Asianet Suvarna News Asianet Suvarna News

ಮಹೀಂದ್ರ ಅಲ್ಟುರಾಸ್ G4 ವೀಡಿಯೋ ಟೀಸರ್ ಬಿಡುಗಡೆ!

ಟೊಯೊಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ಅಲ್ಟುರಾಸ್ ರಸ್ತೆಗಳಿಯುತ್ತಿದೆ.  ಬಿಡುಗಡೆಗೂ ಮುನ್ನ ಮಹೀಂದ್ರ ಮೋಟಾರ್ಸ್ ಅಲ್ಟುರಾಸ್ ಕಾರಿನ ವೀಡಿಯೋ ಟೀಸರ್ ಬಿಡುಗಡೆ ಮಾಡಿದೆ.

Mahindra Alturas G4 official Video released ahhead of launch
Author
Bengaluru, First Published Nov 17, 2018, 7:00 PM IST

ಮುಂಬೈ(ನ.17):ಟೊಯೊಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಗೊಳ್ಳುತ್ತಿರುವ ಮಹೀಂದ್ರ ಅಲ್ಟುರಾಸ್ G4 ಕಾರು ಇದೇ ನವೆಂಬರ್ 24ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಕಾರಿನ್ ಬುಕಿಂಗ್ ಆರಂಭಗೊಂಡಿದೆ. ಇದೀಗ ಮಹೀಂದ್ರ ಮೋಟಾರ್ಸ್ ನೂತನ ಅಲ್ಟುರಾಸ್ G4 ಕಾರಿನ ವೀಡಿಯೋ ಟೀಸರ್ ಬಿಡುದಡೆ ಮಾಡಿದೆ.

ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೆವರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ ಕಂಪನಿಯ ಈ ಕಾರು 25 ಲಕ್ಷ  ರೂಪಾಯಿ ಎಂದು ಅಂದಾಜಿಸಲಾಗಿದೆ.  2.2 ಲೀಟರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 187 bhp ಹಾಗೂ 420nm ಟಾರ್ಕ್ ಉತ್ಪಾದಿಸಲಿದೆ.

7  ಸ್ಪೀಡ್ ಗೇರ್ ಹಾಗೂ AMT ಆಯ್ಕೆ ಕೂಡ ಹೊಂದಿದೆ. ಈ ಮೂಲಕ  ಮಹೀಂದ್ರ 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್  ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 9 ಏರ್‌ಬ್ಯಾಗ್, ABS+EBD, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

ಕಳೆದವಾರ ಮಹೀಂದ್ರ ಅಲ್ಟುರಾಸ್ G4 ಕಾರಿನ ಬುಕಿಂಗ್ ಆರಂಭಗೊಂಡಿದೆ. 50,000 ರೂಪಾಯಿ ಪಾವತಿಸಿ  ಅಲ್ಟುರಾಸ್ G4 ಕಾರನ್ನ ಬಕ್ ಮಾಡಬಹುದಾಗಿದೆ. ಮಹೀಂದ್ರ ಶೋ ರೂಂ ಅಥವಾ ಮಹೀಂದ್ರ ವೆಬ್‌ಸೈಟ್ ಮೂಲಕ ಅಲ್ಟುರಾಸ್ G4 ಕಾರನ್ನ ಬುಕ್ ಮಾಡಲು ಅವಕಾಶವಿದೆ.

Follow Us:
Download App:
  • android
  • ios