ಐಷಾರಾಮಿ ಹಹಾಗೂ ದುಬಾರಿ ಕಾರು ಬುಗಾಟಿ ಇದೀಗ 110ನೇ ವಾರ್ಷಿಕೋತ್ವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಬುಗಾಟಿ ಬೇಬಿ ಕಾರು ಅನಾವರಣ ಮಾಡಿದೆ. ಇದರ ಬೆಲೆ 25.95 ಲಕ್ಷ ರೂಪಾಯಿ. ಈ ಕಾರಿನ ವಿಶೇಷತೆ ಇಲ್ಲಿದೆ.  

ಫ್ರಾನ್ಸ್(ಮಾ.14): ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಬುಗಾಟಿ ಕಾರು ಮುಂಚೂಣಿಯಲ್ಲಿದೆ. ದುಬಾರಿ ಕಾರು ಅನ್ನೋ ಹೆಗ್ಗಳಿಕೆ ಹೊಂದಿರುವ ಬುಗಾಟಿ ಇದೀಗ ಮಕ್ಕಳಿಗಾಗಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಬುಗಾಟಿ ಬೇಬಿ ಎಲೆಕ್ಟ್ರಿಕ್ ಕಾರು ಇದೀಗ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!

ಬುಗಾಟಿ ಕಂಪನಿಯ 110ನೇ ವಾರ್ಷಿಕೋತ್ಸವದಲ್ಲಿ ಬುಗಾಟಿ ಬೇಬಿ ಕಾರು ಅನಾವರಣ ಮಾಡಿದೆ. ಈ ಕಾರಿನ ಬೆಲೆ ಬರೋಬ್ಬರಿ 25.95 ಲಕ್ಷ ರೂಪಾಯಿ. 1927ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಬೇಬಿ ಕಾರನ್ನು ಇದೀಗ ಕೆಲ ಬದಲಾವಣೆಯೊಂದಿಗೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಅನಾವರಣ ಮಾಡಿದೆ.

Scroll to load tweet…

ಇದನ್ನೂ ಓದಿ: ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು!

ಈ ಕಾರು ಚಲಾಯಿಸಲು ಲೈಸೆನ್ಸ್ ಬೇಕಿಲ್ಲ. ಇದರ ಗರಿಷ್ಠ ವೇಗ 20 KMPH. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾದರೆ ಇದರ ವೇಗವನ್ನು ಹೆಚ್ಚಿಸುವ ಅವಕಾಶವಿದೆ. ನೂತನ ಬುಗಾಟಿ ಬೇಬಿ 500 ಕಾರುಗಳನ್ನು ಉತ್ಪಾದಿಸಲು ಬುಗಾಟಿ ನಿರ್ಧರಿಸಿದೆ.