ಸಾರ್ವಜನಿಕ ರಸ್ತೆಯಲ್ಲಿ ಅಪ್ರಾಪ್ತ ಕಾರು ಡ್ರೈವಿಂಗ್ ಮಾಡೋ ಮೂಲಕ ನಿಯಮ ಉಲ್ಲಘಿಸಿದ್ದಾನೆ. ಹೀಗಾಗಿ ಪೋಷಕರಿಗೆ ದುಬಾರಿ ದಂಡ ಹಾಕಲಾಗಿದೆ.
ಹೈದರಾಬಾದ್(ಡಿ.15): ಅಪ್ರಾಪ್ತರು ವಾಹನ ಚಲಾಯಿಸುವುದು ಅತೀ ದೊಡ್ಡ ಅಪರಾಧ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಬೇಕು. ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಇಷ್ಟೇ ಅಲ್ಲ ಪೋಷಕರು ದುಬಾರಿ ದಂಡ ಕಟ್ಟಿ ಬೆಲೆ ತೆತ್ತಿದ್ದಾರೆ. ಇದೀಗ ರಿಂಗ್ ರೋಡ್‌ನಲ್ಲಿ ಸರಿ ಸುಮಾರು 10 ವರ್ಷದ ಬಾಲಕ ಕಾರು ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ.
ಇದನ್ನೂ ಓದಿ; ಸತತ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದು!
ಹೈದರಾಬಾದ್ ರಿಂಗ್ ರೋಡ್‌ನಲ್ಲಿ 10 ಬಾಲಕ ಮಾರುತಿ ಅಲ್ಟೋ ಕಾರು ಡ್ರೈವಿಂಗ್ ಮಾಡುತ್ತಿರುವುದು ಇತರ ಪ್ರಯಾಣಿಕರು ಗಮನಿಸಿದ್ದಾರೆ. ವಿಡಿಯೋ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತ ಪೊಲೀಸರು, ನಿಯಮ ಉಲ್ಲಂಘಿಸಿದ ಕಾರಿನ ರಿಜಿಸ್ಟ್ರೇಶನ್ ನಂಬರ್‌ಗೆ ದಂಡದ ಇ ಚಲನ್ ಕಳುಹಿಸಿದ್ದಾರೆ.
ಇದನ್ನೂ ಓದಿ; ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!
ಬಾಲಕನ ಪೋಷಕರಿಗೆ 2,000 ರೂಪಾಯಿ ದಂಡ ಹಾಕಲಾಗಿದೆ. ಮೋಟಾರು ವಾಹನ ತಿದ್ದು ಪಡಿ ಬಳಿಕ ನಿಯಮಗಳು ಕಟ್ಟು ನಿಟ್ಟಾಗಿವೆ. ಅಪ್ರಾಪ್ತರು ಡ್ರೈವಿಂಗ್ ಹಾಗೂ ರೈಡ್ ಮಾಡಿ ನಿಯಮ ಉಲ್ಲಂಘಿಸಿದರೆ ಪೋಷಕರು ಜೈಲು ಸೇರಬೇಕಾದಿತು. ಹೀಗಾಗಿ ಎಲ್ಲಾ ಪೋಷಕರು ಎಚ್ಚರ ವಹಿಸಲೇಬೇಕು.
ಭಾರತದಲ್ಲಿ ವಾಹನ ಚಾಲನೆ ಪರವಾನಗಿ(ಡ್ರೈವಿಂಗ್ ಲೈಸೆನ್ಸ್) ಪಡೆಯಲು ಕನಿಷ್ಠ 18 ವಯಸ್ಸು ತುಂಬಿರಬೇಕು. ಆದರೆ 18 ತುಂಬದ ಹಲವರು ವಾಹನ ಚಲಾಯಿಸಿ, ಸ್ಟಂಟ್ ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದರೆ ಹೊಸ ನಿಯಮದಿಂದ ಪೋಷಕರು ಎಚ್ಚೆತ್ತುಕೊಂಡಿದ್ದಾರೆ.
