ಮುಂಬೈ(ಜ.25): ಎಷ್ಟು ಕೊಡುತ್ತೆ? ಈ ಜಾಹೀರಾತು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡೋ ಮೂಲಕ ಮಾರುತಿ ಸುಜುಕಿ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ.  ಕಾರು ಖರೀದಿಸೋ ಬಹುತೇಕ ಎಲ್ಲರ ಪ್ರಶ್ನೆಯನ್ನೇ ಆಧಾರವಾಗಿಟ್ಟುಕೊಂಡು ಮಾರುತಿ ಸುಜುಕಿ ಜಾಹೀರಾತು ಬಿಡುಗಡೆ ಮಾಡಿತ್ತು. ಈ ಕಾರು ಎಷ್ಟು ಮೈಲೇಜ್ ಕೊಡುತ್ತೆ? ಇದೀಗ ಟಾಟಾ ಮೋಟಾರ್ಸ್ ಮಾರುತಿಗೆ ಟಾಂಗ್ ನೀಡಿದೆ.

ಇದನ್ನೂ ಓದಿ: 2 ನಿಮಿಷ ಮಾತಾಡಿ ಭಾರತದಲ್ಲಿ ತೆರಿಗೆ ಇಳಿಸಿಬಿಟ್ಟೆ: ಟ್ರಂಪ್ ಲೊಳಲೊಟ್ಟೆ!!

ಗರಿಷ್ಠ ಮೈಲೇಜ್ ಹಾಗೂ ಕಡಿಮೆ ಬೆಲೆಯಲ್ಲಿ ಮಾರುತಿ ಸುಜುಕಿ ಕಾರುಗಳನ್ನ ಮಾರಾಟ ಮಾಡುತ್ತಿದೆ. ಹೀಗಾಗಿ ಭಾರತದಲ್ಲಿ ಹೆಚ್ಚು ಮಾರಾಟವಾಗೋ ಕಾರುಗಳಲ್ಲಿ ಮಾರುತಿ ಅಗ್ರಸ್ಥಾನದಲ್ಲಿದೆ. ಇದೀಗ ಟಾಟಾ ಭಾರಿ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್, ಎಷ್ಟು ಮೈಲೇಜ್ ಕೊಡುತ್ತೆ ಅನ್ನೋದಲ್ಲ, ಎಷ್ಟು ಸುರಕ್ಷತೆ ಇದೆ ಅನ್ನೋದು ಹೆಚ್ಚು ಮುಖ್ಯ ಎಂದು ಹೊಸ ಅಭಿಯಾನ ಆರಂಭಿಸಿದೆ. . 

 

 

ಇದನ್ನೂ ಓದಿ: ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಭಾರತದ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಟಾಟಾದ ಇತರ ಕಾರುಗಳು 4 ಸ್ಟಾರ್ ರೇಟಿಂಗ್ ಪಡೆದಿದೆ. ಹೀಗಾಗಿ ಟಾಟಾ ಇದೀಗ ಭಾರತದಲ್ಲಿ ಕಿತ್ನಾ ದೇತಿ ಹೇ ಅಲ್ಲ, ಕಿತ್ನಾ ಸೇಫ್ ಹೇ? ಮುಖ್ಯ ಎಂದಿದೆ.