ಆಕರ್ಷಕ ಲುಕ್, ಕಡಿಮೆ ಬೆಲೆ- ಹ್ಯುಂಡೈ ವೆನ್ಯು SUV ಕಾರು ಅನಾವರಣ!

ಹ್ಯುಂಡೈ ವೆನ್ಯೂ SUV ಕಾರು ಅನಾವರಣಗೊಂಡಿದೆ. ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ವೆನ್ಯೂ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.

Maruti Brezza competitor Hyundai venue compact SUV car unveiled in India

ನವದೆಹಲಿ(ಏ.18): ಹ್ಯುಂಡೈ ಕ್ರೆಟಾ SUV ಕಾರು ಭಾರತೀಯ ಕಾರು ಪ್ರಿಯರನ್ನು ಮೋಡಿ ಮಾಡಿದೆ. ಇದೀಗ ಹ್ಯುಂಡೈ ನೂತನ ವೆನ್ಯು SUV ಕಾರು ಅನಾವರಣ ಮಾಡಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಹ್ಯುಂಡೈ ವೆನ್ಯೂ ಅನಾವರಣಗೊಂಡಿದೆ.

Maruti Brezza competitor Hyundai venue compact SUV car unveiled in India

ಇದನ್ನೂ ಓದಿ: ಮಾರ್ಚ್‌ನಲ್ಲಿ ಮಾರುತಿಗೆ ಹೊಡೆತ- ಪ್ರಗತಿಯತ್ತ ಹೊಂಡಾ, ಮಹೀಂದ್ರ, ಟೊಯೊಟ!

ನೂತನ್ ಹ್ಯುಂಡೈ ವೆನ್ಯೂ ಕಾರು, ಈ ಹಿಂದಿನ ಹ್ಯುಂಡೈ ಕಾರುಗಳಿಗಿಂತ ಭಿನ್ನವಾಗಿದೆ. ಹೊಸ ವಿನ್ಯಾಸ, ಮುಂಭಾಗದ ಗ್ರಿಲ್, ಕ್ರೋಮ್ ಲೈನ್ ಮೆಶ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.  ನೂತನ ಕಾರಿನ ಬೆಲೆ 8 ರಿಂದ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಂದಿನ ತಿಂಗಳ ಆರಂಭದಲ್ಲಿ ಬೆಲೆ ಹಾಗೂ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ.

Maruti Brezza competitor Hyundai venue compact SUV car unveiled in India

ಇದನ್ನೂ ಓದಿ: ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಬಿಡುಗಡೆಗೆ- ಬೆಲೆ ಎಷ್ಟು?

ಹ್ಯುಂಡೈ  ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಪೆಟ್ರೋಲ್ ಟರ್ಬೋ ಹಾಗೂ 1.4 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಕಾರು 83hp ಪವರ್ ಹಾಗೂ 115Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಇನ್ನು  1.0-ಲೀಟರ್ ಪೆಟ್ರೋಲ್ ಕಾರು, 2 ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಟರ್ಬೋ ಹೊಂದಿದ್ದು, 120hp ಪವರ್ ಹಾಗೂ 172Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು  1.4  ಡೀಸೆಲ್  ಕಾರು 90hp ಪವರ್ 220Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

Maruti Brezza competitor Hyundai venue compact SUV car unveiled in India
 

Latest Videos
Follow Us:
Download App:
  • android
  • ios