9 ವರ್ಷಗಳ ಬಳಿಕ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರ XUV500
ಮಹೀಂದ್ರ ಸಂಸ್ಥೆ ಸದ್ಯ ಕಾರು ಉತ್ಪಾದನೆ ನಿಲ್ಲಿಸಿ ಕಡಿಮೆ ಬೆಲೆಯಲ್ಲಿ ವೆಂಟಿಲೇಟರ್ ತಯಾರಿಸುತ್ತಿದೆ. ಈ ಮೂಲಕ ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ನೆರವಾಗುತ್ತಿದೆ. ಇದರ ನಡುವೆ 9 ವರ್ಷಗಳ ಬಳಿಕ ಮಹೀಂದ್ರ ತನ್ನ XUV500 ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಟಾಟಾ ಗ್ರಾವಿಟಾಸ್, ಜೀಪ್ ಕಂಪಾಸ್ ಸೇರಿದಂತೆ ಇತರ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಮುಂಬೈ(ಮಾ.29): ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ವಿಶ್ವಾಸರ್ಹ ಕಾರು ಎಂದೇ ಗುರುತಿಸಿಕೊಂಡಿರುವ ಮಹೀಂದ್ರ ಇದೀಗ ತನ್ನ XUV500 ಕಾರಿಗೆ ಹೊಸ ರೂಪ ನೀಡುತ್ತಿದೆ. 9 ವರ್ಷಗಳ ಹಿಂದೆ ಮಹೀಂದ್ರ XUV500 ಭಾರತದಲ್ಲಿ ಬಿಡುಗಡೆಯಾಯಿಯಿತು. ಟಾಟಾ ಹ್ಯಾರಿಯರ್ , ಎಂಟಿ ಹೆಕ್ಟರ್ ಬಿಡುಗಡೆಯಾದ ಬಳಿಕವೂ ಮಹೀಂದ್ರ XUV500 ತನ್ನದೇ ಆದ ಮಾರುಕಟ್ಟೆ ಹೊಂದಿದೆ. ಇದೀಗ ಮುಂದಿನ ಜನರೇಶನ್ XUV500 ಕಾರು ಬಿಡುಗಡೆಗೆ ಸಜ್ಜಾಗಿದೆ.
ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!
ನೂತನ ಮಹೀಂದ್ರ XUV500 ಕಾರನ್ನು ಮಹೀಂದ್ರ ಮಾಲೀಕತ್ವದ ಸೌತ್ ಕೊರಿಯಾ ಸ್ಸಾಂಗ್ ಯಾಂಗ್ ಕೊರಾಂಡೋ ಕಾರಿನಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. ಮುಂಭಾಗದ ಬಂಪರ್ ಹಾಗೂ ಗ್ರಿಲ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು XUV300 ಕಾರಿನಲ್ಲಿ ಫ್ಲಾಂಕೆಡ್ ಶಾರ್ಪ್ LED ಹೆಡ್‌ಲ್ಯಾಂಪ್ ಬಳಸಲಾಗಿದೆ.
ಹೆಚ್ಚು ಆಕರ್ಷಕ, ನೂತನ BS6 ಮಹೀಂದ್ರ ಬೊಲೆರೋ ಬೆಲೆ ಬಹಿರಂಗ!
ನೂತನ XUV500 ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 190 bhp ಪವರ್ ಹಾಗೂ 380NM ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ. ನೂತನ ಕಾರಿನ ಬೆಲೆ 12.3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಗರಿಷ್ಠ 18.62 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಕೊರೋನಾ ವೈರಸ್ ಕಾರಣ ನೂತನ ಮಹೀಂದ್ರ XUV500 ಕಾರು 2021 ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.