2 ತಿಂಗಳಲ್ಲಿ 13 ಸಾವಿರ ಮಹೀಂದ್ರ XUV300 ಕಾರು ಬುಕ್- ಬ್ರಿಜಾಗೆ ಪೈಪೋಟಿ!
ನೂತನ ಮಹೀಂದ್ರ XUV300 ಕಾರು ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಇಷ್ಟೇ ಅಲ್ಲ ಮಾರುತಿ ಬ್ರಿಜಾ, ಫೋರ್ಡ್ ಇಕೋ ಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರಿಗೆ ಭಾರಿ ಪೈಪೋಟಿ ನೀಡುತ್ತಿದೆ. 2 ತಿಂಗಳಲ್ಲಿ ಕಾರಿನ ಬುಕಿಂಗ್ ಹಾಗೂ ಬೇಡಿಕೆ ಕುರಿತ ಮಾಹಿತಿ ಇಲ್ಲಿದೆ.
ನವದೆಹಲಿ(ಮಾ.15): ಭಾರತದ ಕಾರು ಮಾರುಕಟ್ಟೆಯಲ್ಲೀಗ ಸ್ವದೇಶಿ ಕಾರುಗಳದ್ದೇ ಮೇಲಗೈ. ಒಂದೆಡೆ ಟಾಟಾ ಮೋಟಾರ್ಸ್ ಮತ್ತೊಂದೆಡೆ ಮಹೀಂದ್ರ. ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಹೀಂದ್ರ XUV300 ಕಾರು ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಕಳೆದ 2 ತಿಂಗಳಲ್ಲಿ ಬರೋಬ್ಬರಿ 13,000 ಮಹೀಂದ್ರ XUV300 ಕಾರು ಬುಕ್ ಆಗಿದ್ದು, ಬುಕಿಂಗ್ ದಾಖಲೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಮಕ್ಕಳಿಗಾಗಿ ಬುಗಾಟಿ ಬೇಬಿ ಎಲೆಕ್ಟ್ರಿಕ್ ಕಾರು - ಬೆಲೆ 25.95 ಲಕ್ಷ!
ಮಹೀಂದ್ರ XUV300 ಕಾರು ಫೆಬ್ರವರಿಯಲ್ಲಿ ಬಿಡುಗಡೆಯಾದರೂ, ಜನವರಿಯಿಂದ ಬುಕಿಂಗ್ ಆರಂಭಿಸಿತ್ತು. ಇದೀಗ ಕೇವಲ 2 ತಿಂಗಳಲ್ಲಿ ಬರೋಬ್ಬರಿ 13,000 ಕಾರು ಬುಕ್ ಆಗೋ ಮೂಲಕ, ಮಾರುತಿ ಬ್ರಿಜಾ, ಫೋರ್ಡ್ ಇಕೋಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರಿಗಿ ಭಾರಿ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಗರಿಷ್ಠ ಮಾರಾಟವಾದ ಸಣ್ಣ ಕಾರು- ಇಲ್ಲಿದೆ ಲಿಸ್ಟ್!
ನೂತನ ಮಹೀಂದ್ರ XUV300 ಕಾರಿನ ಬೆಲೆ 7.90 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ XUV300 ಕಾರು ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. ಈ ಕಾರನ್ನು 20,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು