Asianet Suvarna News Asianet Suvarna News

ಶೀಘ್ರದಲ್ಲೇ ಮಹೀಂದ್ರ XUV500 ಪ್ರತಿಸ್ಪರ್ಧಿ-ಮಾರುತಿ ಗ್ರ್ಯಾಂಡ್ ವಿಟಾರ SUV!

ಮಹೀಂದ್ರ 7 ಸೀಟರ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ ಮಾಡಲು ಮುಂದಾಗಿದೆ. 7 ಸೀಟರ್ ವಿಟಾರ ಗ್ರ್ಯಾಂಡ್ ಕಾರು ಬಿಡುಗಡೆ ಮಾಡಲಿರುವ ಮಾರುತಿ, ಗರಿಷ್ಠ ಫೀಚರ್ ನೀಡಲು ನಿರ್ಧರಿಸಿದೆ.

Maruti Suzuki will launch 7 seat Vitara grand to compete Mahindra XUV500
Author
Bengaluru, First Published Dec 14, 2018, 6:20 PM IST

ನವದೆಹಲಿ(ಡಿ.14): ಮಾರುತಿ ವಿಟಾರ ಬ್ರಿಜಾ ಕಾರು ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  4 ಮೀಟರ್ ಸಬ್ SUV ಕಾರಿನಲ್ಲಿ ಹೆಚ್ಚು ಗಮನಸೆಳೆದಿರುವ ಮಾರುತಿ ಬ್ರಿಜಾ ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಹಲವು SUV ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

Maruti Suzuki will launch 7 seat Vitara grand to compete Mahindra XUV500

ಮಾರುತಿ ಇದೀಗ ಮಹೀಂದ್ರ XUV500 ಕಾರಿಗೆ ಪೈಪೋಟಿ ನೀಡಲು ಮುಂದಾಗಿದೆ. ಇದಕ್ಕಾಗಿ 7 ಸೀಟರ್ ಮಾರುತಿ ಗ್ರ್ಯಾಂಡ್ ವಿಟಾರ SUV ಕಾರು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಭಾರತದಲ್ಲಿ ಗ್ರ್ಯಾಂಡ್ ವಿಟಾರಾ ಕಾರು 2005ರಲ್ಲಿ ಬಿಡುಗಡೆಯಾಗಿತ್ತು. ಆದರೆ ಮಾರಾಟದಲ್ಲಿ ಇಳಿಮುಖವಾಗಿತ್ತು. 

ಇದನ್ನೂ ಓದಿ: ದಿವಾಳಿಯಾಗಿದೆ ಭಾರತೀಯರ ಮನಗೆದ್ದ ಪ್ರಿಮಿಯರ್ ಪದ್ಮಿನಿ ಕಂಪೆನಿ!

ಭಾರತದಲ್ಲಿ ಸದ್ಯ SUV ಕಾರಿಗೆ ಹೆಚ್ಚಿನ ಬೇಡಿಕೆ ಇದೆ. 4 ಮೀಟರ್ ಸಬ್ SUV ಕಾರಿನಲ್ಲಿ ಮುಂಚೂಣಿಯಲ್ಲಿರುವ ಮಾರುತಿ, 7 ಸೀಟರ್ ಕಾರಿನಲ್ಲಿ ಹಿನ್ನಡೆ ಅನುಭವಿಸಿದೆ. ಮಹೀಂದ್ರ 7 ಸೀಟರ್ ಕಾರುಗಳು ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕಾಗಿ ಮಾರುತಿ ಗ್ರ್ಯಾಂಡ್ ವಿಟಾರಾ ಬಿಡುಗಡೆ ಮಾಡಲು ಮುಂದಾಗಿದೆ. 2019ರ ಅಂತ್ಯದಲ್ಲಿ ವಿಟಾರ ಗ್ರ್ಯಾಂಡ್ ಭಾರತದಲ್ಲಿ ಬಿಡುಗಡೆಯಾಗಲಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios