ಮೀರತ್(ಡಿ.03): ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಮೇಲೆ  ಹಲವರು ದುಬಾರಿ ದಂಡ ಪಾವತಿಸಿ ಸುದ್ದಿಯಾಗಿದ್ದಾರೆ. ಇನ್ನು ಕೆಲವರು ದುಬಾರಿ ದಂಡ ನೋಡಿ ಬೆಚ್ಚಿ ಬಿದ್ದು ಬೈಕನ್ನೇ ಸುಟ್ಟ ಘಟನೆಗಳು ನಡೆದಿದೆ. ಇದೀಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಹೆಲ್ಮೆಟ್ ರಹಿತ ಹಾಗೂ ಇತರ ನಿಯಮ ಉಲ್ಲಂಘನೆ ಫೈನ್ ನೋಡಿ ಆಕ್ರೋಶಗೊಂಡ ಬೈಕ್ ಸವಾರ ಸ್ವತಃ ತನ್ನ ಬೈಕನ್ನೇ ಪುಡಿ ಮಾಡಿದ್ದಾನೆ.

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಈ ಘಟನೆ ನಡೆದಿರುವುದು ಮೀರತ್‌ನಲ್ಲಿ. ಹೆಲ್ಮೆಟ್ ರಹಿತ ಬೈಕ್ ಸವಾರನನ್ನು ಪೊಲೀಸರು ತಪಾಸಣೆ ವೇಳೆ ನಿಲ್ಲಿಸಿದ್ದಾರೆ. ಈತನ ಬೈಕ್ ನಂಬರ್ ಚೆಕ್ ಮಾಡಿದಾಗ ಸಿಗ್ನಲ್ ಜಂಪ್, ರಾಂಗ್ ಸೈಡ್ ಸೇರಿದತೆ ಹಲವು ನಿಯಮ ಉಲ್ಲಂಘನೆ ಪ್ರಕರಣಗಳು ಬೆಲಕಿಗೆ ಬಂದಿದೆ. ಹೀಗಾಗಿ ಪೊಲೀಸರು ದುಬಾರಿ ಮೊತ್ತದ ಫೈನ್ ಹಾಕಿದ್ದಾರೆ.(ಫೈನ್ ಮೊತ್ತ ಬಹಿರಂಗವಾಗಿಲ್ಲ) . ದುಬಾರಿ ದಂಡ ನೋಡಿದ ಬೈಕ್ ಸಾವರ ನಡು ರಸ್ತೆಯಲ್ಲಿ ಬೈಕನ್ನು ನೆಲಕ್ಕೆ ಎತ್ತಿ ಹಾಕಿದ್ದಾನೆ.

 

ಇದನ್ನೂ ಓದಿ: ಟಿಕ್‌‍ಟಾಕ್ ವಿಡಿಯೋಗಾಗಿ ಜೀಪ್‌ಗೆ ಬೆಂಕಿ ಹಾಕಿದ ಭೂಪ!

ನಾಲ್ಕೈದು ಬಾರಿ ಬೈಕ್ ಕೆಳಗೆ ಬೀಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ದಂಡ ಕಟ್ಟದೇ ಬೇರೆ ವಿಧಿ ಇಲ್ಲ ಎಂದು ಅರಿವಾದಾಗ ನಡು ರಸ್ತೆಯಲ್ಲಿ ಬಿದ್ದ ಬೈಕ್ ಕುಳಿತು ಅತ್ತಿದ್ದಾನೆ. ಸವಾರ ತನ್ನ ಬೈಕನ್ನೇ ಪುಡಿ ಮಾಡಲು ಯತ್ನಿಸುತ್ತಿರುವಾಗ ಸುತ್ತ ಪೊಲೀಸರು ಹಾಗೂ ಸಾರ್ವಜನಿಕರು ಪ್ರೇಕ್ಷಕರಾಗಿ ನಿಂತಿದ್ದರು. ಎಲ್ಲರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ:ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!

ನಿಯಮ ಉಲ್ಲಂಘನೆ ಮಾಡಿದವರಿಗೆ ಯಾವುದೇ ವಿನಾಯಿತಿ ಇಲ್ಲ. ಲಕ್ಷ ರೂಪಾಯಿ ಬೈಕ್ ಖರೀದಿಸುವಾಗ ಸಾವಿರ ರೂಪಾಯಿ ಹೆಲ್ಮೆಟ್ ಖರೀದಿ ಕಷ್ಟವಾಗುತ್ತಾ? ಸಿಗ್ನಲ್ ನಿಯಮ ಪಾಲನೆ, ರಾಂಗ್ ಸೈಡ್, ಪಾರ್ಕಿಂಗ್ ಸೇರಿದಂತೆ ರಸ್ತೆ ನಿಯಮ ಪಾಲಿಸಿದರೆ ಈ ನಾಟಕದ ಅವಶ್ಯಕತೆ ಇಲ್ಲ. ಯುವ ಬೈಕ್ ಸಾವಾರರು ರಸ್ತೆಯಲ್ಲಿ ಶೋಕಿ ಮಾಡೋ ಬದಲು ನಿಯಮ ಪಾಲಿಸಬೇಕು. ನಿಯಮ ಎಲ್ಲರಿಗೂ ಒಂದೇ ಎಂದು ಮೀರತ್ ಪೊಲೀಸರು ಹೇಳಿದ್ದಾರೆ.

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ