ಮುಂಬೈ(ಆ.05): ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಹಲವು ವಾಹನ ಬಿಡುಗಡೆ ವಿಳಂಬವಾಗಿತ್ತು. ಇದೀಗ ಒಂದೊಂದೆ ಕಾರುಗಳು ಬಿಡುಗಡೆಯಾಗುತ್ತಿದೆ. ಮಹೀಂದ್ರ ಕಂಪನಿ ನೂತನ ಹಾಗೂ ನ್ಯೂ ಜನರೇಶನ್ ಥಾರ್ ಜೀಪ್ ಅನಾವರಣ ಮಾಡಲು ಮುಂದಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಿಂದ ನೂತನ ಮಹೀಂದ್ರ ಥಾರ್ ಅನಾವರಣಗೊಳ್ಳಲಿದೆ.

ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ!...

ಈಗಾಗಲೇ ಟೀಸರ್ ವಿಡಿಯೋ ಬಿಡುಗಡೆ ಮಾಡಿರುವ ಮಹೀಂದ್ರ, ಆಫ್ ರೋಡ್ ಪ್ರಿಯರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್ ಈ ಥಾರ್ ಜೀಪ್‌ನಲ್ಲಿದೆ.  ಆಕರ್ಷಕ ವಿನ್ಯಾಸ, ಆಫ್ ರೋಡ್ ಸಾಮರ್ಥ್ಯ ಸೇರಿದಂತೆ ಹಲವು ವಿಚಾರದಲ್ಲಿ ನೂತನ ಥಾರ್ ಗ್ರಾಹಕರನ್ನು ಮೋಡಿ ಮಾಡಲಿದೆ.

 

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!...

ಹೆಚ್ಚು ಸ್ಥಳಾವಕಾಶ ಹೊಂದಿರುವ ಕ್ಯಾಬಿನ್, ಹೊಚ್ಚ ಹೊಸ ಡ್ಯಾಶ್ ಬೋರ್ಡ್, ಮೀಟರ್ ಕನ್ಸೋಲ್, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಹೊಚ್ಚ ಹೊಸ ಸ್ಟೀರಿಂಗ್ ವೀಲ್ ಹಾಗೂ ಸೀಟ್, ಮುಂಭಾಗ ಮುಖವಾಗಿರುವ ರೇರ್ ಸೀಟ್ ಸೇರಿದಂತೆ ಹಲವು ಹೊಸತನಗಳು ನೂತನ ಥಾರ್ ಜೀಪ್‌ನಲ್ಲಿದೆ.

2.0 ಲೀಟರ್ TGDI , 4 ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿದ್ದು 190PS ಪವರ್ ಹಾಗೂ 380NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.

ನೂತನ ಥಾರ್ ಬೆಲೆ ಬಹಿರಂಗವಾಗಿಲ್ಲ. ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರ ಥಾರ್ ಬೆಲೆ 9.7 ಲಕ್ಷ ರೂಪಾಯಿ ಹಾಗೂ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).