ಮರ್ಸಿಡೀಸ್ ಬೆಂಜ್ EQ ಎಲೆಕ್ಟ್ರಿಕ್ ಕಾರು ಬಿಡುಗಡೆ!

ಮರ್ಸಿಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ನೂತನ ಕಾರು ಎಪ್ರಿಲ್ ತಿಂಗಳಿನಿಂದ ಭಾರತದಲ್ಲಿ ಲಭ್ಯವಾಗಲಿದೆ. ಈ ಕಾರಿನ ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Mercedes-Benz launch EQ electric car

ನವದೆಹಲಿ(ಜ.14): ಹೊಸ ವರ್ಷದವಲ್ಲಿ ಬಹುತೇಕ ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ದುಬಾರಿ ಹಾಗೂ ಐಷಾರಾಮಿ ಕಾರಾಗಿರುವ ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಎಂಜಿ ಮೋಟಾರ್ಸ್ ZE , ಟಾಟಾ ನೆಕ್ಸಾನ್ EV ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ ಮರ್ಸಡೀಸ್ ಬೆಂಜ್ ಕೂಡ ಜನವರಿ ಆರಂಭದಲ್ಲೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ವಿಶ್ವ ಮಾರುಕಟ್ಟೆಯಲ್ಲಿ ಮರ್ಸಿಡೀಸ್ ಬೆಂಜ್   EQ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಈ ಕಾರು  ಭಾರತದಲ್ಲಿ EQ ಎಲೆಕ್ಟ್ರಿಕ್ ಕಾರನ್ನು ಅನಾವರಣ ಮಾಡಲಾಗಿದೆ. ಈ ಮೂಲಕ ಭಾರತದಲ್ಲಿ ಬಿಡುಗಡೆ ಖಚಿತಪಡಿಸಿದೆ. 2022ರ ವೇಳೆಗೆ ಮರ್ಸಿಡೀಸ್‌ನ ಎಲ್ಲಾ 130 ವೇರಿಯೆಂಟ್ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಬಂಪರ್ ಸೇಲ್: ಒಂದೇ ದಿನ 600 ಬೆಂಝ್‌ ಕಾರು ಸೇಲ್‌!

2020ರ ಎಪ್ರಿಲ್ ತಿಂಗಳಲ್ಲಿ ಈ ಕಾರು ಭಾರತದಲ್ಲೂ ಲಭ್ಯವಾಗಲಿದೆ. ಆಡಿ ಈಗಾಗಲೇ ಇ ಟ್ರಾನ್ ಕಾರನ್ನು ಪರಿಚಯಿಸಿದೆ. ಇತ್ತ BMW ಕೂಡ ಹೈಬ್ರಿಡ್ ಕಾರು ಪರಿಚಯಿಸುತ್ತಿದೆ. ಹೀಗಾಗಿ ಮರ್ಸಿಡೀಸ್ ಬೆಂಜ್ EQ ಎಲೆಕ್ಟ್ರಿಕ್ ಕಾರಿಗೆ ತೀವ್ರ ಪೈಪೋಟಿ ಎದುರಾಗಲಿದೆ.

ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!

80 kWh ಲಿಥಿಯಂ ಐಯಾನ್ ಬ್ಯಾಟರಿ ಚಾಲಿತ ಮರ್ಸಿಡೀಸ್ ಬೆಂಜ್ EQ ಎಲೆಕ್ಟ್ರಿಕ್ ಕಾರು, 402bhp ಪವರ್ ಹಾಗೂ 765 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಒಂದು 400km ಮೈಲೇಜ್ ರೇಂಜ್ ನೀಡಲಿದೆ.  

Latest Videos
Follow Us:
Download App:
  • android
  • ios