ಬೆಂಗಳೂರು(ಮಾ.20): ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಾರುಗಳು ಇದೀಗ ವಿದೇಶಗಳಂತೆ ಹಲವು ನಿಯಮ ಪಾಲಿಸಬೇಕು. ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ. ಎಮಿಶನ್ BS-VI ಇರಬೇಕು. ಹೀಗಾಗಿಯೇ ಕಂಪೆನಿಗಳು ಅತ್ಯುತ್ತಮ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ವರ್ಷ ಹಳೇ ಕಾರುಗಳು ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿವೆ. ಇನ್ನು ಕೆಲವು ಹೊಸ ಕಾರುಗಳನ್ನೇ ಬಿಡುಗಡೆ ಮಾಡಿ ಮಾರಾಟದಲ್ಲಿ ದಾಖಲೆ ಬರೆದಿದೆ. 

ಇದನ್ನೂ ಓದಿ: ಇನೋವಾ ಕಾರಿಗೆ ಪೈಪೋಟಿ- ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ RBC ಕಾರು!

2019ರ ಜನವರಿಯಿಂದ ಇಲ್ಲೀವರೆಗೆ ಸುಮಾರು 15ಕ್ಕೂ ಹೆಚ್ಚುಗಳು ಕಾರುಗಳ ಬಿಡುಗಡೆಯಾಗಿದೆ. 2.66 ಲಕ್ಷ ರೂಪಾಯಿ ಬೆಲೆಯಿಂದ ಬರೋಬ್ಬರಿ 3 ಕೋಟಿಗೂ ಹೆಚ್ಚು ಮೌಲ್ಯದ ಕಾರುಗಳು ಬಿಡುಗಡೆಯಾಗಿದೆ. ಈ 3 ತಿಂಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರುಗಳ ವಿವರ ಇಲ್ಲಿದೆ.

ಮಾರುತಿ ವ್ಯಾಗನ್ಆರ್
ಬೆಲೆ: 4.19 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)


ಮಾರುತಿ ಸುಜುಕಿ ನೂತನ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹಳೇ ವ್ಯಾಗನ್ಆರ್ ಕಾರಿಗಿಂತ ದೊಡ್ಡದಾದ ಹೊಚ್ಚ ಹೊಸ ವ್ಯಾಗನ್ಆರ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿ ಬೆಲೆ 4.19 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. LXI,VXI ಹಾಗೂ ZXI ಮೂರು ವೇರಿಯೆಂಟ್‌ಗಳಲ್ಲಿ ವ್ಯಾಗನ್ಆರ್ ಕಾರು ಲಭ್ಯವಿದೆ. 1.0 ಲೀಟರ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಟೋ ಗೇರ್ ಶಿಫ್ಟ್ ಕೂಡ ಲಭ್ಯವಿದೆ. ವ್ಯಾಗನ್ಆರ್ ಕಾರು ನೂತನ ಹ್ಯುಂಡೈ ಸ್ಯಾಂಟ್ರೋ ಹಾಗೂ ಟಾಟಾ ಟಿಯಾಗೋ ಕಾರಿಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!

ರೆನಾಲ್ಟ್ ಕ್ವಿಡ್ ABS
ಬೆಲೆ: 2.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ರೆನಾಲ್ಟ್ ಸಂಸ್ಥೆಯ ನೂತನ ಕ್ವಿಡ್ ಕಾರು  ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.  ನೂತನ ಕ್ವಿಡ್ ಕಾರಿನ ಆರಂಭಿಕ ಬೆಲೆ 2.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೇಸ್ ಮಾಡೆಲ್‌ನಿಂದ ಹಿಡಿದು ಎಲ್ಲಾ ಮಾಡೆಲ್ ಕಾರುಗಳಲ್ಲಿ ABS ತಂತ್ರಜ್ಞಾನ ಲಭ್ಯವಿದೆ. ಡ್ರೈವರ್ ಏರ್‍‌ಬ್ಯಾಗ್, ಸೆನ್ಸಾರ್ ಡೋರ್ ಲಾಕ್, ELR ಸೀಟ್ ಬೆಲ್ಟ್, ರೇರ್ ಸೀಟ್ ಬೆಲ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಓವರ್ ಸ್ವೀಡ್ ಅಲರ್ಟ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ನೂತನ ಕ್ವಿಡ್ ಕಾರಿನಲ್ಲಿ ಲಭ್ಯವಿದೆ.

ಫೋರ್ಡ್ ಫಿಗೋ ಫೇಸ್‌ಲಿಫ್ಟ್
ಬೆಲೆ: 5.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ಮಾರುತಿ ಸಿಫ್ಟ್, ವೋಕ್ಸ್‌ವ್ಯಾಗನ್ ಪೋಲೋ, ಹ್ಯುಂಡೈ ಐ10 ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಫೋರ್ಡ್ ಫಿಗೋ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 5.15 ಲಕ್ಷ ರೂಪಾಯಿ. ಇನ್ನು ಟಾಪ್ ವೇರಿಯೆಂಟ್ ಟೈಟಾನಿಯಂ 1.5 ಪೆಟ್ರೋಲ್ ಕಾರಿಗೆ 8.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಫೋರ್ಡ್ ಫಿಗೋ 1.2 ಲೀಟರ್,3 ಸಿಲಿಂಡರ್ ಪೆಟ್ರೋಲ್ ಎಂಜಿನ್,  96 PS ಪವರ್ ಹಾಗೂ 120 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ವೇರಿಯೆಂಟ್ ಕಾರು 1.5 ಲೀಟರ್, ಟರ್ಬೋಚಾರ್ಜ್ ಎಂಜಿನ್, 100 PS ಪವರ್ ಹಾಗೂ 215 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು  1.5 ಲೀಟರ್ ಪೆಟ್ರೋಲ್ ಎಂಜಿನ್  123PS ಪವರ್ ಉತ್ಪಾದಿಸಲಿದೆ.

ಇದನ್ನೂ ಓದಿ: ಭಾರತಕ್ಕೆ ಕಾಲಿಡುತ್ತಿದೆ ಫ್ರೆಂಚ್ SUV ಕಾರು -ಟಾಟಾಗೆ ಪೈಪೋಟಿ!

ಬಲೆನೊ RS ಫೇಸ್‌ಲಿಫ್ಟ್
ಬೆಲೆ: 8.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


2019ರ ಮಾರುತಿ ಬಲೆನೋ  RS ಫೇಸ್‌ಲಿಫ್ಟ್ ಕಾರು ಈ ವಾರದಿಂದ ಮಾರಾಟ ಆರಂಭಿಸಲಿದೆ. ನೂತನ RS ಫೇಸ್‌ಲಿಫ್ಟ್ ಕಾರಿನ ಬೆಲೆ 8.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರು ಕೆಲ ಬದಲಾವಣೆಗಳೊಂದಿಗೆ ರಸ್ತೆಗಿಳಿದಿದೆ. ಆದರೆ ಎಂಜಿನ್ ಹಾಗೂ ಟ್ರಾನ್ಸಿಮಿಶನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.ಹಳೇ ಬೆಲೆನೊ RS ಕಾರಿನ 1.0 ಲೀಟರ್, 3 ಸಿಲಿಂಡರ್, ಟರ್ಬೋ ಚಾರ್ಜಡ್ ಎಂಜಿನ್ ಹೊಂದಿದೆ.  100bhp ಪವರ್ ಹಾಗೂ 150nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ - ಹೊಸ ಅವತಾರದಲ್ಲಿ ಮಾರುತಿ ಅಲ್ಟೋ!

ಫೋರ್ಡ್ ಆಸ್ಪೈರ್ CNG
ಬೆಲೆ: 6.27 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)


ಫೋರ್ಡ್ ಸಂಸ್ಥೆ ನೂತನ ಆಸ್ಪೈರ್ ಕಾರು CNG ವೇರಿಯೆಂಟ್ ಬಿಡುಗಡೆ ಮಾಡಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರಿಗೆ CNG ಕಿಟ್ ಅಳವಡಿಸಿದ ಫ್ರೋರ್ಡ್ ಆಸ್ಪೈರ್ ರಸ್ತೆಗಿಳಿದಿದೆ. CNG ಆಸ್ಪೈರ್ ಆಂಬಿಯೆಂಟ್ ಮಾಡೆಲ್ ಬೆಲೆ 6.27 ಲಕ್ಷ ರೂಪಾಯಿ ಹಾಗೂ CNG ಟ್ರೆಂಡ್ ಪ್ಲಸ್ ಬೆಲೆ 7.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). .2 ಲೀಟರ್ ಫೋರ್ಡ್ ಆಸ್ಪೈರ್ CNG ಕಾರು 95 bhp ಪವರ್ ಹಾಗೂ 120 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿಶೇಷ ಅಂದರೆ CNG ಕಾರು ಪ್ರತಿ ಕಿ.ಮೀ ಪ್ರಯಾಣದ ವೆಚ್ಚ ಕೇವಲ 46 ಪೈಸೆ ಮಾತ್ರ. 10,000 ಕಿ.ಮೀ ಕಾರು ಸರ್ವೀಸ್ ಹಾಗೂ 20,000 ಕಿ.ಮೀ ಗೆ CNG ಕಿಟ್ ಸರ್ವೀಸ್ ಮಾಡಬೇಕು.

ಇದನ್ನೂ ಓದಿ: ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬಿಡುಗಡೆ - ಕಡಿಮೆ ಬೆಲೆ, ಗರಿಷ್ಠ ಮೈಲೇಜ್!

ಮಹೀಂದ್ರ XUV300
ಬೆಲೆ:  7.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ಭಾರತದ ಕಾರು ಮಾರುಕಟ್ಟೆಯಲ್ಲೀಗ ಸ್ವದೇಶಿ ಕಾರುಗಳದ್ದೇ ಮೇಲಗೈ. ಒಂದೆಡೆ ಟಾಟಾ ಮೋಟಾರ್ಸ್ ಮತ್ತೊಂದೆಡೆ ಮಹೀಂದ್ರ. ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಹೀಂದ್ರ XUV300 ಕಾರು ಸಂಚಲನ ಮೂಡಿಸಿದೆ. ನೂತನ ಮಹೀಂದ್ರ  XUV300 ಕಾರಿನ ಬೆಲೆ 7.90 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ  XUV300 ಕಾರು ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. ಈ ಕಾರನ್ನು 20,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು.

ಟಾಟಾ ಹ್ಯಾರಿಯರ್
ಬೆಲೆ: 12.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ಟಾಟಾ ಹ್ಯಾರಿಯರ್ ಕಾರು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಟಾಟಾ ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ.   Tata Harrier ಬೆಲೆ 12.69 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ. ಟಾಪ್ ಮಾಡೆಲ್ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). XE, XM, XT, ಹಾಗೂ XZ ಸೇರಿದಂತೆ ಒಟ್ಟು 4 ವೇರಿಯೆಂಟ್‌ಗಳಲ್ಲಿ Tata Harrier ಕಾರು ಲಭ್ಯವಿದೆ. ಕೇವಲ ಡೀಸೆಲ್ ವೇರಿಯೆಂಟ್ ಕಾರು ಮಾತ್ರ ಲಭ್ಯವಿದೆ.  

ಇದನ್ನೂ ಓದಿ: ಫೆಬ್ರವರಿಯಲ್ಲಿ ಗರಿಷ್ಠ ಮಾರಾಟವಾದ ಸಣ್ಣ ಕಾರು- ಇಲ್ಲಿದೆ ಲಿಸ್ಟ್!

ಹೋಂಡಾ ಸಿವಿಕ್‌
ಬೆಲೆ: 17.69 ಲಕ್ಷ (ಎಕ್ಸ್ ಶೋ ರೂಂ)


ಹೊಂಡಾ ಸಂಸ್ಥೆ ನೂತನ ಸಿವಿಕ್ ಕಾರು ಬಿಡುಗಡೆ ಮಾಡಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಭಾರತದಲ್ಲಿ ಹೊಂಡಾ ಸಿವಿಕ್ ಕಾರು ಬಿಡುಗಡೆಯಾಗಿದೆ. ಸ್ಕೋಡಾ ಒಕ್ಟಿವಾ, ಟೊಯೊಟಾ ಕೊರೊಲಾ ಹಾಗೂ ಹ್ಯುಂಡೈ ಎಲಾಂಟ್ರ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಸಿಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ABS, EBD ಸೇರಿದಂತೆ ಗರಿಷ್ಠ ಸುರಕ್ಷತೆಯ ಬ್ರೇಕ್, ಕ್ರಾಶ್ ಟೆಸ್ಟ್ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ.  1.8 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್  139 bhp ಪವರ್ ಹಾಗೂ  174 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  1.6 ಲೀಟರ್  i-DTEC ಡೀಸೆಲ್ ಎಂಜಿನ್ 118 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೋಂಡಾ ಸಿವಿಕ್‌ನ ಪ್ರಾರಂಭಿಕ ಬೆಲೆ ರೂ.17,69,900 ದಿಂದ ಶುರುವಾಗಿ ರೂ.20,99,900 ವರೆಗು ಇದೆ. ಇನ್ನೂ ಡೀಸಲ್‌ ಸಿವಿಕ್‌ನ ಪ್ರಾರಂಭದ ಬೆಲೆ ರೂ.20,49,900 ರಿಂದ ರೂ.22,29,900 ಲಕ್ಷದವರೆಗೂ ಇದೆ. 

ಮರ್ಸಿಡಿಸ್‌ ಬೆಂಝ್‌ ವಿ-ಕ್ಲಾಸ್‌
ಬೆಲೆ:  68.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ಲಕ್ಸುರಿ ವಾಹನಗಳಿಗೆ ಮತ್ತೊಂದು ಹೆಸರು ಮರ್ಸಿಡಿಸ್‌-ಬೆಂಝ್‌. ಮರ್ಸಿಡಿಸ್‌ ಬೆಂಝ್‌ ವಿ-ಕ್ಲಾಸ್‌ ಕಾರು ಜನವರಿಯಲ್ಲಿ ಬಿಡುಗಡೆಯಾಗಿದೆ. ಭಾರದಲ್ಲಿ ನಿರ್ಮಾಣವಾದ(ಮೇಕ್ ಇನ್ ಇಂಡಿಯಾ)ಕಾರು ಇದಾಗಿದ್ದು ಹಲವು ವಿಶೇಷತೆ ಹೊಂದಿದೆ. ಬಿಸಿನೆಸ್‌, ಸ್ಪೋರ್ಟ್ಸ್, ಲೈಫ್‌ ಸ್ಟೈಲ್‌ ಹಾಗೂ ಫ್ಯಾಮಿಲಿ ಸೇರಿ ಎಲ್ಲಾ ವರ್ಗಕ್ಕೂ ಹೇಳಿ ಮಾಡಿಸಿದಂತಿದೆ ಈ ಕಾರು. ವಿ-ಕ್ಲಾಸ್‌ ಎಕ್ಸ್‌ ಎಕ್ಸ್‌ಶೋ ರೂಮ್‌(ಮುಂಬೈ) ಬೆಲೆ ರೂ.68.40 ಲಕ್ಷದಿಂದ ಆರಂಭ. ಎಕ್ಸಕ್ಲೂಸಿವ್‌ ದರ ರೂ.81.90 ಲಕ್ಷದಿಂದ ಆರಂಭ. 

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್
ಬೆಲೆ: 53.77 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)


ಟಾಟಾ ಒಡೆತನದ ಲ್ಯಾಂಡ್ ರೋವರ್ ಕಂಪನಿ ಇದೀಗ ಡಿಸ್ಕವರಿ ಸ್ಪೋರ್ಟ್ ಲ್ಯಾಂಡ್‌ಮಾರ್ಕ್ ಎಡಿಶನ್ SUV ಕಾರು ಬಿಡುಗಡೆ ಮಾಡಿದೆ. ಡಿಸ್ಕವರಿ ಸ್ಪೋರ್ಟ್ ಲ್ಯಾಂಡ್‌ಮಾರ್ಕ್ ಎಡಿಶನ್ SUV ಕಾರಿನ ಬೆಲೆ 53.77 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರು ನೂತನ ಕಾರು, 132 kW (180 PS) ಪವರ್ ಹಾಗೂ  430 Nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಇನ್ನು 9 ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ನೂತನ ಕಾರಿನ ಗರಿಷ್ಠ ವೇಗ 188 /kmph. ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆನ್ ಬೋರ್ಡ್ ವೈಫೈ, TFT ಸ್ಕ್ರೀನ್ ಡಿಸ್‌ಪ್ಲೇ  ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿದೆ.