ನವದೆಹಲಿ(ಮೇ.21): ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆಗೆ ಸಜ್ಜಾಗಿದೆ. 7 ಸೀಟಿನ ಟ್ರೈಬರ್ ಕಾರು ರೆನಾಲ್ಟ್ ಕ್ವಿಡ್ ರೀತಿ ಕಡಿಮೆ ಬೆಲೆಯ ಕಾರು. ನೂತನ  MPV ಕಾರಿನ ಟೀಸರ್ ಬಿಡುಗಡೆಯಾಗಿದೆ. ರೋಡ್ ಟೆಸ್ಟಿಂಗ್ ಸಂದರ್ಭದಲ್ಲಿನ ಟೀಸರ್ ಈಗ ಭಾರಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆ- ಬೆಲೆ 6.5 ಲಕ್ಷ ರೂ!

ಈ ಕಾರಿನ ಬೆಲೆ ಕೇವಲ 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಭಾರತದಲ್ಲಿರುವ ಅತ್ಯಂತ ಕಡಿಮೆ ಬೆಲೆಯ MPV ಕಾರು.  ಜುಲೈನಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಅತ್ಯುತ್ತಮ ಗುಣಮಟ್ಟ, ಮೈಲೇಜ್ ಹಾಗೂ ಗರಿಷ್ಠ ಸುರಕ್ಷತೆ ನೀಡಲಿದೆ ಎಂದು ಕಂಪನಿ ಹೇಳಿದೆ. ಜುಲೈನಲ್ಲಿ ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಜೂನ್‌ನಿಂದ MG ಹೆಕ್ಟೆರ್ ಕಾರು ಬುಕಿಂಗ್ ಆರಂಭ!

ನೂತನ ಕಾರಿನ ಎಂಜಿನ್ ಪವರ್ ಕುರಿತು ಕಂಪನಿ ಯಾವುದೇ ಮಾಹಿತಿ ಬಹಿರಂಗ  ಪಡಿಸಿಲ್ಲ. ಆದರೆ  1.0 ಲೀಟರ್ ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇನ್ನು AMT (ಅಟೋಮ್ಯಾಟಿಕ್ ಟ್ರಾನ್ಸಮಿಶನ್) ಹೊಂದಿರಲಿದೆ. BS-VI ಎಮಿಶನ್ ನಿಯಮ ಕೂಡ ಪಾಲಿಸಲಿದೆ.