ಸ್ಟೇರಿಂಗ್ ಸಿಸ್ಟಮ್‌ನಲ್ಲಿ ದೋಷ, 87 ಸಾವಿರ ಕಾರುಗಳ ರಿಕಾಲ್ ಮಾಡಲಿದೆ ಮಾರುತಿ ಸುಜುಕಿ!
ಭಾರತದ ಪ್ರಮುಖ ಕಾರ್‌ಮೇಕರ್ ಆಗಿರುವ ಮಾರುತಿ ಸುಜುಕಿ ಕಂಪನಿ ಬರೋಬ್ಬರಿ 87 ಸಾವಿರ ಕಾರುಗಳನ್ನು ರಿಕಾಲ್ ಮಾಡುವುದಾಗಿ ಘೋಷಣೆ ಮಾಡಿದೆ. ಸ್ಟೇರಿಂಗ್ ಸಿಸ್ಟಮ್‌ನಲ್ಲಿನ ದೋಷದ ಕಾರಣಕ್ಕಾಗಿ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದೆ.
ಬೆಂಗಳೂರು (ಜು.24): ದೇಶದ ಅತಿದೊಡ್ಡ ಕಾರ್ ಮೇಕರ್ ಆಗಿರುವ ಮಾರುತಿ ಸುಜಿಕಿ ಇಂಡಿಯಾ ಕಂಪನಿ ಬರೋಬ್ಬರಿ 87,599 ಕಾರುಗಳನ್ನು ರಿಕಾಲ್ ಮಾಡುವುದಾಗಿ ಘೋಷಣೆ ಮಾಡಿದೆ. ಸೋಮವಾರ ತನ್ನ ನಿರ್ಧಾರವನ್ನು ಪ್ರಕಟಣೆ ಮೂಲಕ ತಿಳಿಸಿದ್ದು, ಎಸ್‌ಪ್ರೆಸ್ಸೋ ಹಾಗೂ ಎಕೋ ಕಾರ್‌ಗಳಲ್ಲಿ ಮಾತ್ರವೇ ಈ ದೋಷ ಕಂಡು ಬಂದಿದೆ. ಈ ಕಾರುಗಳ ಸ್ಟೇರಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದ್ದು, ಈ ಕಾರುಗಳನ್ನು ರಿಕಾಲ್ ಮಾಡಿ ಅದರ ಪರಿಶೀಲನೆ ಮಾಡಲಾಗುವುದು, ಬದಲಾವಣೆ ಮಾಡಬೇಕಾದ ಅಗತ್ಯವಿದ್ದಲ್ಲಿ ಸ್ಟೇರಿಂಗ್ ಟೈ ರಾಡ್‌ಅನ್ನು ಬದಲಾವಣೆ ಮಾಡುವುದಾಗಿ ತಿಳಿಸಿದೆ. ದೋಷವು ಸ್ಟೀರಿಂಗ್ ಟೈ ರಾಡ್‌ನ ಒಂದು ಭಾಗದಲ್ಲಿದೆ ಎಂದು ಕಂಪನಿ ತಿಳಿಸಿದೆ. ಇದು ಅಪರೂಪದ ಸಂದರ್ಭಗಳಲ್ಲಿ, ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಇಲ್ಲದೇ ಅದು ಒಡೆದು ಹೋಗಬಹದು ಎಂದು ಕಂಪನಿಯು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಜುಲೈ 24 ರಿಂದ ಕಾರುಗಳನ್ನು ರಿಕಾಲ್ ಮಾಡಲಾಗುವುದು, 2021ರ ಜುಲೈ 5 ರಿಂದ 2023ರ ಫೆಬ್ರವರಿ 15ರವರೆಗೆ ಮಾರಾಟವಾಗಿರುವ ಎಸ್‌ಪ್ರೆಸ್ಸೋ ಹಾಗೂ ಎಕೋ ಕಾರುಗಳ ರಿಕಾಲ್ ಮಾಡಲಿದ್ದೇವೆ ಎಂದು ಹೇಳಿದೆ.
ಸಮಸ್ಯೆ ಹೊಂದಿರುವ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ವರ್ಕ್‌ಶಾಪ್‌ಗಳಿಂದ ದೋಷಯುಕ್ತ ಭಾಗವನ್ನು ತಪಾಸಣೆ ಮತ್ತು ಬದಲಿಗಾಗಿ ಉಚಿತವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ ಎಂದು ಕಂಪನಿ ಹೇಳಿದೆ. ಈ ಅವಧಿಯಲ್ಲಿ ತಯಾರಿಸಲಾದ ವಾಹನಗಳಲ್ಲಿನ ಸ್ಟೀರಿಂಗ್ ಟೈ ರಾಡ್‌ನಲ್ಲಿನ ಕೆಲವು ಸಮಸ್ಯೆಗಳು ಕಂಡಿವೆ. ಸ್ಟೀರಬಿಲಿಟಿ ಅಂದರೆವಾಹನವನ್ನು ತಿರುಗಿಸುವ ವೇಳೆ ಸಮಸ್ಯೆ ಉಂಟಾಗಲಿದೆ ಎಂದು ಮಾರುತಿ ಸುಜಿಕಿ ಮಾಹಿತಿ ನೀಡಿದೆ. ಆ ಕಾರಣಕ್ಕಾಗಿ ಈ ಕಾರುಗಳನ್ನು ರಿಕಾಲ್ ಮಾಡುತ್ತಿರುವುದಾಗಿ ತಿಳಿಸಿದೆ.
ಬ್ರೆಜ್ಜಾ ಬೆನ್ನಲ್ಲೇ ವ್ಯಾಗನ್ಆರ್ ಕಾರಿನಿಂದಲೂ ಈ ಫೀಚರ್ಸ್ ತೆಗೆದ ಮಾರುತಿ ಸುಜುಕಿ!
ಇತ್ತೀಚಿನ ದಿನದ ಅತಿದೊಡ್ಡ ರಿಕಾಲ್: ಮಾರುತಿ ಸುಜುಕಿ ಹಾಲಿ ವರ್ಷ ಮೂರನೇ ಬಾರಿ ತನ್ನ ವಾಹಗಳನ್ನು ರಿಕಾಲ್ ಮಾಡಿದೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಕಾಲ್ ಆಗಿರುವುದು ಇದೇ ಮೊದಲು.ಇದಕ್ಕೂ ಮುನ್ನ ಜನವರಿಯಲ್ಲಿ ಕಂಪನಿ 17362 ಕಾರುಗಳನ್ನು ಹಾಗೂ ಏಪ್ರಿಲ್‌ನಲ್ಲಿ 7213 ಕಾರುಗಳನ್ನು ರಿಕಾಲ್ ಮಾಡಿಕೊಂಡಿತ್ತು. ಮಾರುತಿ ಸುಜಿಕಿ ಇದನ್ನು ತಿಳಿಸಿದ ಬೆನ್ನಲ್ಲಿಯೇ ಸೋಮವಾರ, ಕಂಪನಿಯ ಷೇರುಗಳು ಎನ್‌ಎಸ್‌ಇಯಲ್ಲಿ 0.77% ಕುಸಿದು 9,694.8 ರೂಪಾಯಿಗೆ ಮುಟ್ಟಿದೆ.
ಮಾರುತಿ ಸುಜುಕಿಯ ಬಹುನಿರೀಕ್ಷಿತ ಇನ್‌ವಿಕ್ಟೋ ಕಾರು ಬಿಡುಗಡೆ, ಇಲ್ಲಿದೆ ಬೆಲೆ ಪಟ್ಟಿ!