ಮುಂಬೈ(ಡಿ.13): ಪ್ರಿಮಿಯರ್ ಪದ್ಮನಿ ಕಾರು ನಿರ್ಮಾಣ ನಿಲ್ಲಿಸಿ 2 ದಶತಗಳೇ ಉರುಳಿದೆ. ಆದರೆ ಭಾರತೀಯರ ಈ ಕಾರನ್ನ ಮರೆತಿಲ್ಲ. ಈಗಲೂ ಹಲವು ಕಡೆ ಪ್ರಿಮಿಯರ್ ಪದ್ಮಿನಿ ರಸ್ತೆಗಳಲ್ಲಿ ಮಿಂಚುತ್ತಿದೆ. 1950 ರಿಂದ 1997ರ ವರೆಗೆ ಭಾರತೀಯರ ಮನಗೆದ್ದಿದ್ದ ಪ್ರಿಮಿಯರ್ ಪದ್ಮಿನಿ ಕಂಪೆನಿ ಇದೀಗ ದಿವಾಳಿಯಾಗಿದೆ.

ಇದನ್ನೂ ಓದಿ: 1 ಲೀಟರ್‌ನಲ್ಲಿ 250 ಕೀ.ಮಿ ಮೈಲೇಜ್-ದಾಖಲೆ ಬರೆದ ಕಾರು!

1990ರ ದಶಕದಲ್ಲಿ ಪ್ರಿಮಿಯರ್ ಪದ್ಮಿನಿ ಕಾರು, ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯೆ ಅಂಬಾಸಿಡರ್, ಮಾರುತಿ ಸುಜುಕಿ 800 ಸೇರಿದಂತೆ ಇತರ ಕಂಪೆನಿಗಳಿಂದ ತೀವ್ರ ಪೈಪೋಟಿ ಎದುರಿಸಿತು. ಹೀಗಾಗಿ ನಷ್ಟದಲ್ಲಿದ್ದ ಕಂಪೆನಿ 1997ರಲ್ಲಿ ಸ್ಥಗಿತಗೊಂಡಿತು. ಇದೀಗ ಪ್ರಿಮಿಯರ್ ಪದ್ಮಿನಿ ಲಿಮಿಟೆಡ್ ಕಂಪೆನಿ ಬರೋಬ್ಬರಿ 52 ಕೋಟಿ ರೂಪಾಯಿ ಇತರರ ನೀಡಬೇಕಿದೆ.

ಇದನ್ನೂ ಓದಿ: 38 ತಿಂಗಳಲ್ಲಿ ದಾಖಲೆ ಬರೆದ ಮಾರುತಿ ಬಲೆನೋ ಕಾರು!

ಕಂಪೆನಿ ಸ್ಥಗಿತಗೊಂಡ ಬಳಿಕ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಪ್ರಿಮಿಯರ್ ಪದ್ಮಿನಿ ಕಂಪೆನಿ ಒಟ್ಟು 31 ಕೋಟಿ ರೂಪಾಯಿ ಸಾಲ ಹಾಗೂ ಅದರ ಬಡ್ಡಿ ಸೇರಿದಂತೆ ಒಟ್ಟು 52 ಕೋಟಿ ರೂಪಾಯಿ ಪಾವತಿಸಬೇಕಿದೆ. 

ಇದನ್ನೂ ಓದಿ: ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

ಮುಂಬೈ ಕಾರ್ಪೋರೇಶನ್ ಬ್ಯಾಂಕ್ ಇದೀಗ ಸಾಲ ಮರುಪಾವತಿಸಲು ಕೋರ್ಟ್ ಮೊರೆಹೋಗಿದೆ. ಇಷ್ಟೇ ಅಲ್ಲ ನ್ಯಾಶನಲ್ ಕಂಪೆನಿ ಲಾ  ಟ್ರಿಬ್ಯೂನಲ್(NCLT)ಮೆಟ್ಟಿಲೇರಿದೆ.  ಪುಣೆ ಮೂಲದ ಕಂಪೆನಿ ಇದೀಗ ಸಾಲ ಹಿಂದಿರುಗಿಸಲು ಹೆಣಗಾಡುತ್ತಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: