ಮಾರುತಿ ಮಾರಾಟ ಕುಸಿತ; ಗುರುಗ್ರಾಂ ಘಟಕದಲ್ಲಿ ಉತ್ಪಾದನೆ ಸ್ಥಗಿತ!
ಮಾರುತಿ ಸುಜುಕಿ ಇಂಡಿಯಾದ ಪ್ರಮುಖ ಉತ್ಪಾದನೆ ಘಟಕದಲ್ಲಿ ಕಾರು ನಿರ್ಮಾಣ ಸ್ಥಗಿತಕ್ಕೆ ಕಂಪನಿ ಮುಂದಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ ಆರ್ಥಿಕ ನಷ್ಟ ಸರಿದೂಗಿಸಲು ಇದೀಗ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದೆ.
ಹರ್ಯಾಣ(ಸೆ.04): ಆಟೋಮೊಬೈಲ್ ಕಂಪನಿಗಳು ವಾಹನ ಮಾರಾಟ ಕುಸಿತ ತಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ವಾಹನದ ಮೇಲೆ ಭರ್ಜರಿ ಆಫರ್, ಹೆಚ್ಚುವರಿ ವಾಕೆಂಟಿ, ಉಚಿತ ಸರ್ವೀಸ್ ಸೇರಿದಂತೆ ಹಲವು ಕೊಡುಗೆ ನೀಡುತ್ತಿದೆ. ಇಷ್ಟಾದರೂ ವಾಹನ ಮಾರಾಟ ಚೇತರಿಕೆ ಕಾಣುತ್ತಿಲ್ಲ. ಇದೀಗ ವಾಹನ ಕಂಪನಿಗಳು ನಷ್ಟ ಸರಿದೂಗಿಸಲು ಉದ್ಯೋಗ ಕಡಿತ ಮಾಡುತ್ತಿವೆ. ಬಿಕ್ಕಟ್ಟು ತೀವ್ರವಾಗಿರುವು ಕಾರಣ ಅಂತಿಮ ಘಟ್ಟ ತಲುಪಿರುವ ಕಂಪನಿಗಳು ವಾಹನ ಉತ್ಪಾದನೆಯನ್ನೇ ಸ್ಥಗಿತಗೊಳಿಸುತ್ತಿವೆ. ಇದಕ್ಕೆ ಮಾರುತಿ ಸುಜುಕಿ ಕೂಡ ಹೊರತಾಗಿಲ್ಲ.
ಇದನ್ನೂ ಓದಿ: S ಕ್ರಾಸ್ ಕಾರಿಗೆ ಬಂಪರ್ ಆಫರ್ ಘೋಷಿಸಿದ ಮಾರುತಿ ಸುಜುಕಿ!
ಮಾರುತಿ ಸುಜುಕಿ ಕಂಪನಿಯ ಹರ್ಯಾಣದ ಗುರುಗ್ರಾಂನಲ್ಲಿರುವ ಅತೀ ದೊಡ್ಡ ವಾಹನ ತಯಾರಿಕಾ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಕಂಪನಿ ಮುಂದಾಗಿದೆ. ಸೆಪ್ಟೆಂಬರ್ 7 ಹಾಗೂ 9 ರಂದು(ಎರಡು ದಿನ) ವಾಹನ ತಯಾರಿಕೆ ಸ್ಥಗಿತಗೊಳಿಸಲಿದೆ. ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾರುತಿ, ವಾಹನ ಉತ್ಪಾದನೆ ಹಾಗೂ ಮಾರಾಟದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಉತ್ಪಾದನೆಯಾಗುವ ವಾಹನಗಳು ಮಾರಾಟವಾಗುತ್ತಿಲ್ಲ. ಹೀಗಾಗಿ ಉತ್ಪಾದನೆ ಸ್ಛಗಿತಗೊಳಿಸುತ್ತಿದ್ದೇವೆ ಎಂದು ಮಾರುತಿ ಹೇಳಿದೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ ಆಟೋಮೊಬೈಲ್ ಸ್ಥಿತಿಗತಿ; ದಾಖಲೆ ಕುಸಿತ ಕಂಡ ಟಾಟಾ, ಮಾರುತಿ!
3000 ತಾತ್ಕಾಲಿಕ ಉದ್ಯೋಗಿಗಳನ್ನು ತೆಗೆದುಹಾಕಿದ್ದ ಮಾರುತಿ ಕಂಪನಿ, ಲಕ್ಷಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಆರ್ಥಿಕ ಹಿಂಜರಿತ, ಆಟೋಮೊಬೈಲ್ ಮೇಲಿನ 28% GST(ತೆರಿಗೆ) ಸೇರಿದಂತೆ ಹಲವು ಕಾರಣಗಳು ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದೆ.