ನವದೆಹಲಿ(ಸೆ.02): ವಾಹನ ಮಾರಾಟ ಕುಸಿತ ಕಂಡಿರುವ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ತಿಂಗಳಲ್ಲಿ  S ಕ್ರಾಸ್  ಖರೀದಿಸುವ ಗ್ರಾಹಕರಿಗೆ ಗರಿಷ್ಠ 1.12 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಡೀಸೆಲ್‌ ಕಾರಿಗೆ ಬಂಪರ್ ಆಫರ್!

ಮಾರುತಿ  S ಕ್ರಾಸ್ ಕಾರಿಗೆ ತೀವ್ರ ಪೈಪೋಟಿ ಎದುರಾಗಿದೆ. ಮಾರುಕಟ್ಟೆಗೆ ಕಿಯಾ ಸೆಲ್ಟೋಸ್ ಕಾರು ಬಿಡುಗಡೆಯಾಗೋ ಮೂಲಕ ಸ್ಪರ್ಧಿ ಮತ್ತಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮಾರುತಿ ಆಫರ್ ಘೋಷಿಸಿದೆ.  ಪ್ರತಿ ತಿಂಗಳು ಸರಾಸರಿ 2500  S ಕ್ರಾಸ್  ಕಾರು ಮಾರಾಟವಾಗುತ್ತಿದೆ.  S ಕ್ರಾಸ್  ಕಾರು ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. 

ಇದನ್ನೂ ಓದಿ: ಕುಸಿದ ಆಟೋಮೊಬೈಲ್‌ಗೆ ಜೀವಜಲ; GST ಕಡಿತಕ್ಕೆ ಮುಂದಾದ ಕೇಂದ್ರ!

ಮಾರುತಿ ಸುಜುಕಿ S ಕ್ರಾಸ್ ಕಾರು 1.3 L DDiS ಡೀಸೆಲ್ ಎಂಜಿನ್ ಹೊಂದಿದ್ದು,  90bhp ಪವರ್ ಹಾಗೂ 200Nm ಪೀಕ್  ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5-ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಶೀಘ್ರದಲ್ಲೇ S ಕ್ರಾಸ್ ಕಾರು  1.5L K15B ಎಂಜಿನ್ ‌ಅಪ್‌ಗ್ರೇಡ್ ಮಾಡಲಿದೆ. ಜೊತೆಗೆ BS-VI ಎಮಿಶನ್ ಕೂಡ ಹೊಂದಿರಲಿದೆ. 

ಸೂಚನೆ: ಮಾರುತಿ ಸುಜುಕಿ  S ಕ್ರಾಸ್ ಕಾರಿನ ಮೇಲಿನ ಆಫರ್ ರಾಜ್ಯ, ನಗರ, ಜಿಲ್ಲೆಗಳಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಕುರಿತು ವಿಚಾರಿಸಿ