ನವದೆಹಲಿ(ಜ.23): ಮಾರುತಿ ಸುಜುಕಿ ನೂತನ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹಳೇ ವ್ಯಾಗನ್ಆರ್ ಕಾರಿಗಿಂತ ದೊಡ್ಡದಾದ ಹೊಚ್ಚ ಹೊಸ ವ್ಯಾಗನ್ಆರ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿ ಬೆಲೆ 4.19 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. 

 

ಇದನ್ನೂ ಓದಿ: ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

LXI,VXI ಹಾಗೂ ZXI ಮೂರು ವೇರಿಯೆಂಟ್‌ಗಳಲ್ಲಿ ವ್ಯಾಗನ್ಆರ್ ಕಾರು ಲಭ್ಯವಿದೆ. 1.0 ಲೀಟರ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಟೋ ಗೇರ್ ಶಿಫ್ಟ್ ಕೂಡ ಲಭ್ಯವಿದೆ. ವ್ಯಾಗನ್ಆರ್ ಕಾರು ನೂತನ ಹ್ಯುಂಡೈ ಸ್ಯಾಂಟ್ರೋ ಹಾಗೂ ಟಾಟಾ ಟಿಯಾಗೋ ಕಾರಿಗೆ ಪೈಪೋಟಿ ನೀಡಲಿದೆ. 11,000 ರೂಪಾಯಿ ನೀಡಿ ನೂತನ ವ್ಯಾಗನ್ಆರ್ ಕಾರು ಬುಕ್ ಮಾಡಬಹುದಾಗಿದೆ.

 

 

ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಬಲೆನೊ ಕಾರು!

ನೂತನ ವ್ಯಾಗನ್ಆರ್ ಕಾರಿನಲ್ಲಿ 4 ಸಿಲಿಂಡರ್ ಬಳಸಲಾಗಿದೆ. ಮಾರುತಿ ಸಂಸ್ಥೆಯ ಇಗ್ನಿಸ್,ಡಿಸೈರ್ ಹಾಗೂ ಬಲೆನೋ ಕಾರಿನಲ್ಲಿ ಇದೇ ಎಂಜಿನ್ ಬಳಸಲಾಗಿದೆ. 1061 ಸಿಸಿ, 1.2 ಲೀಟರ್ ಎಂಜಿನ್  83bhp ಪವರ್ ಹಾಗೂ 113 Nm ಟಾರ್ಕ್ ಉತ್ವಾದಿಸಲಿದೆ. 

ಇದನ್ನೂ ಓದಿ: ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಮೊದಲ ಕಾರು ಖರೀದಿಸಿದ ಬೆಂಗಳೂರಿಗ

ನೂತನ ಮಾರತಿ ವ್ಯಾಗನ್‌ಆರ್ ಕಾರು ಹೊಚ್ಚ ಹೊಸ ವಿನ್ಯಾಸ ಹೊಂದಿದೆ. ಹಳೇ ಕಾರುಗಿಂತ ಭಿನ್ನವಾಗಿ ಕಾಣಿಸಲಿದೆ. ಆಕರ್ಷಕ ವಿನ್ಯಾಸ,  ಇಂಟಿರಿಯರ್ ಹೊಂದಿದೆ. ಹಳೇ ಕಾರಿಗಿಂತ 56mm ಉದ್ದ ಹಾಗೂ 145mm ಅಗಲ ಹೊಂದಿದೆ. ನೂತನ ಮಾರತಿ ವ್ಯಾಗನ್‌ಆರ್ ಕಾರು ಹೊಚ್ಚ ಹೊಸ ವಿನ್ಯಾಸ ಹೊಂದಿದೆ. ಹಳೇ ಕಾರುಗಿಂತ ಭಿನ್ನವಾಗಿ ಕಾಣಿಸಲಿದೆ. ಆಕರ್ಷಕ ವಿನ್ಯಾಸ,  ಇಂಟಿರಿಯರ್ ಹೊಂದಿದೆ. ಹಳೇ ಕಾರಿಗಿಂತ 56mm ಉದ್ದ ಹಾಗೂ 145mm ಅಗಲ ಹೊಂದಿದೆ.