ನವದೆಹಲಿ(ಆ.05): ಮಾರುತಿ ಸುಜುಕಿ S ಕ್ರಾಸ್ 2020 ಕಾರು ಅಧಿಕೃತವಾಗಿ ಬಿಡುಗಡೆಯಾಗಿದೆ. 2015ರಲ್ಲಿ ಮಾರುತಿ ಸುಜುಕಿ ಮೊದಲ ಬಾರಿಗೆ S ಕ್ರಾಸ್ ಡೀಸೆಲ್ ಕಾರು ಪರಿಚಯಿಸಿತ್ತು. ಇದೀಗ 5 ವರ್ಷಗಳ ಬಳಿಕ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಬಿಡುಗಡೆಯಾಗಿದೆ. ನೂತನ ಮಾರುತಿ ಸುಜುಕಿ S ಕ್ರಾಸ್ ಕಾರಿನ ಬೆಲೆ 8.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.

11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು!

ಕೊರೋನಾ ವೈರಸ್, ಲಾಕ್‌ಡೌನ್ ಕಾರಣ S ಕ್ರಾಸ್ ಕಾರು ಬಿಡುಗಡೆ ವಿಳಂಬವಾಗಿತ್ತು. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿರುವ ಮೊದಲ ಮಹತ್ವದ ಕಾರು ಇದಾಗಿದೆ. 2020ರ ಆಟೋ ಎಕ್ಸ್ಪೋದಲ್ಲಿ S ಕ್ರಾಸ್ ಪರಿಚಯಿಸಲಾಗಿತ್ತು.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!

ಮಾರುತಿ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿತ್ತು. ಇಷ್ಟೇ ಅಲ್ಲ ನೂತನ BS6 ಎಮಿಶನ್ ನಿಯಮದಿಂದ ಮಾರುತಿ ಸುಜುಕಿ ತನ್ನು ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಿದೆ. ಹೀಗಾಗಿ  S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ನೂತನ S ಕ್ರಾಸ್ ಕಾರು 1.5 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ವೇರಿಯೆಂಟ್ ಕೂಡ ಲಭ್ಯವಿದೆ.

1.5 ಲೀಟರ್ ಕೆ ಸೀರಿಸ್ ಎಂಜಿನ್ ಹೊಂದಿರವ ಎಸ್ ಕ್ರಾಸ್  104 bhp ಪವರ್ ಹಾಗೂ 138Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 18.55 ಕಿ.ಮೀ ಮೈಲೇಜ್ ನೀಡಲಿದೆ. ಇದರಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕೂಡ ಲಭ್ಯವಿದೆ.

ಕ್ಯಾಬಿನ್ ಫೀಚರ್ಸ್‌ನಲ್ಲೂ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ.  ಸಿಗ್ಮಾ, ಡೆಲ್ಟಾ, ಝೆಟಾ ಹಾಗೂ ಆಲ್ಫಾ ವೇರಿಯೆಂಟ್ ಲಭ್ಯವಿದೆ. 8.39 ಲಕ್ಷ ರೂಪಾಯಿಯಿಂದ ಗರಿಷ್ಠ 11.15 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ).