ವಿಶೇಷ ವಿನ್ಯಾಸ, ಕಡಿಮೆ ಬೆಲೆಯಲ್ಲಿ ಮಹೀಂದ್ರ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ಮಹೀಂದ್ರ GenZe 2.0 ಸ್ಕೂಟರ್ ಹೆಚ್ಚಿನ ಮಾಹಿತಿ ಇಲ್ಲಿದೆ.
ನಾಸಿಕ್(ಜ.25): ಮಹೀಂದ್ರ ಕಂಪನಿ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ಈಗಾಗಾಲ್ ಜಾವಾ ಮೋಟರ್ ಬೈಕ್ ಬಿಡುಗಡೆ ಮಾಡೋ ಮೂಲಕ ಭಾರಿ ಸದ್ದು ಮಾಡಿದ ಮಹೀಂದ್ರ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ರೋಡ್ ಟೆಸ್ಟ್ ಕೂಡ ನಡೆಸಿದೆ.

ಇದನ್ನೂ ಓದಿ:ಎಷ್ಟು ಮೈಲೇಜ್ ಕೊಡುತ್ತೆ ಮುಖ್ಯವಲ್ಲ: ಮಾರುತಿಗೆ ಟಾಟಾ ಟಾಂಗ್!
ಅಮೇರಿಕ ಮೂಲದ GenZe ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಭಾರತಕ್ಕೂ ಕಾಲಿಡುತ್ತಿದೆ. GenZe ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕತ್ವ ಮಹೀಂದ್ರ ಗ್ರೂಪ್ ಹಿಡಿತದಲ್ಲಿದೆ. ಇದೀಗ GenZe ಸಹಯೋಗದೊಂದಿಗೆ ವಿಶೇಷ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಮಹೀಂದ್ರ GenZe 2.0 ಸ್ಕೂಟರ್ ಹೊಸ ದಾಖಲೆ ಬರೆಯೋ ಎಲ್ಲಾ ಸಾಧ್ಯತೆ ಇದೆ.
ಇದನ್ನೂ ಓದಿ: ವಿಶ್ವದ ಸ್ಟೈಲೀಶ್ ಬೈಕ್ - ಟ್ರಿಯಂಪ್ ರಾಕೆಟ್ III TFC ಅನಾವರಣ!
1.6 KwH ಬ್ಯಾಟರಿ ಹೊಂದಿರುವ ಮಹೀಂದ್ರ GenZe 2.0 ಸ್ಕೂಟರ್, ಒಂದು ಬಾರಿ ಚಾರ್ಜಜ್ ಮಾಡಿದರೆ 48 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. ಇದರ ಗರಿಷ್ಠ ವೇಗ 48 ಕಿ.ಮೀ ಪ್ರತಿ ಗಂಟೆಗೆ. ಡಿಸ್ಕ್ ಬ್ರೇಕ್, ಎಲ್ಇಡಿ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ.
