ಮಾರುತಿ ಇಗ್ನಿಸ್ ಕಾರು ನಿರ್ಮಾಣ ಸ್ಥಗಿತ- ಸ್ಟಾಕ್ ಕ್ಲೀಯರ್‌ಗಾಗಿ ಭಾರಿ ಡಿಸ್ಕೌಂಟ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Feb 2019, 12:51 PM IST
Maruti Suzuki ignis car production stopped margin discount 2018 car
Highlights

2018ರ ಮಾರುತಿ ಇಗ್ನಿಸ್ ಕಾರು ನಿರ್ಮಾಣ ಸ್ಥಗಿತಗೊಳ್ಳುತ್ತಿದೆ. ಕಾರಣ 20119ರ ಹೊಸ ಇಗ್ನಿಸ್ಕಾರು ಬಿಡುಗಡೆಯಾಗುತ್ತಿದೆ. ಹೀಗಾಗಿ ಸದ್ಯ ಡೀಲರ್‌ಗಳ ಬಳಿ ಇರುವ ಇಗ್ನಿಸ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

ನವದೆಹಲಿ(ಫೆ.06): ಮಾರುತಿ ಸುಜುಕಿ ಸಂಸ್ಥೆ ಸಣ್ಣ SUV ಕಾರು ಇಗ್ನಿಸ್ ನಿರ್ಮಾಣ ಸ್ಥಗಿತಗೊಳಿಸಿತ್ತಿದೆ. ಮಾರುತಿ ಸುಜುಕಿ ಅಧೀಕೃತ ಘೋಷಣೆ ಮಾಡಿಲ್ಲ. ಆದರೆ ನೆಕ್ಸಾ ಡೀಲರ್‌ಗಳು ಈ ಕುರಿತು ಸೂಚನೆ ನೀಡಿದ್ದಾರೆ. ಹೊಸ ಇಗ್ನಿಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ  ಇದೀಗ ಹಳೇ ಇಗ್ನಿಸ್ ಕಾರು ನಿರ್ಮಾಣ ಸ್ಥಗಿತಗೊಳ್ಳುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!

2018ರ ಇಗ್ನಿಸ್ ನಿರ್ಮಾಣ ಸ್ಥಗಿತಗೊಳ್ಳುತ್ತಿರುವ ಕಾರಣ, ಸದ್ಯ ಡೀಲರ್‌ಗಳ ಬಳಿ ಇರುವ ಇಗ್ನಿಸ್ ಕಾರು ಸ್ಟಾಕ್ ಕ್ಲೀಯರ್‌ಗಾಗಿ ಭಾರಿ ಡಿಸ್ಕೌಂಟ್ ಘೋಷಿಸಿದೆ. ಬರೋಬ್ಬರಿ 1 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಘೋಷಿಸಿದೆ. ಆದರೆ ಬುಕಿಂಗ್ ನಿಲ್ಲಿಸಿಲ್ಲ. ಕಾರಣ 2019ರ ಹೊಸ ಇಗ್ನಿಸ್ ಕಾರು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನಗರದಲ್ಲಿ ಪೆಟ್ರೋಲ್, ಡೀಸೆಲ್ ಕಾರು ರಿಜಿಸ್ಟ್ರೇಶನ್ ಶೀಘ್ರದಲ್ಲಿ ಬಂದ್ !

ಸದ್ಯ ಇಗ್ನಿಸ್ 4 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  ಸಿಗ್ಮಾ, ಡೆಲ್ಟಾ, ಜೆಟಾ, ಹಾಗೂ ಆಲ್ಫಾ. ಇಗ್ನಿಸ್ ಬೆಲೆ 4.66 ಲಕ್ಷ ರೂಪಾಯಿಂದ  7.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ 2019ರ ನೂತನ ಇಗ್ನಿಸ್ ಕಾರಿನ ಬೆಲೆ ಸ್ವಲ್ಪ ಹೆಚ್ಚಾಗಲಿದೆ.

loader