ಮಹೀಂದ್ರ ಮೋಟಾರು ಕಂಪೆನಿ ಇದೀಗ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾಗಿದೆ. ಈ ಮೂಲಕ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ವಿಶೇಷತೆ, ಬೆಲೆ ಕುರಿತು ಮಾಹಿತಿ ಇಲ್ಲಿದೆ. 

ಮುಂಬೈ(ನ.15): ಮಹೀಂದ್ರ ಸಂಸ್ಥೆ ಶೀಘ್ರದಲ್ಲೇ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಈ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಹೀಂದ್ರ ಎಲ್ಲಾ ತಯಾರಿ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹೀಂದ್ರ ಸ್ಟಾಂಡರ್ಸ್ KUV100 ಕಾರನ್ನೇ ಹೋಲುವ ನೂತನ KUV100 ಎಲೆಕ್ಟ್ರಿಕ್ ಕಾರು ಕೆಲ ಬದಲಾವಣೆಗಳನ್ನ ಮಾಡಿದೆ. ಮುಂಭಾದ ಗ್ರಿಲ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್ಸ್ ಸೇರಿದಂತೆ ಹೊರ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ಕಾರಿಗೆ ತಕ್ಕ ಚೇಂಜಸ್ ಮಾಡಲಾಗಿದೆ.

2019ರಲ್ಲಿ ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ ಎಂದು ಮಹೀಂದ್ರ ವ್ಯವಸ್ಥಾಪಕ ನಿರ್ದೇಶಕ ಪವನ್ ಗೊಯೆಂಕಾ ಹೇಳಿದ್ದಾರೆ. ಮಹೀಂದ್ರ KUV100 ಸ್ಟಾಂಡರ್ಡ್ ಕಾರಿನ ಬೆಲೆ 4.68 ಲಕ್ಷದಿಂದ 7.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ಬೆಲೆ 8 ರಿಂದ 10ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.