 mm ಫ್ರಂಟ್ ಡಿಸ್ಕ್ ಬ್ರೇಕ್, ಹಾಗೂ ರೇರ್ 135 mm ಡ್ರಮ್ ಬ್ರೇಕ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಬೈಕ್ 240mm ರೇರ್ ಡಿಸ್ಕ್ ಬ್ರೇಕ್ ಹೊಂದಿದೆ. ಮರ್ಕ್ಯುರಿ ಸಿಲ್ವರ್ ಹಾಗೂ ಪ್ಯೂರ್ ಬ್ಲಾಕ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.