ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ಗೆ ಕಾರು ಸ್ವಲ್ಪ ಹೆಚ್ಚೇ ಇದೆ. ಆದರೆ ಕೆಲ ಪ್ರಕರಣಗಳ ಬಳಿಕ ಸಲ್ಲು ಕಾರು ಡ್ರೈವ್‌ನಿಂದ ತುಸು ದೂರ ಸರಿದಿದ್ದಾರೆ. ಆದರೆ ಇದೀಗ ಆಫ್ ರೋಡ್ ಡ್ರೈವಿಂಗ್ ಮೂಲಕ ಗಮನಸೆಳೆದಿದ್ದಾರೆ. ಇಲ್ಲಿದೆ ಇದರ ಮಾಹಿತಿ.

ದುಬೈ(ಅ.20): ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿ ರೇಂಜ್ ರೋವರ್, BMW, ಮರ್ಸಡೀಸ್ ಬೆಂಝ್ ಸೇರಿದಂತೆ ಲಕ್ಸುರಿ ಕಾರುಗಳಿವೆ. ಆದರೆ ಈ ಕಾರುಗಳನ್ನ ಬಿಟ್ಟು ಸಲ್ಮಾನ್ ಖಾನ್ ಪೊಲರಿಸ್ ಆಫ್ ರೋಡ್ ಜೀಪ್ ಡ್ರೈವ್ ಮಾಡಿ ಗಮನಸೆಳೆದಿದ್ದಾರೆ.

View post on Instagram

ದುಬೈನ ಮರಳುಗಾಡಿನಲ್ಲಿ ಸಲ್ಮಾನ್ ಖಾನ್ ಪೊಲರಿಸ್ RZR1000 ಆಫ್ ಡ್ರೈವ್ ಜೀಪ್ ಡ್ರೈವ್ ಮಾಡಿದ್ದಾರೆ. ಸಲ್ಲು ಜೊತೆ ಭಾರತದ ಪೊಲರಿಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಹಾಗೂ ಪೊಲರಿಸ್ ಸಿಇಓ ಈಚರ್ ಪೊಲರಿಸ್ ಕಾಣಿಸಿಕೊಂಡಿದ್ದಾರೆ.

ನೂತನ ಪೊಲರಿಸ್ RZR1000 ಪ್ರಮೋಶನ್‌ಗಾಗಿ ಸಲ್ಮಾನ್ ದುಬೈ ಮರುಳುಗಾಡಿನಲ್ಲಿ ಆಫ್ ರೋಡ್ ಡ್ರೈವ್ ಮಾಡಿದ್ದಾರೆ. 999ಸಿಸಿ ಲಿಕ್ವಿಡ್ ಕೂಲ್‌ಡ್ ಇಂಜಿನ್ ಹೊಂದಿರುವ ಪೊಲರಿಸ್ RZR1000 ಜೀಪ್ 621 ಕೆಜಿ ತೂಕವಿದೆ. ಇನ್ನು ಇದರ ಇಂಧನ ಸಾಮರ್ಥ್ಯ 35.9 ಲೀಟರ್. 343mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.ಇದರ ಬೆಲೆ 13.2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)