ನವದೆಹಲಿ(ಏ.19): ಫೋರ್ಡ್ ಕಾರು ಕಂಪನಿ ಇದೀಗ ಭಾರತದಲ್ಲಿ ಮಹೀಂದ್ರ ಜೊತೆ ಕೈಜೋಡಿಸಿದೆ. ಇದೀಗ ಫೋರ್ಡ್ ಹಾಗೂ ಮಹೀಂದ್ರ ನೂತನ ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲಿದೆ. ಈ ಮೂಲಕ  ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ಮಾರುಕಟ್ಟೆಗೆ ಬಿಡಲು ಫೋರ್ಡ್ ಹಾಗೂ ಮಹೀಂದ್ರ ಅತೀ ದೊಡ್ಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಆಕರ್ಷಕ ಲುಕ್, ಕಡಿಮೆ ಬೆಲೆ- ಹ್ಯುಂಡೈ ವೆನ್ಯು SUV ಕಾರು ಅನಾವರಣ!

SUV ಕಾರುಗಳಲ್ಲಿ ಮಹೀಂದ್ರ ಪ್ರಾಬಲ್ಯ ಹೊಂದಿದೆ. ಇದೀಗ ಫೋರ್ಡ್ ತಂತ್ರಜ್ಞಾನ ಹಾಗೂ ಮಹೀಂದ್ರ  ಹೊರ ಹಾಗೂ ಒಳ ವಿನ್ಯಾಸದೊಂದಿದೆ ಹೊಸ ಕಾರು ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲಿದೆ. ಬಿಳಿಕ ಜೀಪ್ ಕಂಪಾಸ್ ಪ್ರತಿಸ್ಪರ್ಧಿ SUV ಕಾರು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕ್ವಿಡ್ To ಟ್ರೈಬರ್ MPV: ಬಿಡುಗಡೆಯಾಗಲಿದೆ ಕಡಿಮೆ ಬೆಲೆಯ 5 ರೆನಾಲ್ಟ್ ಕಾರು!

2020ರಲ್ಲಿ ನೂತನ ಫೋರ್ಡ್ ಹಾಗೂ ಮಹೀಂದ್ರ ಕಾರು ಬಿಡುಗಡೆಯಾಗಲಿದೆ.  ನೂತನ ಕಾರು 2.0 ಡೀಸೆಲ್ ಎಂಜಿನ್ ಹೊಂದಿದ್ದು,  180hp ಪವರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು BS-VI ಎಮಿಶನ್ ನಿಯಮ ಕೂಡ ಪಾಲಿಸಲಿದೆ. ಇದರ ಬೆಲೆ ಹಾಗೂ ಇತರ ಮಾಹಿತಿಯನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ.