Asianet Suvarna News

ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

ಬ್ರೇಕ್ ಫೇಲ್ ಆದಾಗ ಕಾರು ಅಥವಾ ವಾಹನ ನಿಯಂತ್ರಣ ಸಿಗುವುದಿಲ್ಲ. ಅಪಾಯವೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಕಾರನ್ನ ಕೇವಲ 8 ಸೆಕುಂಡ್‌ಗಳಲ್ಲಿ ನಿಲ್ಲಿಸಲು ಸಾಧ್ಯವಿದೆ. ಕಾರಿಗೆ ಅಥವಾ ಕಾರಿನೊಳಗಿರುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಕಾರನ್ನ ನಿಲ್ಲಿಸಲು ಸಾಧ್ಯವಿದೆ. ಇಲ್ಲಿದೆ ಟಿಪ್ಸ್.

How to stop car within 8 seconds even car break fail
Author
Bengaluru, First Published Jan 13, 2019, 12:00 PM IST
  • Facebook
  • Twitter
  • Whatsapp

ಬೆಂಗಳೂರು(ಜ.13): ವಾಹನಗಳಲ್ಲಿ ಬ್ರೇಕ್ ಫೇಲ್ ಅತ್ಯಂತ ಅಪಾಯಕಾರಿ. ಸದ್ಯ ವಾಹನದಲ್ಲಿರುವ ಆಧುನಿಕ ತಂತ್ರಜ್ಞಾನಗಳಿಂದ ಬ್ರೇಕ್ ಫೇಲ್ ಸಮಸ್ಯೆಗಳು ಕಾಣಿಸಿಕೊಳ್ಳುವುದು ತೀರಾ ವಿರಳ. ಆದರೆ ಕೆಲವು ಬಾರಿ ಈ ಸಮಸ್ಯೆಗಳು ಎದುರಾದಾಗ ಆತಂಕಗೊಳ್ಳುವುದು ಸಹಜ. ಹೀಗಾಗಿ ಕಾರಿನ ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕುಂಡ್‌ಗಳಲ್ಲಿ ಕಾರು ನಿಲ್ಲಿಸಲು ಸಾಧ್ಯವಿದೆ.

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ಎಂಜಿನ್ ಬ್ರೇಕ್ ಹಾಗೂ ಕಾರ್ ಹ್ಯಾಂಡ್ ಬ್ರೇಕ್ ಮೂಲಕ ಕಾರು ನಿಲ್ಲಿಸಲು ಸಾಧ್ಯವಿದೆ. ಕಾರಿನ ಬ್ರೇಕ್ ಫೇಲ್ ಆದಾಗ ಎಂಜಿನ್ ಬ್ರೇಕ್ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಕಾರಿನ ಹ್ಯಾಂಡ್ ಬ್ರೇಕ್ ಮೂಲಕ ಕಾರನ್ನ ನಿಲ್ಲಿಸಲು ಸಾಧ್ಯವಿದೆ. ಕಾರಿನ ಎಂಜಿನ್‌ಗೆ ಹೆಚ್ಚಿನ ಯಾವುದೇ ಸಮಸ್ಯೆ ಎದುರಾಗದಂತೆ ಕಾರು ನಿಲ್ಲಿಸಲು ಸಾಧ್ಯವಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?

ಕಾರು 80ಕಿ.ಮೀ ವೇಗದಲ್ಲಿರುವಾಗ ಕಾರಿನ ಬ್ರೇಕ್ ಫೇಲ್ ಆಗಿದೆ ಎಂದಾಗ ಗಾಬರಿಗೊಳ್ಳುವ ಅಗತ್ಯವಿಲ್ಲ. ಎರಡು ಬಾರಿ ಬ್ರೇಕ್ ಪೆಡಲ್ ಪ್ರೆಸ್ ಮಾಡಿ. ಕೆಲವೊಮ್ಮೆ ಬ್ರೇಕ್ ಸರಿಹೋಗುವ ಸಾಧ್ಯತೆ ಇದೆ. ಇಷ್ಟಾದರೂ ಬ್ರೇಕ್ ಸಿಗದಿದ್ದಾಗ ತಕ್ಷಣ ಕಾರಿನ ಹ್ಯಾಂಡ್ ಬ್ರೇಕ್ ಅರ್ಧ ಏರಿಸಿಬೇಕು. ನಿಧಾನವಾಗಿ ಏರಿಸಿ ಅರ್ಧ ಅಪ್ಲೈ ಮಾಡಬೇಕು. ತಕ್ಷಣವೇ ಕಾರಿನ ವೇಗ ನಿಯಂತ್ರಣ ಬರುತ್ತದೆ.

ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

ಕಾರಿನ ವೇಗ ಕಡಿಮೆಯಾಗುತ್ತಿದ್ದಂತೆ ಗೇರ್ ಶಿಫ್ಟ್ ಮಾಡಿ. ನೀವು ಟಾಪ್ ಗೇರ್‌ನಿಂದ 3,2 ಗೇರ್‌ಗೆ ಶಿಫ್ಟ್ ಮಾಡಿ. ಈ ವೇಳೆ ಕಾರು ಜರ್ಕ್ ಅನುಭವ ನೀಡಲಿದೆ. ಇನ್ನು ಹ್ಯಾಂಡ್ ಬ್ರೇಕ್ ಫುಲ್ ಅಪ್ಲೈ ಮಾಡಿದಾಗ ಕಾರು ಸಂಪೂರ್ಣವಾಗಿ ನಿಲ್ಲಲಿದೆ. ಇದರಿಂದ ಕಾರಿಗಾಗಲಿ, ಎಂಜಿನ್‌ಗಾಗಲಿ ಯಾವುದೇ ಹಾನಿಯಾಗಲ್ಲ. ನಮ್ಮ ಕಳಕಳಿ ಯಾರ ಕಾರೂ ಅಥವಾ ವಾಹನ ಬ್ರೇಕ್ ಫೇಲ್ ಆಗದಿರಲಿ.
 

Follow Us:
Download App:
  • android
  • ios