ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!
ಲಾಕ್‌ಡೌನ್‌ಗೂ ಮೊದಲು ನೂತನ ಮಾರುತಿ ಸುಜುಕಿ ವಿಟಾರ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೇ ತಿಂಗಳಿಗೆ ಲಾಕ್‌ಡೌನ್ ಸಂಕಷ್ಟದಿಂದ ಎಲ್ಲವೂ ಸ್ಥಗಿತಗೊಂಡಿತು. ಆದರೆ ಆನ್‌ಲೈನ್ ಬುಕಿಂಗ್ ತೆರಯಲಾಗಿತ್ತು. ಕಳೆದ 3 ತಿಂಗಳಲ್ಲಿ ನೂತನ ಪೆಟ್ರೋಲ್ ಬಿಜ್ಜಾ ಕಾರು ದಾಖಲೆ ಬರೆದಿದೆ.
ನವದೆಹಲಿ(ಮೇ.16): ಮಾರುತಿ ಸುಜುಕಿ ಡೀಸೆಲ್ ಕಾರುಗಳಿಗೆ ಗುಡ್‌ಬೈ ಹೇಳಿದೆ. ಹೀಗಾಗಿ ಬೆಜ್ಜಾ ಡೀಸೆಲ್ ಕಾರು ಸ್ಥಗಿತಗೊಳಿಸಿ, ಪೆಟ್ರೋಲ್ ಕಾರನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 24 ರಂದು ನೂತನ ಕಾರು ಬಿಡುಗಡೆಯಾಗಿತ್ತು. ಇದಾಗ ಒಂದು ತಿಂಗಳು ಅಂದರೆ ಮಾರ್ಚ್ 24 ರ ರಾತ್ರಿ ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಿಸಿದ್ದರು. ಹೀಗಾಗಿ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿತ್ತು. ಈ ವೇಳೆ ಆನ್‌ಲೈನ್ ಬುಕಿಂಗ್ ಮಾತ್ರ ತರೆಯಲಾಗಿತ್ತು. ಇದೀಗ ನೂತನ ವಿಟಾರ ಬ್ರಿಜಾ ಕಾರು ಬಿಡುಡೆಯಾದ ಬಳಿಕ ಇಲ್ಲೀವರೆಗೆ 25,000 ಕಾರುಗಳು ಬುಕ್ ಆಗಿವೆ. ಈ ಮೂಲಕ ದಾಖಲೆ ಬರೆದಿದೆ.\
ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ, ವಿಶೇಷತೆ!.
ಹಲವು ಬದಲಾವಣೆಯೊಂದಿಗೆ ನೂತನ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆಯಾಗಿತ್ತು. ಮುಂಭಾಗದ ಕ್ರೋಮ್ ಗ್ರಿಲ್, ಹೊಸ ಮಾದರಿ ಬಂಪರ್, ಫಾಕ್ಸ್ ಸ್ಕಿಡ್ ಪ್ಲೇಟ್, ನೂತನ ಡೇ ಟೈಮ್ ರನ್ನಿಂಗ್ LED ಹೆಡ್ ಲ್ಯಾಂಪ್ಸ್, LED ಪ್ರೊಜೆಕ್ಟರ್ ಲೆನ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಾಲಾಗಿತ್ತು. 16 ಇಂಚಿನ ಆಲೋಯ್ ವೀಲ್, LED ಟೈಲ್‌ಲ್ಯಾಂಪ್ಸ್, ಲೆದರ್ ರ್ಯಾಪ್ ಸ್ಟೀರಿಂಗ್ ವೀಲ್, 7 ಇಂಚಿನ ಟಚ್ ಸ್ಕ್ರೀನ್ ಕೂಡ ಈ ಕಾರಿನ ವಿಶೇಷತೆ.
BS6 ಎಮಿಶನ್, 1.5 ಲೀಟರ್ ಕೆ ಸೀರಿಸ್ ಎಂಜಿನ್ ಮೋಟಾರ್ ಹಾಗೂ SHVS ಮೈಲ್ಡ್ ಹ್ರೈಬ್ರಿಡ್ ಎಂಜಿನ್ ಹೊಂದಿದ್ದು, 102 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದದೆ. ನೂತನ Maruti Suzuki Vitara Brezza ಕಾರಿನ ಆರಂಭಿಕ ಬೆಲೆ 7.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)