ಲಂಡನ್(ಜ.25): ಬ್ರಿಟೀಷ್ ಮೂಲದ ಟ್ರಿಯಂಪ್(Triumph) ಮೋಟಾರ್ ಸೈಕಲ್ ಇದೀಗ ನೂತನ ಲಿಮಿಟೆಡ್ ಎಡಿಶನ್ ಟ್ರಿಯಂಪ್ ಫ್ಯಾಕ್ಟರಿ ಕಸ್ಟಮ್(TFC) ಕಾನ್ಸೆಪ್ಟ್ ಬೈಕ್ ಅನಾವರಣ ಮಾಡಿದೆ. 2019ರ ಟ್ರಿಯಂಪ್ III ಪವರ್ ಬೈಕ್ ಇದೇ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

2.3 ಲೀಟರ್ longitudinal triple ಎಂಜಿನ್ ಹೊಂದಿರುವ ಟ್ರಿಯಂಪ್ ರಾಕೆಟ್ III TFC ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. 2004ರಲ್ಲಿ ಬಿಡುಗಡೆಯಾದ ಎಂಜಿನ್ ಅಪ್‌ಗ್ರೇಡ್ ಮೂಲಕ ರಸ್ತೆಗಿಳಿಯಲಿದೆ. 

ಇದನ್ನೂ ಓದಿ: ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ!

ನೂತನ ಬೈಕ್ ಎಂಜಿನ್ 180 bhp ಪವರ್ ಹಾಗೂ  230 Nm ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮಾರ್ಥ್ಯಹೊಂದಿದೆ. ಈ ಲಿಮಿಟೆಡ್ ಎಡಿಶನ್ ಬೈಕ್ 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ವಿಶೇಷ ಅಂದರೆ ಈ ಬೈಕ್ 2019ರ ಅಂತ್ಯದಲ್ಲಿ ಭಾರದಲ್ಲೂ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಕುರಿತು ಯಾವುದೇ ಮಾಹಿತಿಯನ್ನ ಕಂಪನಿ ಬಹಿರಂಗ ಪಡಿಸಿಲ್ಲ.