ದೆಹಲಿ(ಸೆ.04): ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದೆ. ಮೆಟ್ರೋ ಸ್ಟೇಶನ್‌ಗೆ ತೆರಳಲು, ಮೆಟ್ರೋ ಇಳಿದ ಬಳಿಕ ಮನೆ ತಲಪಲು ಆಟೋ, ಟ್ಯಾಕ್ಸಿ‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಹೊಸ ಸೌಲಭ್ಯ ಜಾರಿಯಾಗಿದೆ.  ಕಡಿಮೆ ದರ, ಪರಿಸರ ಮಾಲಿನ್ಯ ರಹಿತ ಎಲೆಕ್ಟ್ರಿಕ್ ಬೈಕ್ ಇದೀಗ ಮೆಟ್ರೋ ಪ್ರಯಾಣಿಕರಿಗಾಗಿ ಸ್ಟೇಶನ್‌ಗಳಲ್ಲಿ ಇಡಲಾಗಿದೆ.

ಇದನ್ನೂ ಓದಿ: 2999 ರೂ ಕಂತು ಪಾವತಿಸಿ; ರಿವೋಲ್ಟ್ RV ಎಲೆಕ್ಟ್ರಿಕ್ ಬೈಕ್ ಖರೀದಿಸಿ!

ಈ ಸೌಲಭ್ಯ ಸದ್ಯ ದೆಹಲಿ ಮೆಟ್ರೋದಲ್ಲಿ ಜಾರಿಯಾಗಿದೆ. ಮೆಟ್ರೋ ಪ್ರಯಾಣಿಕರು ತಮ್ಮ ಮನೆಗೆ ತೆರಳಲು, ಅಥವಾ ಮನೆಯಿಂದ ಮೆಟ್ರೋ, ಕಚೇರಿಗೆ ತೆರಳಲು ಇ ಬೈಕ್ ಸೌಲಭ್ಯ ನೀಡಲಾಗಿದೆ. ವಿಶೇಷ ಅಂದರೆ ಬಂಗಳೂರು ಮೂಲದ ಬೈಕ್ ಶೇರಿಂಗ್ ಆ್ಯಪ್ ಯುಲು ಹೊಸ ಸೇವೆಯನ್ನು ದೆಹಲಿಯಲ್ಲಿ ಆರಂಭಿಸಿದೆ.

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಬೈಕ್ ಅನಾವರಣ; EV ಕಾರಿಗಿಂತ ದುಬಾರಿ!

ಸದ್ಯ 250 ಇ ಬೈಕ್ ಸೇವೆ ಲಭ್ಯವಿದೆ. ಶೀಘ್ರದಲ್ಲೇ 5000 ಇ ಬೈಕ್ ಸೇವೆ ಜಾರಿಗೊಳಿಸಲು ಯುಲು ಕಂಪನಿ ನಿರ್ಧರಿಸಿದೆ. 2020ರ ವೇಳೆ 25,000 ಇ ಬೈಕ್ ಸೇವೆಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಯುಲು ಹೇಳಿದೆ. ಬೆಂಗಳೂರಲ್ಲೂ ಇ ಬೈಕ್ ಸೇವೆ ಆರಂಭಿಸುವು ಕುರಿತು ಯುಲು ಚಿಂತನೆ ನಡೆಸಿದೆ. 
 

ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ