ನವದೆಹಲಿ(ಜು.18): ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ ಗೊಂಡಿದೆ. ಆಗಸ್ಟ್ 5ರಂದು ನೂತನ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 2020ರ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ್ದ S ಕ್ರಾಸ್ ಪೆಟ್ರೋಲ್ ಕಾರು ಇದೀಗ ಬಿಡುಗಡೆಗೆ ಸಜ್ಜಾಗಿದೆ. 

 ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ, ಸುಲಭ ಸಾಲ, ಕಡಿಮೆ ಕಂತು!

ಕೊರೋನಾ ವೈರಸ್ ಕಾರಣ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ವಿಳಂಬವಾಗಿದೆ. ಇದೀಗ ಆಗಸ್ಟ್ 5 ರಂದು ಹೆಚ್ಚುವರಿ ಫೀಚರ್ಸ್, ಆಕರ್ಷಕ ವಿನ್ಯಾಸದ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಬಿಡುಗಡೆಯಾಗಲಿದೆ. ಸಿಗ್ಮಾ, ಡೆಲ್ಟಾ, ಜೆಟಾ ಹಾಗೂ ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!.

ಜೊತೆಗೆ ಮೈಲ್ಡ್ ಹೈಬ್ರಿಡ್ ವೇರಿಯೆಂಟ್ ಕೂಡ ಲಭ್ಯವಿದೆ. ಆದರೆ BS6 S ಕ್ರಾಸ್ ಪೆಟ್ರೋಲ್ ವೇರಿಯೆಂಟ್ AMT ಕಾರಿನಲ್ಲಿ ಮಾತ್ರ ಹೈಬ್ರಿಡ್ ಆಯ್ಕೆ ನೀಡಲಾಗಿದೆ.  ಸಿಯಾಝ್ ಕಾರಿನಲ್ಲಿ ಬಳಸಲಾಗಿರುವ ಎಂಜಿನ್ ಇಲ್ಲೂ ಕೂಡ ಬಳಸಲಾಗಿದೆ. 1.5-ಲೀಟರ್ K15B ಮೈಲ್ಡ್ ಹೈಬ್ರಿಡ್ ಎಂಜಿನ್ ಲಭ್ಯವಿದೆ. 112 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನೂತನ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರಿನ ಬೆಲೆ 8.5 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು,ಟಾಪ್ ಮಾಡೆಲ್ ಬೆಲೆ 11.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)