ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆ- ಬೆಲೆ 6.5 ಲಕ್ಷ ರೂ!
ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗಿದೆ. ಹಲವು ಹೊಸತನ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಾರು ಇದೀಗ ಮಾರುಕಟ್ಟೆ ಸಂಚಲನ ಸೃಷ್ಟಿಸಿದೆ. ಬುಕಿಂಗ್ ಆರಂಭಿಸಿದ ಮೊದಲ ದಿನವೇ 2000 ಕಾರುಗಳು ಬುಕ್ ಆಗಿದ್ದವು. ಇದೀಗ ವೆನ್ಯೂ ಕಾರು ಬಿಡುಗಡೆಯಾಗಿದೆ. ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
ನವದೆಹಲಿ(ಮೇ.21): ಬಹುನಿರೀಕ್ಷಿತ ಹ್ಯುಂಡೈ ವೆನ್ಯೂ SUV ಕಾರು ಬಿಡುಗಡೆಯಾಗಿದೆ. ಈ ಮೂಲಕ ಇದೀಗ ಸಬ್ ಕಾಂಪಾಕ್ಟ್ SUV ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗಿದೆ.
ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!
ವೆನ್ಯೂ ಕಾರಿನ ಬೆಲೆ ಇತರ SUV ಕಾರುಗಳಿಗೆ ಹೋಲಿಸಿದರೆ ಕಡಿಮೆ. ನೂತನ ವೆನ್ಯೂ ಕಾರಿನ ಬೆಲೆ 6.50 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ 11. 10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಸತನ, ಆಧುನಿಕ ತಂತ್ರಜ್ಞಾನ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ ವೆನ್ಯೂ ಕಾರು ಬಿಡುಗಡೆಯಿಂದ ಇತರ ಕಾರುಗಳಿಗೆ ನಡುಕ ಶುರುವಾಗಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಮಾರುತಿ ಬಲೆನೊ- ಟೊಯೊಟಾ ಗ್ಲಾಂಝಾ ಟೀಸರ್ ರಿಲೀಸ್!
ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0 ಲೀಟರ್, 1.2 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 82 bhp ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಮಾರ್ಥ್ಯ ಹೊಂದಿದೆ. ಇನ್ನು 1.0 ಲೀಟರ್, 4 ಸಿಲಿಂಡರ್, ಪೆಟ್ರೋಲ್ ಎಂಜಿನ್ ಕಾರು 82 bhp ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಇದನ್ನೂ ಓದಿ: ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!
1.4-ಲೀಟರ್, 4-ಸಿಲಿಂಡರ್, ಟರ್ಬೋ ಚಾರ್ಜ್ ಡೀಸೆಲ್ ಎಂಜಿನ್ ವೆನ್ಯೂಕಾರು 89 bhp ಪವರ್ ಹಾಗೂ 220 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6-ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.