ವೋಕ್ಸ್‌ವ್ಯಾಗನ್ ಇಂಡಿಯಾಗೆ 500 ಕೋಟಿ ದಂಡ!

ವೋಕ್ಸ್‌ವ್ಯಾಗನ್ ಇಂಡಿಯಾ ಸಂಸ್ಥೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ.  ಭಾರತದ ವೋಕ್ಸ್‌ವ್ಯಾಗನ್ ಸಂಸ್ಥೆಗೆ ಬರೋಬ್ಬರಿ 500 ಕೋಟಿ ದಂಡ ವಿದಿಸಲಾಗಿದೆ. ಅಷ್ಟಕ್ಕೂ ದಂಡ ವಿದಿಸಿದ್ದು ಯಾಕೆ? ಇಲ್ಲಿದೆ ಹೆಚ್ಚಿನ ವಿವರ.
 

Volkswagen India fines rs 500 crore for emission cheating

ನವದೆಹಲಿ(ಮಾ.07): ಎಮಿಶನ್ ನಿಯಮ ಪಾಲಿಸಲು ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದ ವೋಕ್ಸ್‌ವ್ಯಾಗನ್ ಇಂಡಿಯಾ ಕಂಪೆನಿಗೆ ಇದೀಗ ಬರೋಬ್ಬರಿ 500 ಕೋಟಿ ರೂಪಾಯಿ ದಂಡ ವಿಧಿಸಲಾಗಿದ. 2 ತಿಂಗಳೊಳಗೆ ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ಮಂಡಳಿ(National Green Tribunal) ಸೂಚಿಸಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ!

ಡೀಸೆಲ್ ಕಾರು ಎಮಿಶನ್ ಟೆಸ್ಟ್ ವೇಳೆ ವೋಕ್ಸ್‌ವ್ಯಾಗನ್ ಕಂಪೆನಿ ಕಿಟ್ ಅಳವಡಿಸಿ ಎಮಿಶನ್ ನಿಯಮದಲ್ಲಿ ಯಾವುದೇ ಸಮಸ್ಯೆ ಬರದ ರೀತಿ ನೋಡಿಕೊಂಡಿತ್ತು. ಆದರೆ ವೋಕ್ಸ್‌ವ್ಯಾಗನ್ ವಂಚನೆ ಬಳಿಕ ಬಯಲಾಗಿತ್ತು. ಇದಕ್ಕೆ ಈ ಹಿಂದೆ 171 ಕೋಟಿ ರೂಪಾಯಿ ದಂಡ ವಿದಿಸಿತ್ತು. 

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ದಂಡ ಪಾವತಿಸಿದ ವೋಕ್ಸ್‌ವ್ಯಾಗನ್ ವಿರುದ್ಧ ಕಿಡಿ ಕಾರಿರುವ ರಾಷ್ಟ್ರೀಯ ಹಸಿರು ಮಂಡಳಿ ದಂಡದ ಮೊತ್ತವನ್ನು 500 ಕೋಟಿ ರೂಪಾಯಿಗೆ ಏರಿಸಿದೆ. ಈ ಮೂಲಕ ನಿಯಮ ಪಾಲನೆ ಹಾಗೂ ವಂಚನೆ ಪ್ರಕರಣಕ್ಕೆ ತಕ್ಕ ಶಾಸ್ತಿ ಮಾಡಿದೆ. 

Latest Videos
Follow Us:
Download App:
  • android
  • ios