Asianet Suvarna News Asianet Suvarna News

ತುಂಬಿ ಹರಿಯುತ್ತಿರುವ ನದಿ ದಾಟಿದ ಮಾರುತಿ ಜಿಪ್ಸಿ!

ಆಫ್ ರೋಡ್ ಡ್ರೈವಿಂಗ್ ಎಷ್ಟ ಥ್ರಿಲ್ ಇದೆಯೋ ಅಷ್ಟೇ ಅಪಾಯವು ಇದೆ. ಅದರಲ್ಲೂ ಸದ್ಯ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಇರುವುದರಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಇದರ ನಡುವೆ ಆಫ್ ರೋಡ್ ಡ್ರೈವಿಂಗ್ ಅಷ್ಟೇ ಅಪಾಯಕಾರಿ. ಆದರೆ ಮಾರುತಿ ಜಿಪ್ಸಿ ಮಾಲೀಕ ಸಲೀಸಾಗಿ ತುಂಬಿ ಹರಿಯುತ್ತಿದ್ದ ಸಣ್ಣ ನದಿಯನ್ನೇ ದಾಟಿಸಿದ್ದಾನೆ. 

Maruti Gypsy cross Dangerous river in Manson
Author
Bengaluru, First Published Aug 14, 2020, 8:41 PM IST

ಬೆಂಗಳೂರು(ಆ.14):  ಕಾಡು-ಮೇಡು, ಬೆಟ್ಟ ಗುಡ್ಡ, ಹಳ್ಳ ಕೊಳ್ಳಗಳಲ್ಲಿ ಆಫ್ ರೋಡ್ ಡ್ರೈವಿಂಗ್ ಥ್ರಿಲ್ಲಿಂಗ್ ಅನುಭವ. ಇದಕ್ಕಾಗಿ ಹಲವರು ವರ್ಷವಿಡೀ ದುಡಿದು ಆಫ್ ರೋಡ್ ಡ್ರೈವ್ ಥ್ರಿಲ್ ಪಡೆಯಲು ಹವಣಿಸುವವರಿದ್ದಾರೆ. ಆದರೆ ಆಫ್ ರೋಡ್ ಡ್ರೈವ್ ಅಷ್ಟೇ ಅಪಾಯಕಾರಿ ಕೂಡ ಹೌದು. ಆಫ್ ರೋಡ್‌‍ನಲ್ಲಿ ಪಳಗಿದ ಮಾರುತಿ ಜಿಪ್ಸಿ ಮಾಲೀಕ ಸಲೀಸಾಗಿ ತುಂಬಿ ಹರಿಯುತ್ತಿದ್ದ ಸಣ್ಣ ನದಿಯನ್ನು ಸಲೀಸಾಗಿ ದಾಟಿದ್ದಾನೆ.

ದುಬೈನಲ್ಲಿ ಆಫ್ ರೋಡ್ ಡ್ರೈವಿಂಗ್ - ಹೇಗಿತ್ತು ಸಲ್ಮಾನ್ ಖಾನ್ ಸಾಹಸ?

ಇದು ಅತ್ಯಂತ ಅಪಾಯಕಾರಿ. ಇಷ್ಟೇ ಅಲ್ಲ ಯಾರೂ ಕೂಡ ಈ ಪ್ರಯತ್ನಕ್ಕೆ ಕೈಹಾಕದಿರುವುದು ಒಳಿತು. ಸದ್ಯ ಕರ್ನಾಟಕದ ಕೆಲವು ಜಿಲ್ಲೆ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದೆ. ಹಳ್ಳ ಕೊಳ್ಳಗಳು ತುಂಬಿದೆ. ಈ ಸಂದರ್ಭದಲ್ಲಿ ಮಾಡಿಫಿಕೇಶನ್ ಮಾಡಿರುವ ಆಫ್ ರೋಡ್ ಜಿಪ್ಸಿ,  ತುಂಬಿ ಹರಿಯುತ್ತಿದ್ದ ಸಣ್ಣ ನದಿಯನ್ನು ದಾಟಿಸಿದ ವಿಡಿಯೋ ವೈರಲ್ ಆಗಿದೆ.

ನದಿಗೆ ಇಳಿದ ಜಿಪ್ಸಿ ದಡ ಸೇರಲು ಕೊಂಚ ಸಾಹಸ ಪಟ್ಟಿದೆ. ನೀರಿನ ರಭಸಕ್ಕೆ ಜಿಪ್ಸಿ ಕೆಲ ಹೊತ್ತು ನದಿಯಲ್ಲಿ ಹೋರಾಟ ನಡೆಸಿದೆ. ಸತತ ಪ್ರಯತ್ನದಿಂದ ಜಿಪ್ಸಿ ಸಲೀಸಾಗಿ ನದಿ ದಾಟಿ ದಡ ಸೇರಿದೆ. 

Follow Us:
Download App:
  • android
  • ios