ಟಾಟಾ ಹ್ಯಾರಿಯರ್ ಹಾಗೂ ಇತರ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದಿರುವ MG ಹೆಕ್ಟರ್ ಭಾರತದಲ್ಲಿ ದಾಖಲೆ ಮಾರಾಟವಾಗಿದೆ. ಇದೀಗ ಎಂಜಿ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ನೂತನ ಕಾರಿನ ವಿಶೇಷತೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಡಿ.5): MG ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಹೆಕ್ಟರ್ Suv ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಮೋಟೋರಾಸ್ ಭಾರತದಲ್ಲಿ ಎರಡನೇ ಕಾರು ಅನಾವರಣ ಮಾಡಿದೆ. ಇದು ಎಲೆಕ್ಟ್ರಿಕ್ ಕಾರು ಅನ್ನೋದೇ ವಿಶೇಷ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ MG ZS ಎಲೆಕ್ಟ್ರಿಕ್ ಕಾರನ್ನು ಎಂಜಿ ಅನಾವರಣ ಮಾಡಿದೆ. 

ಇದನ್ನೂ ಓದಿ: MG ಹೆಕ್ಟರ್ 700 ಕಾರು ಮಾರಾಟ; ದೀಪಾವಳಿಗೆ ದಾಖಲೆ!

ಲಂಡನ್ ಮಾರುಕಟ್ಟೆಯಲ್ಲಿರುವ MG ZS ಎಲೆಕ್ಟ್ರಿಕ್ ಕಾರು ಇದೀಗ ಭಾರತದಲ್ಲಿ ಅನಾವರಣಗೊಂಡಿದೆ. ಬಿಡಿ ಭಾಗಗಳನ್ನು ತರಿಸಿ, ಭಾರತ ಗುಜರಾತ್‌ನಲ್ಲಿರುವ ಎಂಜಿ ಘಟಕದಲ್ಲಿ ಜೋಡಿಸಲಾಗಿದೆ. ನೂತನ ಕಾರು 2020ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವುದರಿಂದ ಬೆಲೆಯಲ್ಲೂ ಪೈಪೋಟಿ ನೀಡಲಿದೆ ಅನ್ನೋ ಮಾಹಿತಿಯನ್ನು MG ಹೇಳಿದೆ.

Scroll to load tweet…

ಇದನ್ನೂ ಓದಿ: MG ಹೆಕ್ಟರ್ ಕಾರಿನಲ್ಲಿದೆ 5 ವಿಶೇಷತೆ-ಇತರ ಕಾರಿಗಿಂತ ಭಿನ್ನ!

ನೂತನ MG ZS ಎಲೆಕ್ಟ್ರಿಕ್ ಕಾರು ಹ್ಯುಂಡೈ ಕ್ರೆಟಾ ಕಾರಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು, ತಮ್ಮದೇ ಕಂಪನಿಯ ಹೆಕ್ಟರ್ ಕಾರಿಗಿಂತ ಚಿಕ್ಕದು. ಈ ಕಾರಿನಲ್ಲಿ 44.5 kWh ಬ್ಯಾಟರಿ ಬಳಸಲಾಗಿದೆ. ಹೀಗಾಗಿ ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಕಾರಿನ ಬ್ಯಾಟರಿ 40 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. MG ZS ಎಲೆಕ್ಟ್ರಿಕ್ ಕಾರಿನ ಎಂಜಿನ್ 141 bhp ಪವರ್ 353 Nm ಟಾಪ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: