ನವದೆಹಲಿ(ಮೇ.16): MG ಮೋಟಾರ್ಸ್ ಕಂಪನಿ ಭಾರತದಲ್ಲಿ ಮೊಟ್ಟ ಮೊದಲ ಕಾರು ಅನಾವರಣ ಮಾಡಿದೆ. MG ಹೆಕ್ಟೆರ್ SUV ಕಾರು ಜೂನ್ ತಿಂಗಳಲ್ಲಿ ನೂತನ ಕಾರು  ಬಿಡುಗಡೆಯಾಗಲಿದೆ. ಇನ್ನು ಬುಕಿಂಗ್ ಜೂನ್ ಆರಂಭಿಂದ ಆರಂಭಗೊಳ್ಳಲಿದೆ ಎಂದು ಕಂಪನಿ ಖಚಿತಪಡಿಸಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ  MG ಹೆಕ್ಟೆರ್ ಕಾರು ಆತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಇದನ್ನೂ ಓದಿ: ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!

ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ. 10 ಸ್ಪೋಕ್ ಆಲೋಯ್ ವೀಲ್ಹ್, ದೊಡ್ಡದಾದ ಔಟ್‌ಸೈಡ್ ರೇರ್ ವಿವ್ಯೂ ಮಿರರ್, ಪವರ್ ಅಡ್ಜಸ್ಟೇಬರ್ ಸೀಟ್, ಕ್ರ್ಯೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 

ಇದನ್ನೂ ಓದಿ: ಸಿಯೆರಾ to ಬೋಲ್ಟ್- ಮಿಂಚಿ ಮರೆಯಾದ 10 ಟಾಟಾ ಕಾರು!

MG ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ FCA ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ರಿಂದ ಆರಂಭಗೊಳ್ಳಲಿದ್ದು, ಗರಿಷ್ಟ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಜೂನ್ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗಲಿದೆ.