ನವದೆಹಲಿ(ಜ.23): ಆಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸದೊಂದಿಗೆ ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆಯಾಗಿದೆ. ಹೊಚ್ಚ ಹೊಸ ವ್ಯಾಗನ್ಆರ್ ಕಾರಿನ ಬೆಲೆ 4.19 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಇಂದು(ಜ.23) ವ್ಯಾಗನ್ಆರ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೆ ಈ ಕಾರಿನ ಬುಕಿಂಗ್ ಕಳೆದೊಂದು ವಾರದಿಂದ ನಡೆಯುತ್ತಿದೆ.

ಇದನ್ನೂ ಓದಿ: ನೂತನ ಮಾರುತಿ ವ್ಯಾಗನ್ಆರ್ ಬಿಡುಗಡೆ- ಬೆಲೆ ಕೇವಲ 4.19 ಲಕ್ಷ ರೂ!

ಒಂದು ವಾರದಲ್ಲಿ ವ್ಯಾಗನ್ಆರ್ ನೂತನ ಕಾರನ್ನ ಬರೋಬ್ಬರಿ 12,000 ಮಂದಿ ಬುಕ್ ಮಾಡಿದ್ದಾರೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕಿಂಗ್ ದಾಖಲೆ ಬರೆದಿದೆ. 11,000 ರೂಪಾಯಿ ನೀಡಿ ನೂತನ ವ್ಯಾಗನ್ಆರ್ ಕಾರು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ:ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

LXI,VXI ಹಾಗೂ ZXI ಮೂರು ವೇರಿಯೆಂಟ್‌ಗಳಲ್ಲಿ ವ್ಯಾಗನ್ಆರ್ ಕಾರು ಲಭ್ಯವಿದೆ. 1.0 ಲೀಟರ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಟೋ ಗೇರ್ ಶಿಫ್ಟ್ ಕೂಡ ಲಭ್ಯವಿದೆ. ವ್ಯಾಗನ್ಆರ್ ಕಾರು ನೂತನ ಹ್ಯುಂಡೈ ಸ್ಯಾಂಟ್ರೋ ಹಾಗೂ ಟಾಟಾ ಟಿಯಾಗೋ ಕಾರಿಗೆ ಪೈಪೋಟಿ ನೀಡಲಿದೆ.