ನವದೆಹಲಿ(ಜ.13): ಮೇಡ್ ಇನ್ ಇಂಡಿಯಾ  ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಲಂಡನ್ ಮೂಲದ ಲೌರೆಟಿ ಕಾರು ಕಂಪೆನಿ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಭಾರತದಲ್ಲೇ ಕಾರು ಘಟಕ ಸ್ಥಾಪಿಸಿ ಉತ್ಕೃಷ್ಟ ದರ್ಜೆಯ ಕಾರುಗಳನ್ನ ಮಾರುಟ್ಟೆಗೆ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

ಲೌರೆತಿ ಡಿಯೊನ್X SUV ಕಾರು ಭಾರತ ರಸ್ತೆಗಳಲ್ಲಿ ರಾರಾಜಿಸಲಿದೆ. ಇದರ ವಿಶೇಷತೆ ಎಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 540 ಕೀ.ಮಿ ಪ್ರಯಾಣ ಮಾಡಬಹುದಾಗಿದೆ. ಲಂಡನ್‌ನಲ್ಲಿ ರೋಡ್ ಟೆಸ್ಟ್ ಯಶಸ್ವಿಯಾಗಿ ಮುಗಿಸಿರುವ ಈ ಕಾರು ಇದೀಗ ಭಾರತದಲ್ಲಿ ಲೇಹ್ ನಿಂದ ಕನ್ಯಾಕುಮಾರಿವರೆಗೆ ರೋಡ್ ಟೆಸ್ಟ್ ನಡೆಸಲು ಮುಂದಾಗಿದೆ.

ಇದನ್ನೂ ಓದಿ: ನೂತನ ಬಜಾಜ್ ಅವೆಂಜರ್ 220 ABS ಬೈಕ್ ಬೆಲೆ ಬಹಿರಂಗ!

ಬರೋಬ್ಬರಿ 6000 ಕೀ.ಮಿ ರೋಡ್ ಟೆಸ್ಟ್ ಮೂಲಕ ಭಾರತದ ವಿವಿದ ರಸ್ತೆಗಳು ಹಾಗೂ ಕಂಡೀಷನ್‌ನಲ್ಲಿ ಕಾರು ಯಾವ ರೀತಿ ಹೊಂದಿಕೊಳ್ಳಲಿದೆ ಅನ್ನೋದನ್ನೂ ಪರೀಕ್ಷೆ ನಡೆಸಲು ಮುಂದಾಗಿದೆ. ಲೇಹ್‌ನಿಂದ ಕನ್ಯಾಕುಮಾರಿ ಪ್ರಯಾಣಕ್ಕೆ 12 ಬಾರಿ ಫುಲ್ ಚಾರ್ಜ್ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

ನೂತನ ಎಲೆಕ್ಟ್ರಿಕ್ SUV ಕಾರಿನ ಬೆಲೆ 40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಿ ಲೌರೆತಿ ಡಿಯೊನ್X SUV ಕಾರು ಬಿಡುಗಡೆಯಾಗಲಿದೆ.  ಪುದುಚೇರಿಯಲ್ಲಿ ಲೌರೆತಿ ಕಂಪನಿ ಕಾರು ಘಟಕ ಆರಂಭವಾಗುತ್ತಿದೆ. ಬರೋಬ್ಬರಿ 2577 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ತಲೆ ಎತ್ತಲಿದೆ. ಗರಿಷ್ಠ 20,000 ಕಾರಗಳನ್ನ ಪ್ರತಿ ವರ್ಷ ನಿರ್ಮಾಣ ಮಾಡಲು ಕಂಪೆನಿ ಯೋಜನೆ ಹಾಕಿಕೊಂಡಿದೆ.