ಬೆಂಗಳೂರು(ಮಾ.29): ಬೆಂಗಳೂರು ಮೂಲದ ಒಲಾ ಕ್ಯಾಬ್ ಸಂಸ್ಥೆ ವಿಶ್ವಮಟ್ಟದಲ್ಲೇ ಸದ್ದು ಮಾಡುತ್ತಿದೆ. ನಿಷೇಧದಿಂದ ಬಚಾವ್ ಆಗಿರುವ ಒಲಾ ಇದೀಗ ZOOM ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಶೀಘ್ರದಲ್ಲೇ ಝೂಮ್ ಕಾರು ರೀತಿಯಲ್ಲಿ ಓಲಾ ಸೆಲ್ಫ್ ಡ್ರೈವ್ ಕಾರು ಸೇವೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಆಟಿಕೆ ಕಾರಿನಲ್ಲಿ ಮುಖ್ಯ ರಸ್ತೆಗೆ ಬಂದ ಪುಟಾಣಿ- ಕಕ್ಕಾಬಿಕ್ಕಿಯಾದ ಪೊಲೀಸ್!

ಒಲಾ ಸೆಲ್ಫ್ ಡ್ರೈವ್ ಕಾರು ಸೇವೆಗೆ ಬರೋಬ್ಬರಿ 3000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಈಗಾಗಲೇ ಹ್ಯುಂಡೈ ಹಾಗೂ ಕಿಯಾ ಮೋಟಾರ್ಸ್  ಒಲಾ ಜೊತೆ ಕೈಜೋಡಿಸಿದೆ. ಹ್ಯುಂಡೈ ಹಾಗೂ ಕಿಯಾ ಮೋಟಾರ್ಸ್ 2000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕ್ಯಾಬ್, ಟ್ಯಾಕ್ಸಿ ರೂಪದಲ್ಲಿದ್ದ ಒಲಾ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!

ಆರಂಭಿಕ ಹಂತದಲ್ಲಿ 10,000 ಕಾರುಗಳನ್ನು ಪರಿಚಯಿಸಲು ಒಲಾ ಮುಂದಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಒಲಾ ಸೆಲ್ಫಿ ಡ್ರೈವ್ ಕಾರುಗಳನ್ನು ಪರಿಚಯಿಸಲಾಗುತ್ತಿದೆ. ಬಳಿಕ ಭಾರತದ ಎಲ್ಲಾ ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಸೆಲ್ಫಿ ಡ್ರೈವ್ ಕಾರುಗಳಲ್ಲಿ ಝೂಮ್ ಕಾರು ಹೆಚ್ಚು ಜನಪ್ರಿಯವಾಗಿದೆ. ಇದೀಗ ಒಲಾ ಕೂಡ ಇದೇ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದು ಪೈಪೋಟಿ ಹೆಚ್ಚಾಗಲಿದೆ.