ನವದೆಹಲಿ(ಮಾ.16): ಮಾರುತಿ ಸುಜುಕಿ ಸಂಸ್ಥೆ ನೂತನ ಅಲ್ಟೋ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈ ಮೊದಲೇ ಹೇಳಿದಂತೆ ಹೊಸ ಅವತಾರದಲ್ಲಿ ಮಾರುತಿ ಅಲ್ಟೋ ಬಿಡುಗಡೆಯಾಗುತ್ತಿದೆ. SUV ರೀತಿಯಲ್ಲಿರುವ ನೂತನ ಅಲ್ಟೋ ನೆಕ್ಸ್ಟ್ ಜನರೇಶನ್ ಕಾರು ಈಗಾಗಲೇ ರೋಡ್ ಟೆಸ್ಟ್ ಪೂರೈಸಿದೆ.

ಇದನ್ನೂ ಓದಿ: ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಹುಷಾರ್: ಬೀಳುತ್ತೆ ಭಾರೀ ದಂಡ

BSVI ಎಮಿಶನ್ ಹಾಗೂ ಸುರಕ್ಷತಾ ನಿಯಮಗಳನ್ನ ಪಾಲಿಸಿರುವ ನೂತನ ಅಲ್ಟೋ ಸಣ್ಣ ಕಾರು ವಿಭಾಗದಲ್ಲಿ ಮತ್ತೊಮ್ಮೆ ಮೊದಲ ಸ್ಥಾನಕ್ಕೇರುವ ಎಲ್ಲಾ ಸಾಧ್ಯತೆ ಇದೆ. ಹ್ಯಾಚ್‌ಬ್ಯಾಕ್ ಕಾರಿನಿಂದ ಇದೀಗ ಮಾರುತಿ ಅಲ್ಟೋ SUV ಶೈಲಿಯಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಫ್ಯುಚಸ್ S ಕಾನ್ಸೆಪ್ಟ್ ಕಾರನ್ನೇ ಹೋಲುತ್ತಿರುವ ನೂತನ ಅಲ್ಟೋ ಗ್ರಾಹಕರ ಕುತೂಹಲ ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬಿಡುಗಡೆ - ಕಡಿಮೆ ಬೆಲೆ, ಗರಿಷ್ಠ ಮೈಲೇಜ್!

ನೂತನ ಆಲ್ಟೋ ಕಾರು 1.0- ಲೀಟರ್ K-ಸೀರಿಸ್ ಎಂಜಿನ್ ಹೊಂದಿದ್ದು, 68PS ಪವರ್ ಹಾಗೂ 90Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸದ್ಯ ಮಾರುತಿ ಅಲ್ಟೋ 800 ಬೆಲೆ  2.62 ಲಕ್ಷ ರೂಪಾಯಿಯಿಂದ 3.93 ಲಕ್ಷ ರೂಪಾಯಿ. ಇನ್ನು ಆಲ್ಟೋ K10 ಬೆಲೆ 3.38 ಲಕ್ಷ ರೂಪಾಯಿಂದ 4.27 ಲಕ್ಷ ರೂಪಾಯಿ. ಇನ್ನು BSVI ಎಮಿಶನ್ ಹಾಗೂ ಸುರಕ್ಷತೆಯ ದೃಷ್ಟಿಯಿಂದ ನೂತನ ಅಲ್ಟೋ ಬೆಲೆ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.