ಮುಂಬೈ(ಜ.22): ಭಾರತೀಯ ಸೇನೆಗೆ ಗರಿಷ್ಠ ವಾಹನ ಪೂರೈಸುತ್ತಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಬಲಿಷ್ಠ ವಾಹನ ನಿರ್ಮಿಸಿದೆ. ಭಾರತೀಯ ಸೇನೆಗಾಗಿ ನಿರ್ಮಿಸಲಾದ ನೂತನ ಟಾಟಾ ಮರ್ಲಿನ್ LSV ಕಾರು ಶೀಘ್ರದಲ್ಲೇ ಸ್ರೇರ್ಪಡೆಗೊಳ್ಳಲಿದೆ. ಇತ್ತೀಚೆಗಷ್ಟೇ ಮಾರುತಿ ಜಿಪ್ಸಿ ಬದಲಾಗಿ 3193 ಟಾಟಾ ಸಫಾರಿ ಕಾರನ್ನ ಖರೀದಿಸಿದೆ.

ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಬಲೆನೊ ಕಾರು!

ನೂತನ ಟಾಟಾ ಮರ್ಲಿನ್ ವಾಹನ, STANAG 4569 ಲೆವೆಲ್ 1 ಭದ್ರತೆ ನೀಡಲಿದೆ.(NATO ಪ್ರಮಾಣೀಕೃತ ಗರಿಷ್ಠ ಭದ್ರತೆ) ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಈ ವಾಹನ ಭದ್ರತೆ ನೀಡಲಿದೆ.

ಇದನ್ನೂ ಓದಿ:  ತಂದೆ ಹುಟ್ಟುಹಬ್ಬಕ್ಕೆ ಮಗನಿಂದ ಆಡಿ ಕಾರು ಸರ್ಪ್ರೈಸ್ ಗಿಫ್ಟ್!

ಟಾಟಾ ಮರ್ಲಿನ್ LSV ಕಾರಿನಲ್ಲಿ7.6mm ಗನ್, 40mm ಅಟೋಮ್ಯಾಟಿಕ್ ಗ್ರೇನೇಡ್, ಆ್ಯಂಟಿ ಟ್ಯಾಂಕ್ ಮಿಸೈಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಇನ್ನು ಈ ಕಾರು 3.3 ಲೀಟರ್ ಲಿಕ್ವಿಡ್ ಕೂಲ್‌ಡ್, ಡೈರೈಕ್ಟ್ ಇಂಜೆಕ್ಟ್ ಡೀಸೆಲ್ ಎಂಜಿನ್ ಹೊಂದಿದೆ. 185bhp ಪವರ್ ಹಾಗೂ 450nm ಟಾರ್ಕ್ ಉತ್ಪಾದಿಸಬಲ್ಲ ಸಾಮಾರ್ಥ್ಯ ಹೊಂದಿದೆ.