ಮರ್ಸಡೀಸ್ ಬೆಂಝ್ ಕಾರು ಖರೀದಿಸೋ ಗ್ರಾಹಕರಿಗೆ ಕಂಪನಿ ಭರ್ಜರಿ ಕೊಡುಗೆ ನೀಡಿದೆ. 25ನೇ ವರ್ಷದ ಸಂಭ್ರಮದಲ್ಲಿರುವ ಬೆಂಝ್ ಘೋಷಿಸಿದ ಆಫರ್ ಹೇಗಿದೆ? ಇಲ್ಲಿದೆ ವಿವರ.

ನವದೆಹಲಿ(ಜು.07): ಜರ್ಮನ್ ಆಟೋಕಂಪನಿ ಮರ್ಸಡೀಸ್ ಬೆಂಝ್ ಭಾರತದಲ್ಲಿ 25ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಹೀಗಾಗಿ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಮರ್ಸಡೀಸ್ ಬೆಂಝ್ ಎಲ್ಲಾ SUV ಕಾರುಗಳಿಗೆ ಈ ಕೊಡುಗೆ ಅನ್ವಯವಾಗಲಿದೆ. ಮರ್ಸಿಡೀಸ್ ಬೆಂಝ್ SUV ಕಾರು ಖರೀದಿಸುವ ಗ್ರಾಹಕರಿಗೆ 25% ಹೆಚ್ಚುವರಿ ಸೌಲಭ್ಯ ನೀಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗಲಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರು!

ಮರ್ಸಿಡೀಸ್ ಬೆಂಝ್ SUV ಕಾರುಗಳಾದ GLC, GLE ಹಾಗೂ GLS ಕಾರುಗಳಿಗೆ ನೂತನ ಆಫರ್ ಅನ್ವಯವಾಗಲಿದೆ. ಕಡಿಮೆ ಬಡ್ಡಿ ದರ, ಇನ್ಶುರೆನ್ಸ್, ಸರ್ವೀಸ್ ಪ್ಯಾಕೇಜ್, ಹೆಚ್ಚುವರಿ ವ್ಯಾರೆಂಟಿ ಹಾಗೂ ಆಕ್ಸೆಸರಿ ಆಫರ್ ನೀಡಿದೆ. ಈ ವರ್ಷದ ಆರಂಭದಲ್ಲಿ ಸಮ್ಮರ್ ಕ್ಯಾಂಪ್ ಕೂಡ ಆಯೋಜಿಸಿತ್ತು.

ಇದನ್ನೂ ಓದಿ: ದೂರ ಪ್ರಯಾಣ ಮಾಡುವವರಿಗೆ ಸಂತಸದ ಸುದ್ದಿ!

1994ರಲ್ಲಿ ಮರ್ಸಡೀಸ್ ಬೆಂಝ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿತು. ಇದೀಗ 25ನೇ ವರ್ಷದ ಸಂಭ್ರಮದಲ್ಲಿದೆ. ದುಬಾರಿ ಹಾಗೂ ಐಷಾರಾಮಿ ಕಾರಾಗಿರುವ ಮರ್ಸಡೀಸ್ ಬೆಂಝ್ ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಹೊಂದಿದೆ. ದುಬಾರಿ ಕಾರುಗಳ ಪೈಕಿ ಭಾರತದಲ್ಲಿ ಬೆಂಝ್ ಮುಂಚೂಣಿಯಲ್ಲಿದೆ.