Asianet Suvarna News Asianet Suvarna News

ಪ್ರತಿ ಕಿ.ಮೀ 40 ಪೈಸೆ, ವಾರ್ಷಿಕ 60 ಸಾವಿರ ರೂ ಉಳಿತಾಯದ ಮಹೀಂದ್ರ ಟ್ರಿಯೋ ಝೋರ್ ಬಿಡುಗಡೆ!

ನಿರ್ವಹಣೆ ವೆಚ್ಚ ಪ್ರತಿ ಕಿಲೋಮೀಟರ್‌ಗೆ ಕೇವಲ 40 ಪೈಸೆ ಮಾತ್ರ, ಪ್ರತಿ ವರ್ಷ ಬರೋಬ್ಬರಿ 60,000 ರೂಪಾಯಿ ಉಳಿತಾಯ ಮಾಡಬಲ್ಲ ಹಾಗೂ 550 ಕೆಜಿ ತೂಕ ಸಾಮರ್ಥ್ಯದ ಮಹೀಂದ್ರ ಟ್ರಿಯೋ ಝೋರ್ ಎಲೆಕ್ಟ್ರಿಕ್ ಕಮರ್ಷಿಯಲ್ ರಿಕ್ಷಾ ಬಿಡುಗಡೆ ಮಾಡಲಾಗಿದೆ.

Mahindra launches New Treo Zor Electric 3 Wheeler Cargo ckm
Author
Bengaluru, First Published Oct 30, 2020, 1:27 PM IST

ಬೆಂಗಳೂರು(ಅ.30): ಸುಮಾರು 19.4 ಶತಕೋಟಿ ಡಾಲರ್ ಮೌಲ್ಯದ ಮಹೀಂದ್ರಾ ಸಮೂಹದ ಭಾಗವಾದ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್,  ಭಾರತೀಯ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ ತ್ರಿಚಕ್ರ ಸರಕು ಸಾಗಾಣಿಕೆ ವಾಹನ ಟ್ರಿಯೊ ಝೋರ್ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 2.73 ಲಕ್ಷ ರೂಪಾಯಿಗಳು (ಎಕ್ಸ್ ಶೋರೂಂ ದೆಹಲಿ, ಎಫ್‍ಎಎಂಇ 2 ಮತ್ತು ಸರ್ಕಾರಿ ಸಬ್ಸಿಡಿಗಳ ಬಳಿಕ ನಿವ್ವಳ). ಟ್ರಿಯೊ ಝೋರ್ ಪ್ರಮಾಣಿತ ಟ್ರಿಯೊ ಪ್ಲಾಟ್‍ಫಾರಂ ಆಧರಿಸಿದ್ದು, ಮೂರು ಅವತರಣಿಕೆಗಳಲ್ಲಿ ಅಂದರೆ ಪಿಕ್ ಅಪ್, ಡೆಲಿವರಿ ವ್ಯಾನ್ ಮತ್ತು ಫ್ಲ್ಯಾಟ್ ಬೆಡ್ ವೇರಿಯೆಂಟ್ ಲಭ್ಯವಿದೆ.. ಈ ವಾಹನಗಳು ಭಾರತದಾದ್ಯಂತ ಆಯ್ದ ನಗರಗಳಲ್ಲಿ ಮಹೀಂದ್ರಾ ಸಣ್ಣ ವಾಣಿಜ್ಯ ವಾಹನ ಡೀಲರ್‍ಶಿಪ್‍ಗಳಲ್ಲಿ 2020ರ ಡಿಸೆಂಬರ್‌ನಿಂದ ಲಭ್ಯವಾಗಲಿದೆ.

ಕರ್ನಾಟಕದಲ್ಲಿ ನೂತನ ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!

ಟ್ರಿಯೊ ಝೋರ್ ತನ್ನ ಮಾಲೀಕರಿಗೆ ಅತ್ಯದ್ಭುತ ಮೌಲ್ಯವರ್ಧನೆಯನ್ನು ನೀಡುತ್ತದೆ. ಇದು ಹಾಲಿ ಇರುವ ಡೀಸೆಲ್ ಸರಕು ಸಾಗಾಣಿಕೆ ತ್ರಿಚಕ್ರ* ವಾಹನಗಳಿಗೆ ಹೋಲಿಸಿದರೆ ವಾರ್ಷಿಕ 60 ಸಾವಿರ ರೂಪಾಯಿಗೂ ಅಧಿಕ ಉಳಿತಾಯವನ್ನು ಖಾತರಿಪಡಿಸುತ್ತದೆ. ಇದರ ನಿರ್ವಹಣೆ ವೆಚ್ಚ ಪ್ರತಿ ಕಿಲೋಮೀಟರ್‌ಗೆ ಕೇವಲ 40 ಪೈಸೆ*. ಇದು ಅದ್ಭುತ ಕ್ಷಮತೆಯನ್ನು ನೀಡುತ್ತದೆ ಹಾಗೂ ಉದ್ಯಮದಲ್ಲೇ ಅತ್ಯುತ್ತಮ ಎನಿಸಿದ 8 KW ವಿದ್ಯುತ್ ಮತ್ತು  42 NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಟ್ರಿಯೊ ಝೋರ್  550 ಕೆಜಿ ತೂಕ ಸಾಮಥ್ರ್ಯವನ್ನು ಹೊಂದಿದೆ.

ಮಹೀಂದ್ರಾ ಸಮೂಹದ 75ನೇ ವರ್ಷಾಚರಣೆ ಸಂದರ್ಭದಲ್ಲಿ, ನಾಳಿನ ವಾಹನಗಳ ಉದ್ದೇಶ ಸ್ವಚ್ಛ, ಹಸಿರು ಮತ್ತು ತಂತ್ರಜ್ಞಾನದಿಂದ ಸಂಪರ್ಕಿತವಾಗಿರಬೇಕು ಎಂಬ ಧ್ಯೇಯ ನಮ್ಮದು. ಎಲೆಕ್ಟ್ರಿಕ್ ವಾಹನದಲ್ಲಿ ಮೊದಲ ಹಾಗೂ ಕೊನೆಯ ಹಂತದ ಸಂಪರ್ಕಕ್ಕೆಭಾರತ ಇಡೀ ವಿಶ್ವದಲ್ಲೇ ಅಗ್ರಗಣ್ಯ ದೇಶವಾಗುವ ಎಲ್ಲ ಸಾಧ್ಯತೆಗಳು ಇವೆ ಎನ್ನುವುದು ನನ್ನ ನಂಬಿಕೆ. ನಮ್ಮ ಟ್ರಿಯೊ ಪ್ಲಾಟ್‍ಫಾರಂ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭಾರತದಲ್ಲೇ ತಯಾರಾಗುವ ಮೂಲಕ ಆತ್ಮನಿರ್ಭರ ಭಾರತಕ್ಕೆ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಟ್ರಿಯೊ ಝೋರ್ ಸ್ವಚ್ಛ, ಸುಸ್ಥಿರ ಮತ್ತು ಕೈಗೆಟುಕುವಂಥ ಪರಿಹಾರವನ್ನು ಕೊನೆಯ ಹಂತದ ಸರಬರಾಜಿಗೆ ಒದಗಿಸುತ್ತದೆ ಎಂದು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‍ನ ಎಂಡಿ & ಸಿಇಓ ಡಾ. ಪವನ್ ಗೋಯಾಂಕ ಹೇಳಿದರು.

ಮಹೀಂದ್ರ ಬೊಲೆರೋ ಖರೀದಿಸುವ ಗ್ರಾಹಕರಿಗೆ ಮಾತ್ರ ಹಬ್ಬದ ಪ್ರಯುಕ್ತ ವಿಶೇಷ ಆಫರ್!.

ಪ್ರಮಾಣಿತ ಟ್ರಿಯೊ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಪ್ಲಾಟ್‍ಫಾರಂ ಈಗಾಗಲೇ 5000ಕ್ಕೂ ಅಧಿಕ ಸಂತ್ರಪ್ತ ಗ್ರಾಹಕರ ಮೂಲಕ ಕೊನೆಯ ಹಂತದ ಸಂಚಾರ ಸಂಪರ್ಕವನ್ನು ಮರುವ್ಯಾಖ್ಯಾನಿಸಿದೆ. ಇವು ಈಗಾಗಲೇ ಭಾರತೀಯ ರಸ್ತೆಗಳಲ್ಲಿ 35 ದಶಲಕ್ಷ ಕಿಲೋಮೀಟರ್ ಪ್ರಯಾಣಿಸಿವೆ. ಟ್ರಿಯೊ ಝೋರ್ ವಾಹನವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಇದು ಸಾಕ್ಟು ಗ್ರಾಹಕ ಮೌಲ್ಯವರ್ಧನೆಯನ್ನು ಒದಗಿಸುತ್ತವೆ ಹಾಗೂ ಪ್ರತಿ ಗ್ರಾಹಕರ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಮೂರು ಅವತರಣಿಕೆಗಳಲ್ಲಿ ಲಭ್ಯವಿದೆ. ಹೊಸ ಟ್ರಿಯೊ ಝೋರ್ ನಮ್ಮ ಗ್ರಾಹಕರ ಉಳಿತಾಯವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಸಜ್ಜಾಗಿದ್ದು, ವಾರ್ಷಿಕವಾಗಿ 60 ಸಾವಿರ ರೂಪಾಯಿಗೂ ಅಧಿಕ ಉಳಿತಾಯ ಮಾಡಲಿದೆ. ಈಮೂಲಕ ಅವರ ಕನಸು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲಿದ್ದು, ಕಟ್ಟಕಡೆಯ ಹಂತದ ವಿತರಣೆಯನ್ನು ಮರುವ್ಯಾಖ್ಯಾನಿಸಲಿದೆ ಎಂದು ಮಹೀಂದ್ರಾ ಎಲೆಕ್ಟ್ರಿಕ್‍ನ ಎಂಡಿ & ಸಿಇಓ ಮಹೇಶ್ ಬಾಬು, ಹೇಳಿದರು.

ಟ್ರಿಯೊ ಝೋರ್‌ನ ಪ್ರಮುಖ ಅಂಶಗಳು
1. ವಾರ್ಷಿಕ 60 ಸಾವಿರ ರೂಪಾಯಿಗಳಿಗೂ ಅಧಿಕ ಉಳಿತಾಯ (ಡೀಸೆಲ್ ಸರಕು ಸಾಗಾಣಿಕೆ ವಾಹನಗಳಿಗೆ ಹೋಲಿಸಿದರೆ):
⦁    ಡೀಸೆಲ್ ಸರಕು ಸಾಗಾಣಿಕೆ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಇಂಧನ ವೆಚ್ಚದ ಉಳಿತಾಯ ಪ್ರತಿ ಕಿಲೋಮೀಟರ್‍ಗೆ 2.10 ರೂಪಾಯಿ ಆಗಲಿದೆ.
⦁    ಇದರ ಜತೆಗೆ ಅತ್ಯಂತ ಕನಿಷ್ಠ ನಿರ್ವಹಣಾ ವೆಚ್ಚವಾದ ಪ್ರತಿ ಕಿಲೋಮೀಟರ್‍ಗೆ 40 ಪೈಸೆ ವಎಚ್ಚ. ಡೀಸೆಲ್ ತ್ರಿಚಕ್ರ ವಾಹನಗಳಿಗೆ ಕಿಲೋಮೀಟರ್ ನಿರ್ವಹಣೆ ವೆಚ್ಚ 65 ಪೈಸೆ. ಈ ಮೂಲಕವೂ ಉಳಿತಾಯ ಸಾಧ್ಯವಾಗಲಿದೆ.

2. ಗಮನಾರ್ಹ ಕ್ಷಮತೆ ಒದಗಿಸುತ್ತದೆ
⦁    ಉದ್ಯಮದಲ್ಲೇ ಅತ್ಯುತ್ತಮ ಎನಿಸಿದ 8 ಕಿಲೋವ್ಯಾಟ್ ಶಕ್ತಿ ಮತ್ತು ಇಡೀ ವಲಯದಲ್ಲೇ ಅತ್ಯುತ್ತಮ ಎನಿಸಿದ 42 ಎನ್‍ಎಂ ತೊರಾಕ್
⦁    ಬೂಸ್ಟ್ ಮೋಡ್: ನಿಮ್ಮ ಚಾಲನಾ ಅನುಭವವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಅಧಿಕ ವೇಗವನ್ನು ಹೊಂದಲು ಸಾಧ್ಯವಿದ್ದು, ಇದು ಹೆಚ್ಚು ಸಮಯ ಉಳಿಸುತ್ತದೆ.
⦁    ಅತ್ಯಾಧುನಿಕ ಐಪಿ67 ರೇಟೆಡ್ ಮೋಟರ್‍ಗಳು ದೂಳು ಹಾಗೂ ನೀರು ಪ್ರವೇಶಿಸದಂತೆ ವಿಸ್ತøತ ಸುರಕ್ಷೆ ಒದಗಿಸುತ್ತವೆ.
⦁    ಉದ್ಯಮದಲ್ಲೇ ಅತ್ಯುತ್ತಮ ಎನಿಸಿದ 550 ಕೆಜಿ ಪೇಲೋಡ್ ಸಾಮಥ್ರ್ಯ ಹೊಂದಿದ್ದು, ಇದು ಅಧಿಕ ಗಳಿಕೆ ಅವಕಾಶವನ್ನು ಒದಗಿಸುತ್ತದೆ ಹಾಗೂ ಇದು ಇಲೆಕ್ಟ್ರಿಕ್ ತ್ರಿಚಕ್ರ ವಾಹನ ವಲಯದಲ್ಲೇ ಗರಿಷ್ಠ ಪೇಲೋಡ್ ಸಾಮಥ್ರ್ಯವಾಗಿದೆ.
⦁    ದಿನಕ್ಕೆ ಹೆಚ್ಚಿನ ಟ್ರಿಪ್ ಪಡೆಯಲು ಸಹಕಾರಿಯಾಗಲಿದ್ದು, ದಿನಕ್ಕೆ 125 ಕಿಲೋಮೀಟರ್ ಪ್ರಮಾಣಿತ ಟ್ರಿಪ್ ಪಡೆಯಬಹುದು.

3. ಹಿಂದೆಂದಿಗಿಂತಲೂ ಸ್ಥಿರ ಹಾಗೂ ಸುರಕ್ಷಿತ
⦁    ಸುರಕ್ಷಿತ ಮತ್ತು ಸ್ಥಿರವಾದ ಸವಾರಿಯನ್ನು ಆಸ್ವಾದಿಸಬಹುದಾಗಿದ್ದು, ಡೀಸೆಲ್ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಉದ್ಯಮದಲ್ಲೇ ಅತಿ ಉದ್ದದ ಅಂದರೆ 2216 ಎಂಎಂ ವ್ಹೀಲ್‍ಬೇಸ್ ಹೊಂದಿದೆ.
⦁    ಡೀಸೆಲ್ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆಉದ್ಯಮದಲ್ಲೇ ಅತಿ ಉದ್ದದ ಟೈರುಗಳನ್ನು ಅಂದರೆ 30.48 ಸೆಂಟಿಮೀಟರ್ ಉದ್ದದ ಟೈರುಗಳನ್ನು ಹೊಂದಿದೆ.

4. ಪ್ರತಿ ಅಗತ್ಯತೆಯನ್ನು ಈಡೇರಿಸುವಂತೆ 3 ಅವತರಣಿಕೆಗಳು
⦁    ಡೆಲಿವರಿ ವ್ಯಾನ್, ಪಿಕ್ ಅಪ್ ಮತ್ತು ಫ್ಲಾಟ್‍ಬೆಡ್ ಅವತರಣಿಕೆಗಳಲ್ಲಿ ನಿಮ್ಮ ವಹಿವಾಟು ಅಗತ್ಯತೆಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
5. ಅತ್ಯಾಧುನಿಕ ಲಿಥಿಯಂ ಅಯಾನ್ ಬ್ಯಾಟರಿ
⦁    1.5 ಲಕ್ಷ ಕಿಲೋಮೀಟರ್‍ಗಿಂತಲೂ ಅಧಿಕ ಬ್ಯಾಟರಿ ಜೀವಿತಾವಧಿಯನ್ನು ಹೊಂದಿರುವುದರಿಂದ ನಿರ್ವಹಣೆ ರಹಿತ ಸವಾರಿಯನ್ನು ಪಡೆಯಬಹುದಾಗಿದೆ.
⦁    ಸುಲಭ ಚಾರ್ಜಿಂಗ್: ನಿಮ್ಮ ಟ್ರಿಯೊ ಝಾರ್ ವಾಹನವನ್ನು ಚಾರ್ಜಿಂಗ್ ಮಾಡುವುದು ಮೊಬೈಲ್ ಫೋನ್‍ಗಳನ್ನು ಚಾರ್ಜ್ ಮಾಡಿದಷ್ಟೇ ಸುಲಭ. 15ಎಎಂಪಿ ಸಾಕೆಟ್‍ಗೆ ಪ್ಲಗ್ ಮಾಡಿ ಚಾರ್ಜ್ ಮಾಡಬಹುದಾಗಿದೆ.

6. ಬಳಲಿಕೆ ಮುಕ್ತ ಚಾಲನಾ ಅನುಭವ
⦁    ಸುಲಭವಾದ ಸ್ವಯಂಚಾಲಿತ ವರ್ಗಾವಣೆಯೊಂದಿಗೆ ಸುಲಭವಾಗಿ ಚಾಲನೆ ಮಾಡಬಹುದು.ಕ್ಲಚ್‍ರಹಿತ, ಶಬ್ದರಹಿತ ಮತ್ತು ಕಂಪನರಹಿತ ಸವಾರಿಯನ್ನು ಆಸ್ವಾದಿಸಿ
⦁    ನಿಮ್ಮ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಸಮಯವನ್ನು ಇಳಿಸುವ ಸಲುವಾಗಿ ಡೀಸೆಲ್ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಉದ್ಯಮದಲ್ಲೇ ಅತ್ಯುತ್ತಮ ಎನಿಸಿದ ಟ್ರೇಲೋಡಿಂಗ್ ಎತ್ತರ 675 ಮಿಲಿಮೀಟರ್ ಇದೆ.

7. ಎನ್‍ಇಎಂಓ ಮೊಬಿಲಿಟಿ ಪ್ಲಾಟ್‍ಫಾರಂನೊಂದಿಗೆ ಸಂಪರ್ಕಿತ ಮತ್ತು ದಕ್ಷ ಸರಕು ನಿರ್ವಹಣೆ
⦁    ಕ್ಲೌಡ್ ಆಧರಿತ ಸಂಪರ್ಕವನ್ನು ಎಲ್ಲ ಕಡೆಗಳಲ್ಲಿ ಪಡೆಯಬಹುದಾಗಿದ್ದು, ವಾಹನ ಶ್ರೇಣಿ, ವೇಗ, ಸ್ಥಳ ಮತ್ತು ಇತರ ಅಂಶಗಳ ಮೇಲೆ ನಿಗಾ ಇರಿಸಬಹುದು.

8. ಆಕರ್ಷಕ ಡ್ಯುಯೆಲ್ ಟೋನ್, ಚಾಲಕ ಕೇಂದ್ರಿತ ವಿನ್ಯಾಸ
⦁    ಅತ್ಯಾಧುನಿಕ ವಿನ್ಯಾಸವು ವಿಶಿಷ್ಟ ಡ್ಯುಯೆಲ್ ಟೋನ್ ಹೊರಾಂಗಣ ವಿನ್ಯಾಸ ಹೊಂದಿದ್ದು, ಇದು ವಾಹನವನ್ನು ಎದ್ದು ಕಾಣುವಂತೆ ಮಾಡುತ್ತದೆ.
⦁    ತುಕ್ಕುರಹಿತ, ಮುರಿತ ನಿರೋಧಕ, ಮಾಡ್ಯುಲರ್ ಎಸ್‍ಎಂಸಿ ಪ್ಯಾನಲ್‍ಗಳು ಉತ್ತಮ ಬಾಳಿಕೆಯನ್ನು, ದುರಸ್ತಿ ಮತ್ತು ಬದಲಾವಣೆಯ ಸಮಸ್ಯೆ ಇಲ್ಲದಂತೆ ಮಾಡುತ್ತದೆ.
⦁    ಆಕರ್ಷಕವಾಗಿ ವಿನ್ಯಾಸಗೊಳಿಸಿದ ಚಾಲಕ ಕ್ಯಾಬಿನ್ ಮತ್ತು ಆಸನದಿಂದ ಹೆಚ್ಚು ಆರಾಮ ಪಡೆಯಿರಿ.

9. ಇತರ ಲಕ್ಷಣಗಳು: ಟೆಲಿಮ್ಯಾಟಿಕ್ಸ್ ಘಟಕ ಹಾಗೂ ಜಿಪಿಎಸ್, ವಿಂಡ್‍ಸ್ಕ್ರೀನ್ ಮತ್ತು ವೈಪಿಂಗ್ ಸಿಸ್ಟಂ, ಹೆಚ್ಚುವರಿ ಚಕ್ರಕ್ಕೆ ಅವಕಾಶ, ಚಾಲನಾ ಮಾದರಿಗಳು- ಎಫ್‍ಎನ್‍ಆರ್ (ಮುನ್ಪಡೆ, ನ್ಯೂಟ್ರಲ್, ಹಿಂಬದಿ), ಮಿತವೆಚ್ಚ ಮತ್ತು ಬೂಸ್ಟ್ ಮೋಡ್, ಲಾಕ್ ಮಾಡಬಹುದಾದ ಗ್ಲೋವ್ ಬಾಕ್ಸ್, 12 ವಿ ಸಾಕೆಟ್, 15 ಎಎಂಪಿ ಆಫ್‍ಬೋರ್ಡ್ ಚಾರ್ಜರ್, ಅಪಾಯ ಸೂಚಕ, ರಿವರ್ಸ್ ಬಝರ್.

10. ಅದ್ಭುತ ವಾರೆಂಟಿ ಮತ್ತು ಮಾರಾಟ ಬಳಿಕಸೇವೆ
⦁    ಟ್ರಿಯೊ ಝೋರ್ ನಿಗದಿತ ಮೂರು ವರ್ಷಗಳ/ 80 ಸಾವಿರ ಕಿಲೋಮೀಟರ್ ವಾರೆಂಟಿ ಹೊಂದಿದೆ.
⦁    ವಿಸ್ತøತವಾದ ಸೇವಾ ಜಾಲದಲ್ಲಿ 140ಕ್ಕೂ ಹೆಚ್ಚು ಡೀಲರ್‍ಶಿಪ್‍ಗಳು ಭಾರತದಾದ್ಯಂತ ಇದ್ದು, ಸಕಾಲಿಕ ಮಾರಾಟ ನಂತರದ ಸೇವೆಯನ್ನು ಖಾತರಿಪಡಿಸುತ್ತದೆ.

Follow Us:
Download App:
  • android
  • ios