ಹೆಚ್ಚು ಆಕರ್ಷಕ, ನೂತನ BS6 ಮಹೀಂದ್ರ ಬೊಲೆರೋ ಬೆಲೆ ಬಹಿರಂಗ!

ಭಾರತದಲ್ಲಿ ಮಹೀಂದ್ರ ಬೊಲೆರೋ ಜೀಪ್ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಜನಸಾಮಾನ್ಯರಿಂದ ಹಿಡಿದು, ಪೊಲೀಸ್ ಇಲಾಖೆ, ರೈಲ್ವೇ ಅಧಿಕಾರಿಗಳು, ಕಸ್ಟಮ್ಸ್ ಸೇರಿದಂತೆ ಇಲಾಖೆಗಳು ಮಹೀಂದ್ರ ಬೊಲೆರೋ ಜೀಪ್ ಬಳಕೆ ಮಾಡುತ್ತಿದೆ. ಹಳ್ಳಿ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಮಹೀಂದ್ರ ಬೊಲೆರೋ ಮತ್ತಷ್ಟು ಜನಪ್ರಿಯವಾಗಿದೆ. ಇದೀಗ ಬೊಲೆರೋ ಹೊಸ ಅವತಾರದಲ್ಲಿ ಬಿಡುಗಡೆಯಾಗಿದ್ದು, ಬೆಲೆ ಬಹಿರಂವಾಗಿದೆ.

Mahindra launched updated bs6 bolero suv vehilce in india

ನವದೆಹಲಿ(ಮಾ.25): ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಹಾಗೂ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಿರುವ ಮಹೀಂದ್ರ ಬೊಲೆರೋ ಜೀಪ್ ಮತ್ತೆ ಭಾರತದ ನಂ.1 SUV ಅನ್ನೋ ಹಣೆ ಪಟ್ಟಿ ಪಡೆಯುವುದರಲ್ಲಿ ಅನುಮಾನವಿಲ್ಲ. ನೂತನ ಬೊಲೆರೊ 1.5 ಲೀಟರ್, 3 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಇದು ಹಳೇ ಮಹೀಂದ್ರ ಬೊಲೆರೋ ಹಾಗೂ ನೂತನ ಬೊಲೆರೋ ವಾಹನಕ್ಕಿರುವ ಅತೀ ದೊಡ್ಡ ಬದಲಾವಣೆ.

ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!

ನೂತನ ಬೊಲೆರೋ 75 bhp ಪವರ್ ಹಾಗೂ 210 Nm ಪೀಕ್ ಟಾರ್ಕ್ ಉತ್ಪಾದಿಸಿಬಲ್ಲ ಸಾಮರ್ಥ್ಯ ಹೊಂದಿದೆ.  60 ಲೀಟರ್ ಇಂಧನ ಸಾಮರ್ಥ್ಯ ಇಂಧನ ಟ್ಯಾಕ್ ಹೊಂದಿದೆ.  BS6 ಎಮಿಶನ್ ಎಂಜಿನ್ ಹೊಂದಿರುವ ನೂತನ ಬಲೆರೋ ಬೆಲೆ 7.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಗರಿಷ್ಠ 8.78 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ನೂತನ ಬೊಲೆರೋ ವೇರಿಯೆಂಟ್ ಹಾಗೂ ಬೆಲೆ
ಬೊಲೆರೋ B4 BS6 = 7,76,550 ರೂಪಾಯಿ
ಬೊಲೆರೋ B6 BS6 = 8,42,767 ರೂಪಾಯಿ
ಬೊಲೆರೋ B4(opt) BS6 = 8,78,169 ರೂಪಾಯಿ

ನೂತನ ಬೊಲೆರೋ Suv ಕಾರಿನ ಮುಂಭಾಗದ ಗ್ರಿಲ್ ಬದಲಾವಣೆ ಮಾಡಲಾಗಿದೆ. ಬೊನೆಟ್ ಹಾಗೂ ಹೆಡ್‌ಲ್ಯಾಂಪ್ಸ್ ಹ್ಯಾಲೊಜಿನ್ ಆಗಿದ್ದರೂ ಪ್ರತ್ಯೇಕತೆ ಡಿಸೈನ್ ವಾಹನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಭಾಗದ ಬಂಪರ್ ಸಂಪೂರ್ಣ ಬದಲಾಯಿಸಿ ಹೊಸ ಏರ್ ಡ್ಯಾಮ್ ಹಾಗೂ ಫಾಗ್ ಲ್ಯಾಂಪ್ ಮೂಲಕ ಹಳೇ ಬೊಲೆರೋ ಹಾಗೂ ನೂತನ ಬೊಲೆರೋ ವಾಹನಕ್ಕೆ ಎದ್ದು ಕಾಣುವ ಬದಲಾವಣೆ ಮಾಡಲಾಗಿದೆ. 

ನೂತನ ಬೊಲೆರೋ ವಾಹನದಲ್ಲಿ ಡ್ಯುಯೆಲ್ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರಾಂ, ರೇರ್ ಪಾರ್ಕಿಂಗ್ ಕ್ಯಾಮರಾ ಹಾಗೂ ಸೆನ್ಸಾರ್ ಸೇರಿದಂತೆ ಸುರಕ್ಷತಾ ಫೀಚರ್ಸ್ ಕೂಡ ಸೇರಿಸಲಾಗಿದೆ. ಬೊಲೆರೋ ವಾಹನಕ್ಕೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬೇಡಿಕೆ ಇದೆ. 2020ರ ಜನವರಿ ಹಾಗೂ ಫೆಬ್ರವರಿಯಲ್ಲಿ 5,500 ಬೊಲೆರೋ ವಾಹನಗಳು ಭಾರತದಲ್ಲಿ ಮಾರಾಟವಾಗಿದೆ. 
 

Latest Videos
Follow Us:
Download App:
  • android
  • ios