ನವದೆಹಲಿ(ಡಿ.29): ಇಟೆಲಿ ಮೂಲದ ಪಿಯಾಜಿಯೊ ಕಂಪೆನಿ ಭಾರತದಲ್ಲಿ ತನ್ನ ಸ್ಕೂಟರ್ ಮಾರಾಟ ಅಭಿವೃದ್ದಿ ಪಡಿಸಲು ಮುಂದಾಗಿದೆ.  160 ಸಿಸಿ ಸ್ಕೂಟರ್ ಮೂಲಕ ಜನಪ್ರಿಯರಾಗಿದ್ದ ಎಪ್ರಿಲಿಯಾ ಇದೀಗ 125 ಸಿಸಿ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ.  ಹೊಸ ವರ್ಷದಲ್ಲಿ ನೂತನ ಸ್ಕೂಟರ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?

ಹೊಸ ಮಾಡೆಲ್‌ನಲ್ಲಿ ಎಪ್ರಿಲಿಯಾ 125 ಸ್ಕೂಟರ್ ಬಿಡುಗಡೆಯಾಗಲಿದೆ. ನೂತನ ಸ್ಕೂಟರ್‌ಗೆ ಎಪ್ರಿಲಿಯಾ ಕಂಫರ್ಟ್ ಎಂದು ಹೆಸರಿಡಲಾಗಿದೆ. ಹೆಚ್ಚು ಬೂಟ್ ಸ್ಪೇಸ್, ಸ್ಟೋರೇಜ್, ಗ್ರೌಂಡ್ ಕ್ಲೀಯರೆನ್ಸ್ ಸೇರಿದಂತೆ ಇತರ ಸ್ಕೂಟರ್‌ಗಳಿಂತ ಭಿನ್ನವಾಗಿ ಹೊರತರಲು ಪ್ಲಾನ್ ಮಾಡಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ನೂತನ ಎಪ್ರಿಲಿಯಾ 125 ಸ್ಕೂಟರ್ ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್ ಎಂಜಿನ್ ಹೊಂದಿದ್ದು, 9.51 bhp ಪವರ್ ಹಾಗೂ 9.9nm ಟಾರ್ಕ್ ಉತ್ವಾದಿಸಲಿದೆ. ಇದರ ಬೆಲೆ 80,000 ರಿಂದ 90,000 ಸಾವಿರ ರೂಪಾಯಿ(ಆನ್ ರೋಡ್) ಎಂದು ಅಂದಾಜಿಸಲಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: